ಚಿತ್ರದುರ್ಗ: ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಕುರುಡು ಕುದುರೆಗಳಂತೆ ಕಣ್ಣಿಗೆ ಪಟ್ಟಿ ಕಟ್ಕೊಂಡು ರಾಜಕಾರಣ ಮಾಡುತ್ತಿದ್ದಾರೆಂದು ಸಚಿವ ಶ್ರೀರಾಮುಲು ಚಿತ್ರದುರ್ಗದಲ್ಲಿ ಹೇಳಿದ್ದಾರೆ.
ಚಿತ್ರದುರ್ಗ ವಿಧಾನಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೆ.ಎಸ್ ನವೀನ್ ನಾಮಪತ್ರ ಸಲ್ಲಿಸಿದಬಳಿಕ ಮಾತನಾಡಿದ ಅವರು, ಕ್ಷೇತ್ರದ ಜನರ ಉತ್ಸಾಹ ನೋಡಿದರೆ ಬಿಜೆಪಿಗೆ ಬಹುಮತ ಬರಲಿದೆ. ಅಲ್ಲದೇ 25 ಸ್ಥಾನಗಳಲ್ಲಿ 14 ಸ್ಥಾನ ಗೆಲ್ಲುವ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರು ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸತ್ಯಕ್ಕೆ ದೂರವಾದ ವಿಚಾರ ಮಾತನಾಡಬಾರದು. ಆದರೆ ಸುಳ್ಳನ್ನು ಸತ್ಯ ಮಾಡಲು ಕೈ ನಾಯಕರು ನಿಂತಿದ್ದಾರೆ. ಹಾಗೆಯೇ ಡಿಕೆಶಿ, ಸಿದ್ದರಾಮಯ್ಯ ಕುರುಡು ಕುದುರೆಗಳಂತೆ ಕಣ್ಣಿಗೆ ಪಟ್ಟಿ ಕಟ್ಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಕುರುಡು ಕುದುರೆಗಳಿಗೆ ಒಬ್ಬರನ್ನು ನೋಡಿದರೆ ಒಬ್ಬರಿಗೆ ಆಗಲ್ಲ. ಅಲ್ಲದೇ ಕುರುಡು ಕುದುರೆಗಳಲ್ಲೂ ಮುಂದಿನ ಸಿಎಂ ಯಾರು ಅಂತ ಪೈಪೋಟಿ ಕೂಡ ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಬರ್ಬಾದ್ ಆಗಿ ಹೋಗಿದೆ: ಅಶ್ವತ್ಥ್ ನಾರಾಯಣ್
ಡಿಕೆಶಿ, ಸಿದ್ದರಾಮಯ್ಯಗೆ ಶ್ರೀ ರಾಮುಲು ಸವಾಲು ಹಾಕಿದ್ದು, 2023ಕ್ಕೆ ಕಾಂಗ್ರೆಸ್ ಸರ್ಕಾರ ಅಂತ ಹೇಳಿಕೊಳ್ಳುತ್ತೀರುವ ಕೈ ನಾಯಕರು ಈ ಚುನಾವಣೆಯಲ್ಲಿ ಗೆಲ್ಲಲಿ ಆಗ ಭವಿಷ್ಯದ ಚುನಾವಣೆ ಬಗ್ಗೆ ಜನರು ತೀರ್ಮಾನಿಸುತ್ತಾರೆ. ಜೊತೆಗೆ ಸತತ ಎರಡು ಬಾರಿ ಇದೇ ಕ್ಷೇತ್ರದಲ್ಲಿ ಸೋತಿರುವ ಬಿಜೆಪಿ ಅಭ್ಯರ್ಥಿ ನವೀನ್ ಎರಡು ಬಾರಿ ಅನುಕಂಪದ ಅಲೆಯಿದೆ. ಹೀಗಾಗಿ ಈ ಬಾರಿ ಬಿಜೆಪಿ ಗೆಲ್ಲಲಿದೆ. ಈ ವೇಳೆ ಅವರೊಂದಿಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಮುರುಳಿ ಇದ್ದರು. ಇದನ್ನೂ ಓದಿ: ಕಾಂಗ್ರೆಸ್‍ನ 25 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ: ಅರವಿಂದ್ ಕೇಜ್ರಿವಾಲ್