ದೆಹಲಿಯಲ್ಲಿ ಡಿಸಿಎಂ ಪಟ್ಟಕ್ಕಾಗಿ ಶ್ರೀರಾಮುಲು ಲಾಬಿ

Public TV
1 Min Read
SRIRAMULU

ನವದೆಹಲಿ: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಚರ್ಚೆ ಮತ್ತೆ ಜೋರಾಗಿದೆ. ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರವಾಗಿ ಚರ್ಚಿಸಲು ದೆಹಲಿಗೆ ತೆರಳಲಿದ್ದು, ಸಿಎಂಗೂ ಮುನ್ನ ದೆಹಲಿಯಲ್ಲಿ ಮಂತ್ರಿ ಸ್ಥಾನಕ್ಕೆ ಲಾಬಿ ನಡೆದಿದೆ.

ಹಾಲಿ ಸಚಿವ ಬಿ.ಶ್ರೀರಾಮುಲು ಈಗ ದೆಹಲಿಗೆ ಭೇಟಿ ನೀಡಿದ್ದಾರೆ. ಹೈಕಮಾಂಡ್ ನಾಯಕರು ಮತ್ತು ಅವರ ಆಪ್ತರ ಮೂಲಕ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಬಿ. ಶ್ರೀರಾಮುಲು ಡಿಸಿಎಂ ಪಟ್ಟಕ್ಕಾಗಿ ಲಾಬಿ ಆರಂಭಿಸಿದ್ದಾರೆ. ಇದನ್ನೂ ಓದಿ: ಮೋದಿಯವರು ದೇವರ ಸ್ವರೂಪ: ಶಿವರಾಜ್ ಸಿಂಗ್ ಚೌಹಾಣ್

ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಈ ಬಾರಿ ಕಡೆಯದಾಗಿ ಸಂಪುಟ ಪುನಾರಚನೆಗೊಳ್ಳುತ್ತಿದೆ. ಈ ಹಿನ್ನಲೆ ಕಡೆಯದಾಗಿ ಡಿಸಿಎಂ ಹುದ್ದೆ ನೀಡುವಂತೆ ರಾಮುಲು ಮನವಿ ಮಾಡುತ್ತಿದ್ದಾರಂತೆ. ಕಳೆದ ಬಾರಿಯ ಚುನಾವಣೆಯಲ್ಲಿ ಡಿಸಿಎಂ ಮಾಡುವುದಾಗಿ ಹೈಕಮಾಂಡ್ ಘೋಷಿಸಿತ್ತು. ಚುನಾವಣೆ ಹತ್ತಿರ ಇರುವ ಹಿನ್ನಲೆ ಕಡೆಯ ಅವಕಾಶ ನೀಡಬೇಕು ಎಂದು ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಜೆಟ್‍ನಲ್ಲಿ ಮುಂದಿನ 25 ವರ್ಷಗಳ ಮುಂದಾಲೋಚನೆಯಿದೆ: ಬಿ.ಸಿ.ಪಾಟೀಲ್

bjp meeting2

ಹಾಲಿ ಖಾತೆಯ ಬಗ್ಗೆಯೂ ಶ್ರೀರಾಮುಲು ತೃಪ್ತರಾಗಿಲ್ಲ ಹೀಗಾಗಿ ಉಪಮುಖಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಲ್ಲಿ ಸಂಪುಟ ಪುನಾರಚನೆ ವೇಳೆ ಪ್ರಭಾವಿ ಖಾತೆ ಸಿಗಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

Share This Article