ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್‌, ಖುಷ್ಬು

Public TV
Rajanikanth

ಚೆನ್ನೈ: ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಬಿ.ಸರೋಜಾ ದೇವಿ (B Saroja Devi) ಅವರು ಇಂದು ವಿಧಿವಶವಾಗಿದ್ದಾರೆ. ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಭಾಗ್ಯವಂತರು, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಕನ್ನಡ ಚಿತ್ರರಂಗದ ಕಿತ್ತೂರು ರಾಣಿ ಚೆನ್ನಮ್ಮ ಅಂತಲೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ಸರೋಜಾದೇವಿ ಅವರು ತಮ್ಮ ನಿವಾಸದಲ್ಲಿ ಉಸಿರು ಚೆಲ್ಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಸಿನಿ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.

Khushbu 1

ಕಂಬನಿ ಮಿಡಿದ ತಲೈವಾ
ಅದರಂತೆ ತಮಿಳಿನ ಖ್ಯಾತ ನಟ ತಲೈವಾ ರಜನಿಕಾಂತ್‌ (Rajinikanth) ಸಹ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ʻಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಮಹಾನ್ ನಟಿ ಸರೋಜಾ ದೇವಿ ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಒಂದು ಸುವರ್ಣ ಸಿನಿಮಾ ಯುಗ ಅಂತ್ಯಗೊಂಡಿದೆʼ ಅಂತ ಭಾವುಕ ಸಂದೇಶವೊಂದನ್ನ ಫೋಟೋ ಜೊತೆಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾಳೆ ಚನ್ನಪಟ್ಟಣದ ದಶಾವರದಲ್ಲಿ ಬಿ.ಸರೋಜಾದೇವಿ ಅಂತ್ಯಕ್ರಿಯೆ

ಸರೋಜಾದೇವಿ ಅಮ್ಮ ಎಲ್ಲಾ ಕಾಲಕ್ಕೂ ಶ್ರೇಷ್ಠ
ಬಹುಭಾಷಾ ನಟಿ ಖುಷ್ಬು ಸುಂದರ್‌ (Khushbu Sundar) ಕೂಡ ಸರೋಜಾ ದೇವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ʻಸರೋಜಾದೇವಿ ಅಮ್ಮ ಎಲ್ಲಾ ಕಾಲದಲ್ಲೂ ಶ್ರೇಷ್ಠರು. ಇದನ್ನೂ ಓದಿ: ಬಿ.ಸರೋಜಾದೇವಿಯವರ ಸಾವಿನಿಂದ ಕಲಾಜಗತ್ತು ಬಡವಾಗಿದೆ – ಸಿಎಂ ಸಂತಾಪ

ದಕ್ಷಿಣದಲ್ಲಿ ಅವರಷ್ಟು ಹೆಸರು, ಖ್ಯಾತಿ ಪಡೆದ ಮಹಿಳಾ ನಟಿ ಇನ್ನೊಬ್ಬರಿಲ್ಲ. ಅವರು ನನ್ನ ಪ್ರೀತಿಯ ಮತ್ತು ಆರಾಧ್ಯ ದೈವವೂ ಕೂಡ ಹೌದು. ಅವರನ್ನು ಭೇಟಿಯಾಗದೇ ನನ್ನ ಬೆಂಗಳೂರಿಗೆ ಪ್ರವಾಸ ಅಪೂರ್ಣವಾಗಿತ್ತು. ಚೆನ್ನೈಗೆ ಬಂದಾಗೆಲ್ಲ ಅವರು ನನಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈಗ ಅವರನ್ನ ತುಂಬಾ ಮಿಸ್‌ ಮಾಡಿಕೊಳ್ತೀನಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.

Share This Article