DistrictsKarnatakaKodaguLatestMain Post

ಬಿಎಸ್‌ವೈ ರಾಜಕೀಯದಿಂದ ಹಿಂದೆ ಸರಿಯಲ್ಲ, ಅವರು ಆ ರೀತಿ ಹೇಳಿಲ್ಲ: ಬಿ.ಸಿ ನಾಗೇಶ್ ಸಮರ್ಥನೆ

Advertisements

ಮಡಿಕೇರಿ: ಯಡಿಯೂರಪ್ಪನವರು ಪವರ್ ಪಾಲಿಟಿಕ್ಸ್ನಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ ಅಷ್ಟೇ. ಆದರೆ ಮುಂದಿನ ಚುನಾವಣೆಯೂ ಅವರ ನಾಯಕತ್ವದಲ್ಲಿಯೇ ನಡೆಯುತ್ತದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸುತ್ತಿ ಪಕ್ಷ ಸಂಘಟನೆ ಮಾಡಲಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ. ಪಕ್ಷ ಯಾವತ್ತೂ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದೆ. ರಾಜ್ಯದಲ್ಲಿ ಒಂದು ಸೀಟಿನಿಂದ ಹಿಡಿದು ಈ ಮಟ್ಟಕ್ಕೆ ಪಕ್ಷವನ್ನು ಯಡಿಯೂರಪ್ಪನವರೇ ಬೆಳೆಸಿದ್ದಾರೆ. ಆದ್ದರಿಂದ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮರಳು ಮೂಟೆ ಅಳವಡಿಸಿದ ನಂತರ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಘು ವಾಹನ ಸಂಚಾರ: ಬಿ.ಸಿ.ನಾಗೇಶ್

ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ತಮ್ಮ ಕ್ಷೇತ್ರದಲ್ಲಿಯೇ ಸ್ಪರ್ಧೆ ಮಾಡಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ಅವರು ಶಿಕಾರಿಪುರದಲ್ಲೇ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಬಿಎಸ್‌ವೈ ಅವರು ಅದನ್ನು ಹೇಳಿಲ್ಲ. ಜನರು ಒತ್ತಾಯಿಸಿದ್ದಕ್ಕೆ ಆಯ್ತು ಎಂದು ಹೇಳಿದ್ದಾರೆ. ಜೊತೆಗೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಅಂತ ಹೇಳಿದ್ದಾರೆ ಎಂದು ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವೆಯ 18 ವಯಸ್ಸಿನ ಪುತ್ರಿ ಅಕ್ರಮ ಬಾರ್‌ ನಡೆಸುತ್ತಿದ್ದಾರೆಂದು ಆರೋಪ – ಕೈ ನಾಯಕರಿಗೆ ಸ್ಮೃತಿ ಇರಾನಿ ನೋಟಿಸ್‌

Live Tv

Leave a Reply

Your email address will not be published.

Back to top button