– ಹಿಂದೂ, ಮುಸ್ಲಿಮರು ಒಂದೇ ತಾಯಿಯಂತೆ ಬಾಳಬೇಕು
– ಮುಸ್ಲಿಮರು ನೆಮ್ಮದಿ ಗೌರವದಿಂದ ಬಾಳಬೇಕಿದೆ
ಬೆಂಗಳೂರು: ಹಿಂದೂ, ಮುಸ್ಲಿಮರು ಸಹೋದರರಂತೆ ಬಾಳಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಆದರೆ ಕೆಲವು ಕಿಡಿಗೇಡಿಗಳು ಸೌಹಾರ್ದತೆ ಕೆಡಿಸುವ ಕೆಲಸ ಮಾಡ್ತಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಹಿಂದೂ, ಮುಸ್ಲಿಮರು ಸಹೋದರರಂತೆ ಬಾಳಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಈಗಾಗಲೇ ಮುಖ್ಯಮಂತ್ರಿಗಳೂ ಕೂಡ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಸೌಹಾರ್ದತೆ ಕೆಡಿಸುವ ಕೆಲಸ ಮಾಡ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಿಎಂ ಕೊಟ್ಟಿದ್ದಾರೆ. ನಾನೂ ಕೂಡ ಅಂಥವರಿಗೆ ಕಿವಿ ಮಾತು ಹೇಳುತ್ತೇನೆ. ನಿಮ್ಮ ನಿಮ್ಮ ಕೆಲಸ ಮಾಡಿಕೊಂಡು ಹೋಗಿ ಯಾರೂ ರಾಜ್ಯದ ಸಾಮರಸ್ಯವನ್ನು ಕದಡಬೇಡಿ ಎಂದು ಮನವಿ ಮಾಡಿದ್ದಾರೆ.
Advertisement
Advertisement
ಹಿಂದೂ, ಮುಸ್ಲಿಮರು ಒಂದೇ ತಾಯಿಯಂತೆ ಬಾಳಬೇಕು. ಇನ್ಮುಂದೆಯಾದರೂ ಇದಕ್ಕೆಲ್ಲ ಅವಕಾಶ ಕೊಡದಿರಲಿ. ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯನ್ನು ಸಿಎಂ ಕೊಟ್ಟಿದ್ದಾರೆ. ಸರ್ಕಾರ ಇದನ್ನೆಲ್ಲ ಸಹಿಸೋದಿಲ್ಲ. ಮುಸ್ಲಿಮರು ನೆಮ್ಮದಿ ಗೌರವದಿಂದ ಬಾಳಬೇಕಿದೆ ಎಂದಿದ್ದಾರೆ.
Advertisement
Advertisement
ಪಕ್ಷ ಬಲಪಡಿಸಲು ನಾಳೆಯಿಂದ ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಕಾರ್ಯಕರ್ತರ ಜೊತೆಗೆ ಸಮಾಲೋಚನೆ ನಡೆಸ್ತೇವೆ. ಮುಂದಿನ ಚುನಾವಣೆಗೆ ಸಿದ್ಧತೆಗಾಗಿ ಈ ಪ್ರವಾಸವಾಗಿದ್ದು, ಇನ್ಮುಂದೆ ನಿರಂತರವಾಗಿ ರಾಜ್ಯ ಪ್ರವಾಸಗಳು ನಡೆಯುತ್ತವೆ. ಇದನ್ನೂ ಓದಿ: ಮುಸ್ಲಿಮರಿಂದ ಕೆತ್ತಿದ ಮೂರ್ತಿ ಪೂಜೆಗೆ ಯೋಗ್ಯವಲ್ಲ: ಆಂದೋಲಾ ಶ್ರೀ
ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ದರ ಏರಿಕೆ ಎಷ್ಟಾಗಿತ್ತು? ಅದಕ್ಕೆ ಹೋಲಿಕೆ ಮಾಡಿದರೆ ಈಗಿನ ದರ ಏರಿಕೆ ಏನೇನೂ ಇಲ್ಲ. ಕಾಂಗ್ರೆಸ್‍ನವ್ರಿಗೆ ಬೇರೇನೂ ಚಟುವಟಿಕೆ ಇಲ್ಲ. ಹೀಗಾಗಿ ಈ ಕೆಲಸಗಳನ್ನು ಮಾಡುತ್ತಿದಾರೆ. ಅವರ ಪ್ರತಿಭಟನೆ ಬಗ್ಗೆ ಹೆಚ್ಚು ಮಾತಾಡಲ್ಲ. ನಾವೆಲ್ಲರೂ ಒಟ್ಟಾಗಿ ಸೇರಿ ರಾಜ್ಯದ ಅಭಿವೃದ್ಧಿ ಮಾಡಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಗೊಂದಲ ಉಂಟು ಮಾಡುವ ಕೆಲಸ ಮಾಡಬಾರದು. ವಿಶೇಷವಾಗಿ ಸಿದ್ದರಾಮಯ್ಯ, ಡಿಕೆಶಿಯವರು ಗೊಂದಲ ಮೂಡಿಸುವ ಕೆಲಸ ಮಾಡಬಾರದು ಎಂದು ಕಿವಿ ಮಾತು ಹೇಳಿದ್ದಾರೆ.