ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಬೇಡವಾದ್ರಾ ಎಂಬ ಪ್ರಶ್ನೆಯೊಂದು ರಾಜಕೀಯ ಅಂಗಳದಲ್ಲಿ ಈಗ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿದಾಗಿನಿಂದಲೂ ಯಡಿಯೂರಪ್ಪ ಪ್ರತಿಯೊಂದು ನಿರ್ಧಾರಗಳಿಗೂ ಹೈಕಮಾಂಡ್ ಒಪ್ಪಿಗೆ ಪಡೆದುಕೊಳ್ಳುವ ಅನಿವಾರ್ಯ ಎದುರಾಗಿದೆ. ಇತ್ತ ಕೇಂದ್ರ ಸರ್ಕಾರ ಪರಿಹಾರ ನೀಡಲು ವಿಳಂಬ ನೀತಿಗೆ ಯಡಿಯೂರಪ್ಪ ಸಹ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಸಿಎಂ ನಿರ್ಧಾರಕ್ಕೆ ಬಿಜೆಪಿ ಶಾಕ್: ಇತ್ತೀಚಿನ ಬೆಳವಣಿಗೆ ಬೆನ್ನಲ್ಲೇ ಬಿ.ಎಸ್.ಯಡಿಯೂರಪ್ಪನವರು ಪಕ್ಷದಿಂದ ಮಾನಸಿಕವಾಗಿ ದೂರ ಆಗುವ ನಿರ್ಧಾರ ಕೈಗೊಂಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರಂತೆ. ಪಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಅನ್ನೋ ಮನೋಭಾವವನ್ನು ಸಿಎಂ ಬೆಳಸಿಕೊಂಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಬಿಎಸ್‍ವೈ ವಿರುದ್ಧವೇ ಷಡ್ಯಂತ್ರ: ಆರ್.ಬಿ.ತಿಮ್ಮಾಪುರ
Advertisement
Advertisement
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೆಗೆದುಕೊಳ್ಳುವ ನಿರ್ಧಾರಗಳು ಸಿಎಂ ಆಗಿರುವ ಯಡಿಯೂರಪ್ಪನವರಿಗೆ ಗೊತ್ತಾಗುತ್ತಿಲ್ಲ. ಕಟೀಲ್ ಅವರ ಏಕಪಕ್ಷೀಯ ನಿರ್ಧಾರಗಳಿಂದ ಬೇಸತ್ತಿರುವ ಯಡಿಯೂರಪ್ಪನವರು ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರಂತೆ. ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದೇನೆ. ಅದೊಂದು ಮಾತನ್ನು ಉಳಿಸಿಕೊಟ್ಟರೆ ಸಾಕು. ಅನರ್ಹರಿಗೆ ಟಿಕೆಟ್ ಸಿಕ್ಕ ಮೇಲೆ ಸಂಪೂರ್ಣವಾಗಿ ಪಕ್ಷದ ಚಟುವಟಿಕೆಗಳಿಂದ ಬಿಎಸ್‍ವೈ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಯಡಿಯೂರಪ್ಪಗೆ ಚೆಕ್ ಮೇಲೆ ಚೆಕ್ ಕೊಡ್ತಿದ್ದಾರೆ ಕಟೀಲ್