ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ವಾರವೇ ಕಳೆದ್ರೂ, ಸಂಪುಟ ರಚನೆಯಾಗಿಲ್ಲ. ಆಗಸ್ಟ್ 7ರ ನಂತರವೇ ಸಂಪುಟ ರಚನೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೈಗೆ ಮೂರನೇ ಲಿಸ್ಟ್ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಪ್ರತ್ಯೇಕವಾಗಿ ಸಚಿವ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿದ್ದರು. ಎರಡು ಪಟ್ಟಿಯಲ್ಲಿ ಕೆಲ ನಾಯಕರ ಹೆಸರಿತ್ತು, ಆದ್ರೆ ಕೆಲವರದ್ದು ಇರಲಿಲ್ಲ. ಇದೀಗ ಅಮಿತ್ ಶಾ ತಮ್ಮ ಆಪ್ತ ಮೂಲಗಳಿಂದ ಸಿದ್ಧಪಡಿಸಿಕೊಂಡಿರುವ ಮೂರನೇ ಪಟ್ಟಿಯನ್ನು ತರಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
Advertisement
ಓರ್ವ ನಾಯಕ ಸಚಿವ ಆಗಬೇಕೆಂದ್ರೆ ಮೂರರ ಪೈಕಿ ಎರಡು ಪಟ್ಟಿಯಲ್ಲಿ ಹೆಸರು ಇರಬೇಕು ಎಂಬ ತೀರ್ಮಾನಕ್ಕೆ ಅಮಿತ್ ಶಾ ಬಂದಿದ್ದಾರಂತೆ. ಬುಧವಾರ ಈ ಮೂರು ಲಿಸ್ಟ್ ಜೊತೆ ಅಮಿತ್ ಶಾ ಸಭೆ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವ ಸಾಧ್ಯತೆಗಳಿವೆ.
Advertisement
ಬಿ.ಎಸ್.ಯಡಿಯೂರಪ್ಪ ಲಿಸ್ಟ್!:
ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಆರ್.ಅಶೋಕ್, ಶ್ರೀರಾಮುಲು, ಈಶ್ವರಪ್ಪ, ವಿ.ಸೋಮಣ್ಣ, ಅಶ್ವಥ್ ನಾರಾಯಣಗೌಡ, ಅರವಿಂದ್ ಲಿಂಬಾವಳಿ, ನಾಗೇಶ್, ಪೂರ್ಣಿಮಾ ಶ್ರೀನಿವಾಸ್, ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್.ಎ.ರಾಮದಾಸ್,ಬಾಲಚಂದ್ರಜಾರಕಿಹೊಳಿ, ಶಿವನಗೌಡ ನಾಯಕ್, ಎನ್.ರವಿಕುಮಾರ್, ಸುರೇಶ್‍ಕುಮಾರ್, ಕೆ.ಜಿ.ಬೋಪಯ್ಯ, ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮಿ
ಬಿ.ಎಲ್. ಸಂತೋಷ್ ಲಿಸ್ಟ್!:
ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಆರ್.ಅಶೋಕ್, ಶ್ರೀರಾಮುಲು, ಈಶ್ವರಪ್ಪ, ವಿ.ಸೋಮಣ್ಣ,1 ಅರವಿಂದ ಲಿಂಬಾವಳಿ, ಸುರೇಶ್ ಕುಮಾರ್, ನಾಗೇಶ್, ಶಶಿಕಲಾ ಜೊಲ್ಲೆ, ಮಾಧುಸ್ವಾಮಿ, ಉಮೇಶ್ ಕತ್ತಿ, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್.ಎ.ರಾಮದಾಸ್, ಬಾಲಚಂದ್ರ ಜಾರಕಿಹೊಳಿ, ಸಿ.ಟಿ.ರವಿ, ಎಸ್.ಎ.ರವೀಂದ್ರನಾಥ್, ಸಿ.ಎಂ.ಉದಾಸಿ, ಎಂ.ಪಿ.ಕುಮಾರಸ್ವಾಮಿ, ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್