ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ 11 ದಿನಗಳು ಕಳೆದಿವೆ. ಸಚಿವ ಸಂಪುಟ ವಿಸ್ತರಣೆ ಮಾಡಲು ಇದೂವರೆಗೆ ಸಿಎಂ ಯಡಿಯೂರಪ್ಪ ಅವರಿಂದ ಸಾಧ್ಯವಾಗಿಲ್ಲ. ಏಕಚಕ್ರಧಿಪತಿಯಾಗಿ ಈಗಾಗಲೇ ಸಾಕಷ್ಟು ನಿರ್ಣಯಗಳನ್ನು ಸಿಎಂ ತೆಗದುಕೊಂಡಿದ್ದು, ಸಂಪುಟ ವಿಸ್ತರಣೆ ಯಾವಗ ಅನ್ನೋ ಪ್ರಶ್ನೆ ಶುರುವಾಗಿದೆ.
ದೆಹಲಿಗೆ ತೆರರುವ ಬಿಎಸ್ ಯಡಿಯೂರಪ್ಪನವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಬೇಕು. ಆದರೆ ಅಮಿತ್ ಶಾ ಸಿಗೋದು ಅನುಮಾನ ಎನ್ನಲಾಗುತಿದೆ. ಲೋಕಸಭೆಯಲ್ಲಿ ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಬಿಲ್ ಮಂಡನೆ ಆಗಲಿದ್ದು, ಇಂದು ದಿನವಿಡೀ ಲೋಕಸಭೆ ಕಲಾಪದಲ್ಲಿ ಅಮಿತ್ ಶಾ ಬ್ಯುಸಿ ಇರಲಿದ್ದಾರೆ. ಹಾಗಾಗಿ ಯಡಿಯೂರಪ್ಪ ಮತ್ತು ಅಮಿತ್ ಶಾ ಭೇಟಿ ಅನುಮಾನ ಎನ್ನಲಾಗಿದ್ದು, ಇಂದು ರಾತ್ರಿ ಅಥಾವ ಬುಧವಾರ ಭೇಟಿಯಾಗುವ ಸಾಧ್ಯತೆಗಳಿವೆ.
ಸಿಎಂ ಆಗಿರುವ ಯಡಿಯೂರಪ್ಪ ತಮ್ಮ ಜೊತೆಯಲ್ಲಿ ತಮ್ಮದೇಯಾದ ಸಚಿವ ಆಕಾಂಕ್ಷಿಗಳ ಪಟ್ಟಿ ಹೊತ್ತು ತಂದಿದ್ದಾರೆ. ಜಾತಿ, ಜಿಲ್ಲೆ, ಪ್ರಾದೇಶಿಕ ,ಅತೃಪ್ತರ ಖೋಟಾ ಎಲ್ಲವನ್ನು ಅಳೆದು ತೂಗಿ ಪಟ್ಟಿ ಸಿದ್ಧಪಡಿಸಿದ್ದಾರೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕೂಡಾ ಪ್ರತ್ಯೇಕ ಪಟ್ಟಿಕೊಟ್ಟಿದ್ದು, ಆರ್.ಎಸ್.ಎಸ್ ಕೂಡಾ ಒಂದು ಪಟ್ಟಿಯನ್ನು ಹೈಕಮಾಂಡ್ ಗೆ ರವಾನಿಸಿದೆ ಎನ್ನಲಾಗಿದೆ.
ಇಂದು ಬೆಳಗ್ಗೆ 9:30ಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಯಡಿಯೂರಪ್ಪ ಭೇಟಿಯಾಗಿಲಿದ್ದು. ಸಂಜೆ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರರೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಆಗಬೇಕಾದ ಕೆಲಸ, ಬರಬೇಕಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.