ಬೆಂಗಳೂರು: ಇಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡಿಸಲಿದ್ದಾರೆ. ಮುಂಬೈನಲ್ಲಿರುವ ಅತೃಪ್ತ ಶಾಸಕರು ಬರಬೇಕಿತ್ತು. ಆದರೆ ಸದ್ಯಕ್ಕೆ ಮುಂಬೈಯಿಂದ ಹೊರಡಲು ಸಿದ್ಧರಾಗಿದ್ದ ಅತೃಪ್ತರ ತಮ್ಮ ಪ್ಲಾನ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅತೃಪ್ತರು ಇಂದು ಬೆಳಗ್ಗೆ 7-30ರ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಬೇಕಿತ್ತು. ಆದರೆ ಮತ್ತೆ ಬಿಜೆಪಿ ಪ್ಲಾನ್ ಚೇಂಜ್ ಮಾಡಿದ್ದು, ಅತೃಪ್ತರನ್ನ ಇನ್ನೂ ಮುಂಬೈನಲ್ಲೇ ಉಳಿಸಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಅತೃಪ್ತರು ಮುಂಬೈನಿಂದ ಹೊರಡಲು ಎಲ್ಲ ರೀತಿಯಲ್ಲೂ ಸಿದ್ಧರಾಗಿದ್ದರು. ಆದರೆ ಕಾರಣವೇನೆಂದು ಹೇಳದೆ, ಮುಂದಿನ ಸೂಚನೆ ಬರುವವರೆಗೂ ಮುಂಬೈನಲ್ಲೇ ಇರುವಂತೆ ಬಿಎಸ್‍ವೈ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಇವತ್ತಿನ ಸಿಎಲ್‍ಪಿ ಸಭೆಗೂ ಕಾಂಗ್ರೆಸ್‍ನ ಅತೃಪ್ತರ ಶಾಸಕರು ಗೈರಾಗುವ ಸಾಧ್ಯತೆ ಇದೆ. ಈ ಮೊದಲೇ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ಸಿಎಲ್‍ಪಿ ಸಭೆಗೆ ಹಾಜರಾಗಲೇಬೇಕು ಎಂದು ಕಡ್ಡಾಯವಾಗಿ ಸೂಚಿಸಿ ವಿಪ್ ಜಾರಿ ಮಾಡಿದ್ದರು. ಈಗ ಕಾಂಗ್ರೆಸ್ ಅತೃಪ್ತರ ಶಾಸಕರ ನಡೆಯನ್ನು ನೋಡಿದರೆ ಮಾಜಿ ಸಿಎಂ ಆಜ್ಞೆಗೆ ಅತೃಪ್ತರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ತಿಳಿದುಬಂದಿದೆ.
Advertisement
ಇಂದು ಮಧ್ಯಾಹ್ನ 12.35ಕ್ಕೆ ಹಣಕಾಸು ಸಚಿವರಾಗಿರುವ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೂ ಮೊದಲು ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ಮಾಡಲಿದ್ದಾರೆ. ಇದಕ್ಕೆ ಪ್ರತಿರೋಧ ಎಂಬಂತೆ ಬಿಎಸ್ ಯಡಿಯೂರಪ್ಪ ಕೂಡ ಸುದ್ದಿಗೋಷ್ಠಿ ಮಾಡುವುದಾಗಿ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv