ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಮಾಧ್ಯಮಗಳ ಮುಂದೇ ಸಾಕಷ್ಟು ಗಂಭೀರವಾಗಿ ಕಂಡು ಬರುತ್ತಿದ್ದ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಹಸನ್ಮುಖಿಯಾಗಿ ಕಂಡು ಬಂದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್‍ವೈ ಹೊಸ ವರ್ಷದಲ್ಲಿ ಏನಾದರು ನಡೆಯಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲದ ಮುನ್ಸೂಚನೆ ನೀಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
Advertisement
ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ನಗುತ್ತಾ, ಕೆಲ ಪ್ರಶ್ನೆಗಳಿಗೆ ಮೌನವಾಗುವ ಮೂಲಕ ಉತ್ತರಿಸಿದ ಬಿಎಸ್‍ವೈ, ಅಂತಿಮವಾಗಿ ಎಲ್ಲಾ ಮುಗಿಯಿತು ಅಲ್ವಾ ಎಂದು ಮಾಧ್ಯಮಗಳನ್ನು ಪ್ರಶ್ನೆ ಮಾಡಿ ನಗುತ್ತಾ ಸುದ್ದಿಗೋಷ್ಠಿ ಪೂರ್ಣಗೊಳಿಸಿದರು. ಸದ್ಯ ಬಿಎಸ್‍ವೈ ಅವರ ದೇಹಭಾಷೆಯನ್ನು ಕಂಡ ಹಲವರು ಆಪರೇಷನ್ ಕಮಲದಲ್ಲಿ ಬಿಎಸ್‍ವೈ ಒಂದು ಹಂತದಲ್ಲಿ ಯಶಸ್ವಿಯಾಗಿದ್ದಾರಾ ಎನ್ನುವ ಚರ್ಚೆ ಆರಂಭವಾಗಿದೆ. ಇದನ್ನು ಓದಿ : ಅಗಸ್ತಾ ವೆಸ್ಟ್ ಲ್ಯಾಂಡ್ ಹಗರಣ – ಇಡಿ ವಿಚಾರಣೆಲ್ಲಿ ಸೋನಿಯಾ ಹೆಸರು ಬಾಯ್ಬಿಟ್ಟ ಕ್ರಿಶ್ಚಿಯನ್?
Advertisement
ಸುದ್ದಿಗೋಷ್ಠಿಯಲ್ಲಿ ಅಗಸ್ತಾ ವೆಸ್ಟ್ ಲ್ಯಾಂಡ್ ಹಗಣರದ ಕುರಿತು ಪ್ರಸ್ತಾಪ ಮಾಡಿದ ಬಿಎಸ್‍ವೈ, ಪಕ್ರರಣದ ಪ್ರಮುಖ ದಲ್ಲಾಳಿ ಕ್ರಿಶ್ಚಿಯನ್ ತನಿಖೆ ವೇಳೆ ಕಾಂಗ್ರೆಸ್ ಮುಖಂಡರ ಹೆಸರನ್ನು ಬಹಿರಂಗ ಪಡಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪ ಮಾಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಫಲಾನುಭವಿ ಎಂಬ ಸುಳಿವನ್ನು ನೀಡಿದ್ದಾರೆ. ಈ ಮೂಲಕ ಕಳ್ಳನೇ ಬೇರೆ ಅವರನ್ನು ಕಳ್ಳ ಎಂದು ಕೂಗುತ್ತಾನೆ ಎಂಬ ಗಾದೆ ಸಾಬೀತು ಆಗಿದೆ. ಅಲ್ಲದೇ ಪ್ರಧಾನಿ ಮೋದಿ ದೇಶದ ಸಂಪತ್ತನ್ನು ಲೂಟಿ ಮಾಡುವ ಕಳ್ಳರ ವಿರುದ್ಧ ನಿಗಾ ಇರಿಸುವ ಚೌಕಿದಾರ ಎಂಬುವುದು ಸಾಬೀತಾಗಿದೆ ಎಂದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv