-ರಾಜ್ಯಪಾಲರ ಕೃಪೆಯಿಂದ ಎರಡೂವರೆ ದಿನವಷ್ಟೇ ಬಿಎಸ್‍ವೈ ಸಿಎಂ ಆಗಿದ್ರು
ಶಿವಮೊಗ್ಗ: ರಾಜ್ಯಪಾಲರ ಕೃಪೆಯಿಂದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಎರಡೂವರೆ ದಿನಗಳು ಮಾತ್ರ ಸಿಎಂ ಆಗಿದ್ದರು. ನಾನಾಗಿದ್ರೆ ರಾಜ್ಯಪಾಲರು ಕರೆದಿದ್ದರೂ ಅವರಂತೆ ಮಾಡುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಶಿಕಾರಿಪುರದಲ್ಲಿ ನಡೆದ ಉಪಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ, ಆಸೆ ಪಡುವುದು, ಕನಸು ಕಾಣುವುದು ತಪ್ಪಲ್ಲ. ಆದರೆ ಬಿ.ಎಸ್.ಯಡಿಯೂರಪ್ಪ ಅವರಿಗೆ ದುರಾಸೆಯಿದೆ. ಹೀಗಾಗಿ ಅವರು ಅಷ್ಟು ಕಡಿಮೆ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಇಷ್ಟಾದರೂ ಇನ್ನು ದುರಾಸೆಯನ್ನು ಬಿಟ್ಟಿಲ್ಲ. ಮತ್ತೆ ಸಿಎಂ ಆಗುತ್ತೇನೆ ಅಂತ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
Advertisement
ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಇಬ್ಬರೂ ಆಸ್ತಿ ಮಾಡುವುದಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಕಾಂಗ್ರೆಸ್‍ನವರು ಕುರುಬರಿಗೆ ಏನು ಮಾಡಿದ್ದಾರೆ ಅಂತಾ ಈಶ್ವರಪ್ಪ ಕೇಳುತ್ತಾರೆ. ಆದರೆ ಕಾಗಿನೆಲೆ ಗುರು ಪೀಠಕ್ಕಾಗಿ ದುಡ್ಡು ಕೇಳಿದರೆ, ಸಂಗ್ರಹ ಮಾಡಿ ಕೊಡಲಿಲ್ಲ. ಎಲ್ಲಿ 5 ಲಕ್ಷ ರೂ. ದೇಣಿಗೆ ಕೊಡಬೇಕಾಗುತ್ತದೆ ಅಂತಾ ಸಭೆಗೆ ಬರಲಿಲ್ಲ ಎಂದು ಲೇವಡಿ ಮಾಡಿದರು.
Advertisement
ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕಾಗಿನೆಲೆ ಪೀಠಕ್ಕೆ 25 ಲಕ್ಷ ರೂ. ಹಣ ಕೊಡಲು ಮುಂದಾಗಿದ್ದರು. ಆದರೆ ನಾವೇ ದುಡ್ಡು ಬೇಡ, ಕುರುಬರಿಗೆ ಆ ಸ್ಥಿತಿ ಬಂದಿಲ್ಲ ಅಂತಾ ಹೇಳಿದ್ದೇವು. ಏನನ್ನು ನೀಡದ ಈಶ್ವರಪ್ಪ ಅವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv