ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಇಂದು ಸುಮಾರು ಬೆಳಗ್ಗೆ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದು, ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿದ್ದಾರೆ.
ಯಡಿಯೂರಪ್ಪ ನಿವಾಸದಲ್ಲಿ ಹಲವು ಆತಂಕಗಳ ನಡುವೆಯೂ ಸಂಭ್ರಮ ಮನೆ ಮಾಡಿತ್ತು. ಇಂದು ಬೆಳ್ಳಂಬೆಳಗ್ಗೆ ಬಿಎಸ್‍ವೈ ನಿವಾಸಕ್ಕೆ ಬೆಂಬಲಿಗರು, ಕುಟುಂಬದವರಿಂದ ತುಂಬಿ ತುಳುಕಿದೆ. ಅಷ್ಟೇ ಅಲ್ಲದೇ ಸ್ವಾಮೀಜಿಗಳೂ ಕೂಡ ಧವಳಗಿರಿಗೆ ಬಂದು ನಿಮಗೇನು ಆಗಲ್ಲ. ನೀವೇ ಸಿಎಂ ಎಂದು ಆಶೀರ್ವಾದಿಸಿ ಬಿಎಸ್‍ವೈಗೆ ಧೈರ್ಯ ತುಂಬಿದ್ದಾರೆ.
Advertisement
ಅಷ್ಟೇ ಅಲ್ಲದೇ ಬಿಎಸ್‍ವೈ ನಿವಾಸದಲ್ಲಿ ವಿಶೇಷ ಪೂಜೆಗಳು ನಡೆದಿವೆ. ಬುಧವಾರ ಕೂಡ ಮಲ್ಲೇಶ್ವರಂ ನಲ್ಲಿರು ಬಿಜೆಪಿಯ ಕಚೇರಿಯಲ್ಲೂ ಕೂಡ ಪೂಜೆ-ಹೋಮ ನೆರವೇರಿದೆ. ಈ ವೇಳೆ ಯಡಿಯೂರಪ್ಪ ಮಗ ವಿಜಯೇಂದ್ರ ಅಪ್ಪನಿಗಾಗಿ ಹೊಸ ಡ್ರೆಸ್ ನೀಡಿದ್ದಾರೆ. ಮಲ್ಲೇಶ್ವರಂನ ವಿಜಯೇಂದ್ರ ತಮ್ಮ ಮನೆಯಿಂದ ಬಿಳಿ ಬಣ್ಣದ ಸೂಟ್ ತಂದು ಕೊಟ್ಟಿದ್ದಾರೆ.
Advertisement
ಸದ್ಯಕ್ಕೆ ಯಡಿಯೂರಪ್ಪ ಸಂಜಯ್ ನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ರಾಜಭವನಕ್ಕೆ ತೆರಳಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
Advertisement