ನವದೆಹಲಿ: ನ್ಯಾ.ಭೂಷಣ್ ರಾಮಕೃಷ್ಣ ಗವಾಯಿ (BR Gavai) ಅವರು ಇಂದು ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಆರ್ ಗವಾಯಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಪ್ರಮಾಣ ವಚನ ಬೋಧಿಸಿದರು. ಮಂಗಳವಾರ ನ್ಯಾ.ಸಂಜೀವ ಖನ್ನಾ (Sanjeeva Khanna) ಅವರ ನಿವೃತ್ತಿ ಬಳಿಕ ಇಂದು ನ್ಯಾ.ಬಿ.ಆರ್ ಗವಾಯಿ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ್ದಾರೆ.ಇದನ್ನೂ ಓದಿ: ಭಾರತದ ದಾಳಿಗೆ ವಿಲವಿಲ – ಪಾಕ್‌ನಲ್ಲಿ ಮದರಸಾಗಳ ಮೇಲೆ ನಾಗರಿಕರಿಂದಲೇ ಕಲ್ಲು ತೂರಾಟ
52ನೇ ಮುಖ್ಯ ನ್ಯಾಯಮೂರ್ತಿಯಾಗಿರುವ ಬಿ.ಆರ್ ಗವಾಯಿ ಅವರು 6 ತಿಂಗಳಿಗೂ ಹೆಚ್ಚಿನ ಅವಧಿ ಅಧಿಕಾರದಲ್ಲಿರಲಿದ್ದು, ಇದೇ ನ.23ರಂದು ನಿವೃತ್ತಿ ಹೊಂದಲಿದ್ದಾರೆ. ಜೊತೆಗೆ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಏರಿದ ಮೊದಲ ಬೌದ್ಧ ಮತ್ತು ಪರಿಶಿಷ್ಟ ಜಾತಿಯಿಂದ ಆಯ್ಕೆಯಾದ ಎರಡನೇ ನ್ಯಾಯಾಧೀಶರಾದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ, ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಆ ಪೈಕಿ 2016ರ ನೋಟು ರದ್ದತಿ, ಚುನಾವಣಾ ಬಾಂಡ್ ಯೋಜನೆಯ ತೀರ್ಪು ಸೇರಿದಂತೆ ಒಟ್ಟು 300 ತೀರ್ಪುಗಳನ್ನು ನೀಡಿದ್ದಾರೆ.ಇದನ್ನೂ ಓದಿ: ಭಾರತೀಯ ಸೈನಿಕರ ಶೌರ್ಯ, ತ್ಯಾಗ ಹಾಡಿಹೊಗಳಿದ ರಷ್ಯಾ ಮಹಿಳೆ