ಬೆಂಗಳೂರು: ಬಿಜೆಪಿಯಲ್ಲೀಗ ಹೆಜ್ಜೆ ಹೆಜ್ಜೆಗೂ ಸಂಪುಟ ವಿಸ್ತರಣೆ ಕುತೂಹಲ. ಯಾವಾಗ ಸಂಪುಟ ವಿಸ್ತರಣೆ? ಯಾರು ಮಂತ್ರಿಯಾಗ್ತಾರೆ ಅನ್ನೋ ಸಸ್ಪೆನ್ಸ್. ಈ ನಡುವೆ ಯಡಿಯೂರಪ್ಪ ಹೈಕಮಾಂಡ್ ಭೇಟಿಗೆ ಮುನ್ನವೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರಿಪೋರ್ಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ಹೈಕಮಾಂಡ್‍ಗೆ ರಿಪೋರ್ಟ್ ಸಲ್ಲಿಸಿರುವ ಬಿ.ಎಲ್.ಸಂತೋಷ್ ಸದ್ಯ ಸಂಪುಟ ವಿಸ್ತರಣೆ ಈಗ ಆಗಲಿ ಸಾಕು ಅಂದಿದ್ದಾರೆ ಎನ್ನಲಾಗಿದೆ. ಆದ್ರೆ ಸಂಪುಟ ಪುನಾರಚನೆ ಬೇಡ ಎಂದ್ರೂ ಖಾತೆಯನ್ನ ಪುನರ್ ಹಂಚಿಕೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅನ್ನೋದು ಬಿಜೆಪಿ ವಲಯದ ಬಿಸಿಬಿಸಿ ಸುದ್ದಿ.
ಅಂದಹಾಗೆ ಸಂತೋಷ್ ಅವರ ಅಭಿಪ್ರಾಯವನ್ನ ಹೈಕಮಾಂಡ್ ಒಪ್ಪಿದರೆ ಹಿರಿಯ ಸಚಿವರಿಗೆ ಶಾಕ್ ಕಾದಿದೆ. ಈಗಾಗಲೇ ದೊಡ್ಡ ದೊಡ್ಡ ಖಾತೆಗಳನ್ನ ಹೊಂದಿರುವ ಹಿರಿಯ ಸಚಿವರು ಆ ಖಾತೆಗಳಿಂದ ವಂಚಿರಾಗೋದ್ರಲ್ಲಿ ಡೌಟೇ ಇಲ್ಲ. 6 ತಿಂಗಳ ಕಾರ್ಯವೈಖರಿ ಹಾಗೂ ನಡೆದುಕೊಳ್ತಿರುವ ರೀತಿಯ ಆಧಾರದ ಮೇಲೆ ಖಾತೆ ಬದಲಾಯಿಸಲು ಬಿ.ಎಲ್.ಸಂತೋಷ್ ವರದಿ ನೀಡಿದ್ದಾರೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ಸಂಕಷ್ಟ ಒಂದೆಡೆಯಾದ್ರೆ ಖಾತೆ ಹಂಚಿಕೆ ಸಂಕಷ್ಟ ಇನ್ನೊಂದೆಡೆ ಕಟ್ಟಿಟ್ಟಬುತ್ತಿ. ಈ ಎರಡು ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಯಾವ ರೀತಿ ಜಾಣತನ ಮೆರೆಯುತ್ತಾರೆ ಅನ್ನೋ ಕುತೂಹಲವಿದೆ.
Advertisement
Advertisement
ಈ ನಡುವೆ ಯಡಿಯೂರಪ್ಪ ದೆಹಲಿಗೆ ಹೋದ್ಮೇಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಜತೆ ಮಾತುಕತೆ ಅಷ್ಟೇ ಅಲ್ಲ, ಕೇಂದ್ರ ಗೃಹಸಚಿವ ಅಮಿತ್ ಶಾ ಜತೆಯೂ ಮಾತಾಡಬೇಕು. ಈ ಬಗ್ಗೆ ಈಗಾಗಲೇ ಯಡಿಯೂರಪ್ಪಗೆ ಹೈಕಮಾಂಡ್ ನಿಂದ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ. ಫೆಬ್ರವರಿ 2ಕ್ಕೆ ಸಂಪುಟ ವಿಸ್ತರಣೆ ಸಾಧ್ಯತೆ, 9+3 ಯಡಿಯೂರಪ್ಪ ಸಂಪುಟ ವಿಸ್ತರಣೆ ಫಾರ್ಮುಲಾ ಸಕ್ಸಸ್ ಆಗುತ್ತೋ..? ಹೈಕಮಾಂಡ್ ನಿಂದ 8+4 ಫಾರ್ಮುಲಾಗೆ ಮನವೊಲಿಕೆ ಯತ್ನ ಯಶಸ್ವಿಯಾಗುತ್ತೋ ಕಾದುನೋಡಬೇಕಿದೆ.