ಕಾರವಾರ: ಸಿ.ಟಿ ರವಿ (C.T Ravi) ಕುಡಿದಾಗ ಸ್ಪಲ್ಪ ಮಾತನಾಡುತ್ತಾರೆ. ಗಾಂಜಾನೂ ಹೊಡಿತಾರೆ ಅವರ ಬಗ್ಗೆ ಟಿಪ್ಪಣಿ ಮಾಡೋದು ತಪ್ಪಾಗುತ್ತೆ. ಕುಡಿದು ನಮ್ಮ ಪಕ್ಷಕ್ಕೆ ಸೇರಿದರೂ ಸೇರಬಹುದು ಎಂದು ಕಾಂಗ್ರೆಸ್ (Congress) ಮುಖಂಡ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ (B.K Hariprasad) ವ್ಯಂಗ್ಯವಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿಯವರಿಗೆ ಪ್ರಜಾಪಭುತ್ವದಲ್ಲಿ ಖರೀದಿ ಮಾಡುವ ಕೆಪಾಸಿಟಿ ಇದೆ. ಎಮ್‍ಎಲ್‍ಎಗಳನ್ನು ಖರೀದಿ ಮಾಡ್ತಾರೆ. ಹಾಗಾಗಿ ಜನರ ಆಶೀರ್ವಾದ ಬಿಜೆಪಿಗೆ ಇಲ್ಲ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ಯುದ್ಧ ಸಾರುವುದಾಗಿ ಬೆದರಿಕೆ ಹಾಕಿದ ತಾಲಿಬಾನ್
ಜೆಡಿಎಸ್ ಜಾಯಿಂಟ್ ಫ್ಯಾಮಿಲಿ ಇದ್ದ ಹಾಗೆ ಹಾಗಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಕೆಲವು ಪ್ರಕ್ರಿಯೆಗಳು ಇವೆ. ಆ ಪ್ರಕ್ರಿಯೆ ಮುಗಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: `ನಂದಿನಿ’ ಕನ್ನಡಿಗರ ಜೀವನಾಡಿ, ಅದರ ತಂಟೆಗೆ ಬಂದ್ರೆ ಬಿಜೆಪಿ ಭಸ್ಮವಾಗುತ್ತೆ HDK ಎಚ್ಚರಿಕೆ