– ತಿದ್ದುಪಡಿಯ ಬದಲು ಬದಲಾವಣೆ ಎಂದು ಹೇಳಿರಬಹುದು ಡಿಕೆಶಿ ಪರ ಬ್ಯಾಟಿಂಗ್
– ಹನಿಟ್ರ್ಯಾಪ್ ಮೋದಿ ಗುಜರಾತ್ ಸಿಎಂ ಆಗಿದ್ದಾಗಿನಿಂದಲೂ ಇದೆ
ನವದೆಹಲಿ: ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಸಂವಿಧಾನದ ತಿದ್ದುಪಡಿಯ ಅಗತ್ಯವೂ ಇಲ್ಲ. ಬದಲಾವಣೆಯ ಅನಿವಾರ್ಯತೆಯೂ ಇಲ್ಲ. ಸಂವಿಧಾನದ ಚೌಕಟ್ಟಿನಲ್ಲಿಯೇ ಮೀಸಲಾತಿ ನೀಡಿರುವುದು ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (B K Hariprasad) ಸ್ಪಷ್ಟನೆ ನೀಡಿದರು.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನವನ್ನು ತಿದ್ದುಪಡಿ ತರಲು ಅವಕಾಶವಿದೆಯೇ ಹೊರತು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬದಲಾವಣೆ ಮಾಡಲು ಬಿಡುವುದೂ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar) ಅವರು ತಿದ್ದುಪಡಿಯ ಬದಲು ಬದಲಾವಣೆ ಎಂದು ಹೇಳಿರಬಹುದು ಎಂದರು. ಇದನ್ನೂ ಓದಿ: ಹಾಲಿನ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂ – ಇಂದಿನ ಹೈವೋಲ್ಟೇಜ್ ಸಭೆಯಲ್ಲಿ ಏನಾಯ್ತು?
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುವುದೇ ಸಂವಿಧಾನದ ಮುಖ್ಯ ಆಶಯ. ಸಂವಿಧಾನದ ಆಶಯದಂತೆಯೇ ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದೆ. ಸಂವಿಧಾನ ಅನುಚ್ಛೇದ 14, 15(4), 16(4) ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಅವಕಾಶವಿದೆ ಎಂದು ಹೇಳಿದರು. ಇದನ್ನೂ ಓದಿ: 3.5 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್ 6.6 ಕೋಟಿಗೆ ಮಾರಿದ ಅಕ್ಷಯ್ ಕುಮಾರ್
ಧರ್ಮದ ಆಧಾರದಲ್ಲಿ ಎಲ್ಲಿಯೂ ಕೂಡ ಮೀಸಲಾತಿ ನೀಡಿಲ್ಲ. 1977ರಿಂದ 1993ರವರೆಗೂ 4 ಹಿಂದುಳಿದ ಆಯೋಗಗಳ ವರದಿ ನೀಡಿದೆ. ಹಾವನೂರು ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ ಸೇರಿದಂತೆ 4 ಆಯೋಗಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರೆಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿಸಬಹುದು ಎಂದು ವರದಿ ನೀಡಿದೆ. ಮುಖ್ಯವಾಗಿ 1993ರ ಇಂದಿರಾ ಸಹಾನಿ ವರ್ಸಸ್ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರತಿ ರಾಜ್ಯದಲ್ಲಿ ಹಿಂದುಳಿದವರ ಆಯೋಗ ರಚಿಸಿ, ಕುಲಶಾಸ್ತ್ರ ಅಧ್ಯಯನ (Ethnology Study) ನಡೆಸಿ, ಸಮುದಾಯಗಳ ಸಬಲೀಕರಣಕ್ಕೆ ಮೀಸಲಾತಿ ನೀಡಬಹುದು ಎಂದು ಸ್ಪಷ್ಟಪಡಿಸಿದೆ ಎಂದು ನುಡಿದರು. ಇದನ್ನೂ ಓದಿ: ಪತ್ನಿಗೆ 9 ಕೋಟಿ ಜೀವನಾಂಶ, ತಿಂಗಳಿಗೆ 4 ಲಕ್ಷ – ಭಾರೀ ಸಂಚಲನ ಸೃಷ್ಟಿಸಿದ ಟೆಕ್ಕಿ ಪೋಸ್ಟ್
ಮುಸ್ಲಿಂ ಸಮುದಾಯಗಳಿಗೆ ಮೀಸಲಾತಿ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಿಲ್ಲ. ಗುಜರಾತ್‌ನಲ್ಲೂ (Gujarat) ಕೂಡ ಮೀಸಲಾತಿ ನೀಡಿದೆ. ಕೇಂದ್ರ ಸರ್ಕಾರದಲ್ಲಿಯೂ ಕೂಡ 4 ಪಂಗಡಗಳನ್ನು ಹೊರತುಪಡಿಸಿ ಉಳಿದವರಿಗೆ ಮೀಸಲಾತಿ ನೀಡಿದೆ. ಗುಜರಾತ್‌ನಲ್ಲಿ 101 ಸಮುದಾಯಗಳಲ್ಲಿ 23 ಮುಸ್ಲಿಂ ಒಳ ಪಂಗಡಗಳಿಗೆ ಮೀಸಲಾತಿ ನೀಡಲಾಗಿದೆ. ಮುಸ್ಲಿಂ ಸಮುದಾಯಗಳು ಹಿಂದುಳಿದಿವೆ ಎಂದು ಕೆಲವು ಆಯೋಗಗಳು ಕೂಡ ವರದಿ ನೀಡಿದೆ ಎಂದು ಹೇಳಿದರು. ಇದನ್ನೂ ಓದಿ: ಸಂಸದರ ಸಂಬಳ 24% ಏರಿಕೆ – ಈಗ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?
ಹನಿಟ್ರ್ಯಾಪ್ ರಾಜ ಮಹಾರಾಜರ ಕಾಲದಿಂದ ಹಿಡಿದು, ನರೇಂದ್ರ ಮೋದಿ (Narendra Modi) ಅವರು ಗುಜರಾತ್‌ನ ಮುಖ್ಯಮಂತ್ರಿಯಾದ ಕಾಲದಿಂದ ಮಾನ್ಯ ಬಿಜೆಪಿ ಅಧ್ಯಕ್ಷನಿಂದಾಗಿ ಕರ್ನಾಟಕದ ಬಾಂಬೆ ಬಾಯ್ಸ್‌ಗಳು ಕೋರ್ಟ್‌ನಿಂದ ಇಂಜೆಕ್ಷನ್ ಆರ್ಡರ್ ವರೆಗೂ ಬಂದು, ಈಗ ಇಲ್ಲಿಗೆ ಬಂದು ನಿಂತಿದೆ. ಮಾಡುವುದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನದಂತೆ ಬಿಜೆಪಿಯವರು ಮಾತಾನಾಡುವುದು ಬೇಡ. ಹನಿಟ್ರ್ಯಾಪ್ ಈಗ ಆಗಿ ಹೋಗಿದೆ. ಅದರ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ. ಅದರ ಬಗ್ಗೆ ಚರ್ಚೆ ಬೇಡ ವಾಗ್ದಾಳಿ ನಡೆಸಿದರು.