ಬೆಳಗಾವಿ: ನನ್ನ ಹಾಗೂ ಸಿಎಂ ಸಿದ್ದರಾಮಯ್ಯನವರ (Siddaramaiah) ನಡುವೆ ಯಾವುದೇ ಅಸಮಾಧಾನ ಇಲ್ಲ. ಅವರಿಗೆ ಅದೃಷ್ಟ ಇದೆ ಸಿಎಂ ಆಗಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ಗುದ್ದಾಟ ಇಲ್ಲ. ನನ್ನನ್ನು ಯಾರೂ ಮೂಲೆಗುಂಪು ಮಾಡಲು ಆಗುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (B.K Hariprasad) ಹೇಳಿದ್ದಾರೆ.
ಬೆಳಗಾವಿಯಲ್ಲಿ (Belagavi) `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನನ್ನು ಯಾರು ತುಳಿಯುದಕ್ಕೆ ಆಗುವುದಿಲ್ಲ. ತುಳಿಯುವ ಪ್ರಯತ್ನ ಮಾಡಿದರೆ ಅದು ಅವರಿಗೆ ರಿವರ್ಸ್ ಆಗಿ ತಿರುಗುತ್ತದೆ. ನಮ್ಮ ಸಮುದಾಯದಲ್ಲಿ ನನ್ನ ಪರವಾಗಿ ಪರ್ಯಾಯ ನಾಯಕರನ್ನು ಬೆಳೆಸುವ ಪ್ರಕ್ರಿಯೆ ನಿರಂತರವಾಗಿದೆ. ನಾನು ಯಾವುದಕ್ಕೂ ಬಗ್ಗುವುದಿಲ್ಲ. ಯಾರು ತಂತ್ರ ಹಾಗೂ ಕುತಂತ್ರ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ
ಈಡಿಗ ಸಮುದಾಯಕ್ಕೆ ಇಲ್ಲಿಯವರೆಗೂ ಒಂದು ರೂಪಾಯಿ ಸಹ ಅನುದಾನ ಬಂದಿಲ್ಲ. ಯಾರೋ ಸಿಎಂಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬಿಜೆಪಿಯವರ ತರಹ ನಾವು ಕೂಡ ಸುಳ್ಳು ಭರವಸೆ ನೀಡುವವರಾಗುವುದು ಬೇಡ ಎಂದಿದ್ದಾರೆ.
ಮೇ ನಂತರ ಸರ್ಕಾರ ಬದಲಾಗಲಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ, ಅವರು ಹೇಳತ್ತಾರೆ, ಹೇಳಲಿ ಆ ವಿಚಾರವಾಗಿ ನಾನೇನು ಪ್ರತಿಕ್ರಿಯೆ ನಿಡುವುದಿಲ್ಲ. ಇನ್ನೂ ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನಮ್ಮ ತಟ್ಟೆಯಲ್ಲಿ ನೋಣದ ಬಗ್ಗೆ ಅವರಿಗೆ ಚಿಂತೆ ಯಾಕೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 3,500 ಕಿ.ಮೀ ದೂರದ ಥೈಲ್ಯಾಂಡ್‌ನಿಂದ ಅಯೋಧ್ಯೆ ರಾಮಮಂದಿರಕ್ಕೆ ಬರಲಿದೆ ವಿಶೇಷ ಮಣ್ಣು