ಚಿಕ್ಕೋಡಿ: ಶಾಸಕ ಹರ್ಷವರ್ಧನ್ (B.Harshavardhan) ಅವರ ಪ್ರಸ್ತಾವನೆ ಯಾವ ರೀತಿ ಕ್ಲೀಯರ್ (Clear) ಆಗಿದೆ ಎಂದು ಗೊತ್ತಿಲ್ಲ. ನಮ್ಮ ಕಡೆಯಿಂದ ಅದು ಬೇಡ ಎಂದು ಆಗಿತ್ತು. ಈ ವಿಚಾರವನ್ನು ಸಿಎಂ ಅವರ ಗಮನಕ್ಕೆ ತಂದು ಪ್ರಸ್ತಾವನೆಯನ್ನು ತಡೆ ಹಿಡಿಯಲಾಗಿದೆ ಎಂದು ಮುಜರಾಯಿ ಇಲಾಖೆ (Muzrai Department) ಸಚಿವೆ ಶಶಿಕಲಾ ಜೊಲ್ಲೆ (Shashikala Annasaheb Jolle) ಸ್ಪಷ್ಟನೆ ನೀಡಿದರು.
Advertisement
ಶ್ರೀಕಂಠೇಶ್ವರ ದೇವಸ್ಥಾನದ (Srikanteshwara Temple, Nanjangud) ನಿಧಿಯಲ್ಲಿರುವ ಹಣ ಬಳಕೆ ಕುರಿತು ಹರ್ಷವರ್ಧನ್ ಅವರ ಪ್ರಸ್ತಾವನೆ ಬಗ್ಗೆ ಚಿಕ್ಕೋಡಿ (Chikkodi) ತಾಲೂಕಿನ ಅಂಕಲಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡು ಶಾಸಕ ಹರ್ಷವರ್ಧನ್ ಶ್ರೀಕಂಠೇಶ್ವರ ದೇವಸ್ಥಾನದ ನಿಧಿಯಲ್ಲಿರುವ ಹಣ ಬಳಕೆ ಬಗ್ಗೆ ನನ್ನ ಬಳಿ ಪ್ರಸ್ತಾವನೆ ತಂದಿದ್ದರು. ದೇವಸ್ಥಾನದ ದುಡ್ಡಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಆಗುವುದಿಲ್ಲ ಎಂದು ನಾನು ತಿರಸ್ಕಾರ ಮಾಡಿದ್ದೆ. ಸಿಎಂ ಅವರಿಗೆ ತಪ್ಪು ಮಾಹಿತಿಯಿಂದ ಈ ರೀತಿ ಆಗಿರಬಹುದು. ಈ ಬಗ್ಗೆ ಸಿಎಂ ಅವರಿಗೆ ಕರೆ ಮಾಡಿದ್ದೆ. ಆದರೆ ಅವರು ಮಹಿಳಾ ದಿನಾಚರಣೆಯಲ್ಲಿದ್ದರು. ಈ ಕುರಿತು ಸಿಎಂ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: EXCLUSIVE: ದೇವರ ದುಡ್ಡನ್ನೂ ಬಿಡದ ನಾಯಕರು- ಮುಜರಾಯಿ ಹಣದ ಮೇಲೆ ಬಿಜೆಪಿ ಶಾಸಕನ ಕಣ್ಣು
Advertisement
ಶಾಸಕ ಹರ್ಷವರ್ಧನ್ ಮಾಡಿದ್ದು ತಪ್ಪು. ಈ ರೀತಿ ಹಣ ಬಳಕೆ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಶಾಸಕರು ಮಾಡಿರುವ ಪ್ರಸ್ತಾವನೆಯನ್ನು ತಡೆ ಹಿಡಿಯಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜನಲ್ಲ, ದೊರೆ ರಾಮಭೋಜ ನೀಡಿದ್ದು- ಪೇಜಾವರ ಶ್ರೀ ಸ್ಪಷ್ಟನೆ