ಮಂಡ್ಯ: ಕಾವೇರಿ ನದಿಯಲ್ಲಿ (Cauvery Water) ಮುಳುಗಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಬಲಮುರಿಯಲ್ಲಿ ನಡೆದಿದೆ.
ಮೈಸೂರು ನಾಗನಹಳ್ಳಿ ಗ್ರಾಮದ ಎಸ್ ಶ್ರೇಯಸ್ ಮೃತ ವಿದ್ಯಾರ್ಥಿ. ಈತ ಪಾಲಹಳ್ಳಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿ.ಇ ಓದುತ್ತಿದ್ದ. ಮೂವರು ಸ್ನೇಹಿತರ ಜೊತೆಗೆ ಬಲಮುರಿಗೆ ಈಜಲೆಂದು ತೆರಳಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಶಿವಣ್ಣಗೆ 6 ಆಪರೇಷನ್, 190 ಹೊಲಿಗೆ ಹಾಕಲಾಗಿದೆ: ಮಧು ಬಂಗಾರಪ್ಪ
ಈಜಲು ಬಾರದ ಹಿನ್ನೆಲೆ ಸ್ನೇಹಿತರು ನದಿ ದಡದಲ್ಲಿಯೇ ಕುಳಿತಿದ್ದರು. ಈಜು ಬರುತ್ತಿದ್ದರಿಂದ ಶ್ರೇಯಸ್ ಏಕಾಂಗಿಯಾಗಿ ನದಿಗಿಳಿದಿದ್ದ. ಈ ವೇಳೆ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಕೆಆರ್‌ಎಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಹರಿಯಾಣದ ಬಿಜೆಪಿ ಅಧ್ಯಕ್ಷ, ಗಾಯಕನ ವಿರುದ್ಧ ಎಫ್‌ಐಆರ್