ಬೆಂಗಳೂರು: ಐಟಿಬಿಟಿ ರಂಗಕ್ಕೂ ಕೃಷಿ ಪ್ರವೇಶಿಸಿರುವುದು ಬಹಳ ದೊಡ್ಡ ಹೆಮ್ಮೆಯ ಸಂಗತಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಜಿಕೆವಿಕೆಯಲ್ಲಿ ಲಘು ಉದ್ಯಮ ಭಾರತ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ಟೆಕ್ ಭಾರತ್” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯ ಮಹತ್ವ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಅರಿವಾಗುತ್ತಿದೆ. ಕೃಷಿಯಮೂಲ ಇಲ್ಲದಿದ್ದರೆ ಯಾವ ರಂಗವೂ ಇಲ್ಲ ಎಂಬುದು ತಿಳಿಯುತ್ತಿದೆ. ಮೇಕ್ ಇನ್ ಇಂಡಿಯಾ ಅಡಿ ಕೃಷಿ ಕಾರ್ಯಕ್ರಮಗಳು ಕಾರ್ಯಗತಗೊಳಿಸುತ್ತಿದೆ. ದೇಶದಲ್ಲಿ ಮೊದಲನೇ ಹಾಗೂ ಇಡೀ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿ ನಮ್ಮ ಬೆಂಗಳೂರು ತಂತ್ರಜ್ಞಾನ ವಿಜ್ಞಾನ ಅಭಿವೃದ್ಧಿಯಲ್ಲಿ ಸ್ಥಾನ ಪಡೆದಿರುವುದು ಸಂತಸದ ಸಂಗತಿ ಎಂದರು. ಇದನ್ನೂ ಓದಿ: ಮೀನುಗಾರಿಕೆಗೆ ಬೆಂಬಲ – ಮತ್ಸ್ಯ ಸಿರಿ ಯೋಜನೆ ಆರಂಭ
Advertisement
Advertisement
1912 ರಲ್ಲಿಯೇ ಸರ್.ಎಂ.ವಿಶ್ವೇಶ್ವರಯ್ಯನವರು ನೀರಾವರಿ ಮತ್ತು ಕೈಗಾರಿಕಾಕರಣದಲ್ಲಿ ರೈತರ ಅಭಿವೃದ್ಧಿಯ ಚಿಂತನೆ ಹೊಂದಿದ್ದರು. 2014 ರಿಂದ 2018 ರವರೆಗೆ ದೇಶದಲ್ಲಿ ಸುಮಾರು 50 ಸಾವಿರ ಸ್ಟಾರ್ಟಪ್‍ಗಳು ಹುಟ್ಟಿವೆ. 2019 ಈ ಒಂದು ವರ್ಷದಲ್ಲಿಯೇ 9,300 ಅಗ್ರಿ ಸ್ಟಾರ್ಟಪ್‍ಗಳು ಆರಂಭವಾಗಿದ್ದು, ಅದರಲ್ಲಿ ಕೃಷಿಗಾಗಿಯೇ 474 ಸ್ಟಾರ್ಟಪ್‍ಗಳಾಗಿವೆ. ಇದುವರೆಗೂ ಬೆಂಗಳೂರಿನಲ್ಲಿ 4 ಸಾವಿರ ಸ್ಟಾರ್ಟಪ್‍ಗಳು ತಲೆಯೆತ್ತಿವೆ. ನಮ್ಮ ದೇಶದಲ್ಲಿ ಪ್ರತಿದಿನ 2ರಿಂದ 3 ಸ್ಟಾರ್ಟಪ್‍ಗಳು ಹುಟ್ಟುತ್ತಿವೆ. ಸುಮಾರು 40 ಸಾವಿರ ಉದ್ಯೊಗಗಳು ಸೃಷ್ಟಿಯಾಗುತ್ತಿದೆ ಎಂದರು.
Advertisement
Advertisement
ವಿದ್ಯಾವಂತ ಯುವಕರು ಪಟ್ಟಣದಿಂದ ಹಳ್ಳಿಕಡೆಗೆ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಪುನಃ ಮುಖಮಾಡಿದ್ದಾರೆ. ವೃದ್ಧಾಶ್ರಮವಾಗಿದ್ದ ಹಳ್ಳಿಗಳೀಗ ಕೃಷಿಯತ್ತ ಆಸಕ್ತಿಯಿಂದ ಮತ್ತೆ ಕಳೆ ಹೊಂದುತ್ತಿವೆ. 2020-21ರಲ್ಲಿ ಕೋವಿಡ್ ಲಾಕ್-ಡೌನ್ ಸಂದರ್ಭದಲ್ಲಿಯೂ ಕೂಡ ಕರ್ನಾಟಕ 64 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ. ಇದರಲ್ಲಿ ಶೇ. 3 ಭಾಗ ಕರ್ನಾಟಕವೇ ಇಡೀ ದೇಶದಲ್ಲಿ ಆಹಾರ ಉತ್ಪಾದಿಸಿ ಕೊಡುಗೆ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಆಹಾರ ಸಂಸ್ಕರಣಾ ಘಟಕ ಮತ್ತು ಅಗ್ರಿ ಸ್ಟಾರ್ಟಪ್‍ಗಳಿಗೆ ಆತ್ಮನಿರ್ಭರ ಯೋಜನೆಯಡಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ ಆಹಾರ ಸಂಸ್ಕರಣಾ ಘಟಕಗಳಿಗೆ ಹಾಗೂ 1 ಲಕ್ಷ ಕೋಟಿ ರೂ. ಅಗ್ರಿಕಲ್ಚರ್ ಇನ್ಫಟಾಸ್ಟ್ರ್‍ಕ್ಚರ್ ಗಳಿಗೆ ಇಟ್ಟಿದ್ದಾರೆ. 35% ರಾಜ್ಯ ಸರ್ಕಾರ ಉತ್ತೇಜನ 15 ಲಕ್ಷ ರೂ. ಸಬ್ಸಿಡಿ ಉತ್ತೇಜನ ನೀಡುತ್ತಿದೆ ಎಂದರು. ಇದನ್ನೂ ಓದಿ : ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್? : ಶಾಕ್ ನಲ್ಲಿ ನಟಿ ಸಂಜನಾ
ಸರ್ಕಾರಿ ನೌಕರಿ ಮೇಲೆಯೇ ಅವಲಂಬಿತರಾಗದೇ ಯುವಕರು ಸ್ವ ಉದ್ಯೋಗಕ್ಕೆ ಹೆಚ್ಚು ಒತ್ತುಕೊಡಬೇಕು. ಟೀ ಕಾಫಿಯು ಆನ್-ಲೈನ್‍ನಲ್ಲಿ ಮನೆಗೆ ಸಿಗುವಂತಾಗಿದೆ ಎಂದರು.