ಚಿತ್ರದುರ್ಗ: ಆತ್ಮಗೌರವ ಇದ್ದವರು ಯಾರೂ ಸಹ ಕಾಂಗ್ರೆಸ್‍ಗೆ ವಾಪಸ್ ಹೋಗುವುದಿಲ್ಲ ಎಂದು ಚಿತ್ರದುರ್ಗದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಚಿತ್ರದುರ್ಗ ಡಿಸಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಗೆ ಮಾತನಾಡಿದ ಅವರು, ವಲಸಿಗ ಸಚಿವರು ಕಾಂಗ್ರೆಸ್‍ಗೆ ವಾಪಸ್ ಆಗುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ಇರುತ್ತಾರೋ ಇಲ್ಲವೋ ಅನುಮಾನವಿದೆ. ಒಂದು ವೇಳೆ ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ವಲಸೆ ಬಂದವರು ಯಾರು ಸಹ ಮರಳಿ ಕಾಂಗ್ರೆಸ್ ಸೇರುವ ಪ್ರಶ್ನೆಯಿಲ್ಲ. ಏಕೆಂದರೆ ಈಗಾಗಲೇ ಕಾಂಗ್ರೆಸ್‍ನಲ್ಲಿ ಎಲ್ಲವನ್ನೂ ಅನುಭವಿಸಿ ಬಂದಿದ್ದೇವೆ.
Advertisement
Advertisement
ಕಾಂಗ್ರೆಸ್‍ಗೆ ರಾಜೀನಾಮೆ ಕೊಟ್ಟ ಬಳಿಕ ಏನೆಲ್ಲಾ ಟಾರ್ಚರ್ ನೀಡಿದ್ದಾರೆಂದು ನಾವು ಅನುಭವಿಸಿದ್ದೇವೆ. ಈ ಜೀವನದಲ್ಲಿ ಆ ಮಾನಸಿಕ ಹಿಂಸೆಯನ್ನು ಮರೆಯಲ್ಲ. ಹಾಗೆಯೇ ನಿಜವಾದ ಆತ್ಮಗೌರವ ಇದ್ದವರು ಯಾರೂ ಕೂಡ ಕಾಂಗ್ರೆಸ್‍ಗೆ ಹೋಗಲ್ಲ. ಜೊತೆಗೆ ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹೋಗುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಭಾರತದ ವಿರುದ್ಧ ಸರಣಿ ಗೆದ್ದ ಬಳಿಕ ‘ಜೈ ಶ್ರೀರಾಮ್’ ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್
Advertisement
Advertisement
ಕೆಲ ಸಚಿವರು ಡಿಕೆಶಿ ಅವರನ್ನು ಭೇಟಿಯಾಗಿರುವುದು ವಿಶೇಷವೇನಲ್ಲ. ಕೆಲ ವ್ಯಾಪಾರ, ಕೆಲ ಸಂಬಂಧಕ್ಕಾಗಿ ಕೈ ಮುಖಂಡರನ್ನು ಭೇಟಿ ಮಾಡಿರಬಹುದು. ಭೇಟಿ ಮಾಡಿದ ತಕ್ಷಣ ಪಕ್ಷಕ್ಕೆ ಸೇರುತ್ತಾರೆಂದು ಅಲ್ಲ. ಅವರೊಂದಿಗೆ ಕಂಡ ಕ್ಷಣ. ಕಂಡವರ ಮೇಲೆ ಗೂಬೆ ಕೂಡಿಸುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಪ್ಪು ಪ್ರೇರಣೆ – ಸಾವಿನಲ್ಲೂ ಸಾರ್ಥಕತೆ ಮೆರೆದ ದಾವಣಗೆರೆಯ ವೃದ್ಧೆ
ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಸ್ಪಷ್ಟವಾಗಿ ಹೇಳಲಿ ಬೇಡವಾದ ವಿಚಾರದ ಬಗ್ಗೆ ಯತ್ನಾಳ್ ಏಕೆ ಚರ್ಚೆ ಮಾಡಲು ಹೋದರು. ಪಕ್ಷ ಬಿಡುವಂತಿದ್ದರೆ ಅಂಥವರ ವಿಶ್ವಾಸ ಗಳಿಸಿಕೊಳ್ಳಬೇಕು. ಯತ್ನಾಳ್ ಅವರೇನಾದರೂ ಅಂಥ ಕೆಲಸ ಮಾಡಿದ್ದಾರಾ? ಅಧಿಕಾರ ಹಿಡಿಯುವ ವೇಳೆ ವಲಸಿಗ ಎಂಬ ಪ್ರಶ್ನೆ ಎತ್ತಿರಲಿಲ್ಲ. ಆದರೆ ಆಗ ಪಕ್ಷಕ್ಕೆ ನಮ್ಮನ್ನು ಕರೆದುಕೊಂಡು ಬಂದು, ಎಲ್ಲಾ ನೋವು ಅನುಭವಿಸಿದ್ದು ಬಿಎಸ್‍ವೈ ಒಬ್ಬರೇ ಹೊರತು, ಈಗ ಅಧಿಕಾರ ಬಂದ ಬಳಿಕ ಎಲ್ಲರೂ ಮಾತಾಡುತ್ತಾರೆಂದು ಟಾಂಗ್ ನೀಡಿದರು.
ಸಚಿವ ಸಂಪುಟ ಪುನರಚನೆ ವಿಚಾರ: ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಸಿಎಂ ಹೇಳಿದ್ದಾರೆ. ಹಾಗೆಯೇ ಗುಜರಾತ್, ಯುಪಿ ಮಾದರಿಯಲ್ಲಿ ಜಿಲ್ಲಾ ಉಸ್ತುವಾರಿ ನೀಡಿದ್ದಾರೆ ಹೊರೆತು ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಹುಲಿಗೆ ಯಾವ ಕಾಡಾದರೇನು, ಹುಲಿ ಹುಲಿನೇ ಎಂದು ಚಿತ್ರದುರ್ಗ ಉಸ್ತುವಾರಿ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯ ಕೊರತೆ ವಿಚಾರ: ಮದುವೆಗಳು ಬೇರೆ, ಬೇರೆ ರೀತಿ ಆಗುತ್ತವೆ. ಆದರೆ ಈ ಮದುವೆ ಬೇರೆ ರೀತಿಯಲ್ಲಿ ಆಗಿದೆ. ಆಗ ಸರ್ಕಾರದಲ್ಲಿ ಸ್ಪಷ್ಟ ಬಹುಮತ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಈ ವೇಳೆ ಅವರೊಂದಿಗೆ ಶಾಸಕ ತಿಪ್ಪಾರೆಡ್ಡಿ ಇದ್ದರು.