ಹಾವೇರಿ: ಡಿ.ಕೆ.ಶಿವಕುಮಾರ್ ಅವರು ಆದಷ್ಟು ಬೇಗ ಸಿಎಂ ಆಗಬೇಕು ಅಂತ ಕನಸು ಕಾಣ್ತಿದ್ದಾರೆ. ಅಧಿಕಾರ ಕಳೆದುಕೊಂಡು ಹಪಾಹಪಿ ಆಗಿದ್ದಾರೆ. ಇದು ಮೂರ್ಖತನದ ಪರಮಾವಧಿಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
Advertisement
ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನವರು ಇದ್ದ ಅಧಿಕಾರ ಕಳೆದುಕೊಂಡು ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ. ಕಾಂಗ್ರೆಸ್ ನವರ ಹಗಲುಗನಸು ತಿರುಕನ ಕನಸಾಗುತ್ತೆ ವಿನಃ ಅದು ನನಸಾಗೋದಿಲ್ಲ. 122 ಜನ ಶಾಸಕರನ್ನು ಹೊಂದಿರುವ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿರುವ ರಾಷ್ಟ್ರಪತಿ ಆಡಳಿತ ತರಬೇಕು ಅನ್ನೋರಿಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ. ಅವರಿಗೆ ಒಂದು ರೀತಿಯಲ್ಲಿ ಹತಾಷೆ ಮನೋಭಾವನೆ ಬಂದಿದೆ ಎಂದಿದ್ದಾರೆ.
Advertisement
ಡಿಕೆಶಿ ಇರಬಹುದು ಅಥವಾ ಕಾಂಗ್ರೆಸ್‍ನ ಯಾರೇ ಇರಬಹುದು. ಅವರು ಕಮೀಷನ್ ತೆಗೆದುಕೊಳ್ಳುವುದರಲ್ಲಿ ಎಕ್ಸ್ ಪರ್ಟ್. ಹೀಗಾಗಿ ಅವರು ಕಮೀಷನ್ ಬಿಟ್ಟು ಬೇರೆ ಏನೂ ಮಾತನಾಡುವುದಿಲ್ಲ. ಮಾತನಾಡುವುದಕ್ಕೂ ಕಮೀಷನ್ ತೆಗೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಶಾಲೆಯಲ್ಲಿ ಕೊರೊನಾ ಸ್ಫೋಟ – 33 ವಿದ್ಯಾಥಿಗಳಿಗೆ ಸೋಂಕು
Advertisement
Advertisement
ಇದೇ ವೇಳೆ ಗುತ್ತಿಗೆದಾರನೊಬ್ಬ ಕಮೀಷನ್ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವ ದೂರು ಅದು, ಸುಮ್ಮನೆ ಬೂಟಾಟಿಕೆ. ಜನರ ಗಮನ ಸೆಳೆಯಲು, ನಮ್ಮ ಕಾಂಗ್ರೆಸ್ ಪಕ್ಷ ಜೀವಂತವಾಗಿದೆ ಅಂತ ತೋರಿಸಿಕೊಳ್ಳೋಕೆ ಆ ವ್ಯವಸ್ಥೆ ಕ್ರಿಯೆಟ್ ಮಾಡುತ್ತಿದ್ದಾರೆ. ಜನರು ದಡ್ಡರಲ್ಲ, ಬುದ್ಧಿವಂತರಾಗಿದ್ದಾರೆ. ಯಾರು ಏನು ಅಂತ ತಿಳಿದುಕೊಂಡು, ಯಾರಿಗೆ ಗೌರವ ಕೊಡಬೇಕು, ಯಾರನ್ನು ಆಯ್ಕೆ ಮಾಡಬೇಕು ಅನ್ನೋದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಹಂಸಲೇಖ ಬಗ್ಗೆ ನನಗೆ ಬಹಳ ಗೌರವವಿದೆ. ಸ್ವಾಮೀಜಿಗಳ ಬಗ್ಗೆಯೂ ನನಗೆ ಗೌರವವಿದೆ. ಯಾವುದೇ ವ್ಯಕ್ತಿ ತಾನು ಮಾತನಾಡಿದ್ದರ ಬಗ್ಗೆ ಪಶ್ಚಾತ್ತಾಪ ಪಟ್ರೆ, ಕ್ಷಮೆ ಕೇಳಿದರೆ ಅದಕ್ಕಿಂತ ದೊಡ್ಡ ಶಿಕ್ಷೆ ಇಲ್ಲ. ಅದು ಮುಗಿದು ಹೋದ ಅಧ್ಯಾಯ, ಅದನ್ನು ಮತ್ತೆ ಕೆಣಕೋ ಅವಶ್ಯಕತೆ ಇಲ್ಲ ಎಂದು ನುಡಿದಿದ್ದಾರೆ.
ಎಸಿಬಿ ದಾಳಿ ಕುರಿರಂತೆ, ಎಲ್ಲ ಸರ್ಕಾರದಲ್ಲೂ ಎಲ್ಲ ಅಧಿಕಾರಿಗಳಿದ್ದಾರೆ. ಅಧಿಕಾರಿಗಳೇನೂ ನಮ್ಮ ಸರ್ಕಾರ ಬಂದ ತಕ್ಷಣ ಹುಟ್ಟಿಕೊಂಡಿಲ್ಲ. ನಿನ್ನೆ, ಮೊನ್ನೆ ಅವರು ಹುಟ್ಟಿದವರೇನಲ್ಲ. ಯಾವತ್ತಿಂದೋ ಹುಟ್ಟಿಕೊಂಡು, ಇದ್ಕೊಂಡು ಬಂದವರು. ಅಕ್ರಮವಾಗಿ ಸಂಪತ್ತು ಮಾಡಿದ್ದಾರೆ, ಆದಾಯಕ್ಕಿಂತ ಹೆಚ್ಚಾಗಿದೆ ಅಂತ ಕಂಡು ಬಂದರೆ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ತೇವೆ. ಎಸಿಬಿ ದಾಳಿಗಳು ಆಗುತ್ತವೆ ಎಂದರು. ಇದನ್ನೂ ಓದಿ: “ಆಂಧ್ರ-ತೆಲಗು ರಾಜ್ಯಕ್ಕೆ ಕೇಡು” – ಮತ್ತೆ ನಿಜವಾಯ್ತು ಬಬಲಾದಿ ಮಠದ ಭವಿಷ್ಯ