ತುಮಕೂರು: ಯಾರು ಮಕ್ಕಳನ್ನು ಪ್ರಚೋದಿಸಿ ಧರ್ಮ ಶಿಕ್ಷಣಕ್ಕಿಂತ ಮುಖ್ಯ ಎಂದು ಹೇಳಿಕೊಟ್ಟಿದ್ದಾರೆ. ಅವರುಗಳು ಹಿಜಬ್ ವಿವಾದವನ್ನು ಇನ್ನೊಂದಿಷ್ಟು ದಿನ ಉಳಿಸಿಕೊಳ್ಳಲು ಪ್ರಯತ್ನ ಪಡುತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.
Advertisement
ಸಿದ್ದಗಂಗಾ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮಾಜದ ಅನೇಕ ಜನರು ಕೋರ್ಟನ್ನು ಮಧ್ಯಂತರ ತೀರ್ಪಿನ ಪರವಾಗಿ ಇದ್ದಾರೆ. ಅನೇಕ ಸಂಸ್ಥೆಗಳು ಕೋರ್ಟ್ ತೀರ್ಪಿನಂತೆ ನಡೆದುಕೊಂಡಿದ್ದಾರೆ. ಆದರೆ ಕೆಲವರು ಮಾತ್ರ ಅದನ್ನು ಪ್ರಚೋದಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!
Advertisement
Advertisement
1-10 ನೇ ತರಗತಿಯಲ್ಲಿ ಒಟ್ಟು 18.5 ಲಕ್ಷ ಮುಸ್ಲಿಂ ವಿದ್ಯಾರ್ಥಿನಿಯರು ಓದುತಿದ್ದು, ಅದರಲ್ಲಿ 200-300 ವಿದ್ಯಾರ್ಥಿನಿಯರು ಮಾತ್ರ ತಮಗೆ ಹಿಜಾಬ್ ಮುಖ್ಯ ಎಂದು ಶಾಲೆಗೆ ಬರುತಿಲ್ಲ. ಉಳಿದಂತೆ ಸುಮಾರು 18 ಲಕ್ಷ ವಿದ್ಯಾರ್ಥಿನಿಯರು ಎಂದಿನಂತೆ ಶಾಲೆಗೆ ಹಾಜರಾಗುತಿದ್ದಾರೆ ಎಂದಿದ್ದಾರೆ.