ಅಜೆರ್ಬೈಜಾನ್, ಅರ್ಮೇನಿಯಾ ಕಿತ್ತಾಟ- ಏನಿದು ವಿವಾದ?

Public TV
3 Min Read
121232

ಅಜೆರ್ಬೈಜಾನ್ (Azerbaijan) ಮತ್ತು ಅರ್ಮೇನಿಯಾ (Armania) ನಡುವೆ ನಾಗೋರ್ನೊ-ಕರಾಬಖ್ ಪ್ರದೇಶದ ವಿಚಾರವಾಗಿ ವಿವಾದಗಳಿವೆ. ಈ ವಿವಾದವು ಜನಾಂಗೀಯ ಮತ್ತು ಪ್ರಾದೇಶಿಕ ಸಂಘರ್ಷಕ್ಕೂ ಕಾರಣವಾಗಿದೆ. ಈ ವಿಚಾರವಾಗಿ ಕಳೆದ ಮೂರು ದಶಕಗಳಿಂದಲೂ ಈ ಪ್ರದೇಶದಲ್ಲಿ ಉದ್ವಿಗ್ನತೆ ಇದೆ. ಸ್ವಲ್ಪ ಸಮಯ ತಣ್ಣಗಾಗಿದ್ದ ಈ ವಿವಾದ ಮತ್ತೆ ಈಗ ಶುರುವಾಗಿದೆ.

ನಾಗೋರ್ನೋ-ಕರಾಬಖ್ ಎಂದರೇನು?

ಅರ್ಮೇನಿಯನ್ನಿಯರಿಂದ ಆಟ್ರ್ಸಾಖ್ ಎಂದು ಕರೆಯಲ್ಪಡುವ ನಾಗೋರ್ನೊ-ಕರಾಬಖ್ ಆಗಾಗ ಭೂಕುಸಿತ ಸಂಭವಿಸುವ ಪರ್ವತಗಳ ಪ್ರದೇಶವಾಗಿದೆ. ಅಲ್ಲಿ ಪ್ರಧಾನವಾಗಿ ಅರ್ಮೇನಿಯನ್ನರು 1,20,000 ಸಂಖ್ಯೆಯಷ್ಟಿದ್ದಾರೆ. ಅವರು ತಮ್ಮದೇ ಆದ ಸರ್ಕಾರವನ್ನು ಸಹ ಮಾಡಿಕೊಂಡಿದ್ದಾರೆ. ಕ್ರಿಶ್ಚಿಯನ್ನರಾದ ಇವರು ಈ ಪ್ರದೇಶದಲ್ಲಿ ಶತಶತಮಾನಗಳಿಂದಲೂ ವಾಸವಾಗಿದ್ದಾರೆ. ಈ ಪ್ರದೇಶ ಅರ್ಮೇನಿಯಾದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಆದರೆ ಅರ್ಮೇನಿಯಾ ಅಥವಾ ಯಾವುದೇ ಇತರ ದೇಶದೊಂದಿಗೆ ಅಧಿಕೃತವಾಗಿ ಗುರುತಿಸಲ್ಪಟ್ಟಿಲ್ಲ.

Azerbaijan

ಅಜೆರ್ಬೈಜಾನ್, ಈ ಪ್ರದೇಶದ ನಿವಾಸಿಗಳು ಹೆಚ್ಚಾಗಿ ಮುಸ್ಲಿಮರು. ಈ ಹಿಂದೆ ಇದು ಪರ್ಷಿಯನ್ನರು, ತುರ್ಕರು ಮತ್ತು ರಷ್ಯನ್ನರ ಆಳ್ವಿಕೆಗೆ ಒಳಪಟ್ಟಿತ್ತು. ಸೋವಿಯತ್ ಒಕ್ಕೂಟ ಕುಸಿದ ಬಳಿಕ ಇಲ್ಲಿ ಸ್ವತಂತ್ರ್ಯ ಸರ್ಕಾರ ರಚನೆಯಾಯಿತು. ಇದಾದ ಬಳಿಕ ನಾಗೋರ್ನೊ-ಕರಾಬಖ್ ವಿಚಾರವಾಗಿ ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ನಡುವೆ ವಿವಾದ ಹುಟ್ಟಿಕೊಂಡಿತು.

Azerbaijan 1

ಮೊದಲ ಕರಾಬಖ್ ಯುದ್ಧ

ಸೋವಿಯತ್ ಒಕ್ಕೂಟವು ಕುಸಿಯುತ್ತಿದ್ದಂತೆ ಮೊದಲ ಕರಾಬಾಖ್ (Karabakh War) ಯುದ್ಧ 1988-1994ರ ನಡುವೆ ಅರ್ಮೇನಿಯನ್ನರು ಮತ್ತು ಅಜೆರ್ಬೈಜಾನ್ ನಡುವೆ ನಡೆಯಿತು. ನಾಗೋರ್ನೊ-ಕರಾಬಖ್ ಪ್ರದೇಶವನ್ನು ಈ ವೇಳೆ ಅರ್ಮೇನಿಯನ್ ಪಡೆಗಳು ಅಜೆರ್ಬೈಜಾನ್‍ನಿಂದ ವಶಪಡಿಸಿಕೊಂಡಿತು. ಈ ಯುದ್ಧದಲ್ಲಿ ಸುಮಾರು 30,000 ಜನರು ಕೊಲ್ಲಲ್ಪಟ್ಟರು. ಅಲ್ಲದೇ ಹತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಗೊಳಿಸಲಾಯಿತು. 

Azerbaijan 2

ಎರಡನೇ ಕರಾಬಖ್ ಯುದ್ಧ

ದಶಕಗಳ ನಂತರ ಅಜೆರ್ಬೈಜಾನ್ ಮಿಲಿಟರಿ ಕಳೆದುಕೊಂಡಿದ್ದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅದು ಎರಡನೇ ಕರಾಬಖ್ ಯುದ್ಧವಾಗಿ ತಿರುಗಿತು. ಯುದ್ಧದಲ್ಲಿ ಅಜೆರ್ಬೈಜಾನ್ ಗೆಲುವು ಸಾಧಿಸಿತು. ಈ ಹಿಂದೆ ಅರ್ಮೇನಿಯನ್ ಗೆದ್ದಿದ್ದ ಪ್ರದೇಶಗಳನ್ನು ಮರಳಿ ಪಡೆಯಿತು.

ಈ ಯುದ್ಧದಲ್ಲಿ ಟರ್ಕಿ ಮತ್ತು ಇಸ್ರೇಲ್‍ನಿಂದ ಖರೀದಿಸಿದ ಡ್ರೋನ್‍ಗಳ ಬಳಕೆ ಮಾಡಲಾಗಿತ್ತು. ಇದು ಅಜೆರ್ಬೈಜಾನ್ ವಿಜಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದೆಂದು ಉಲ್ಲೇಖವಾಗಿದೆ. ಈ ಯುದ್ಧದಲ್ಲಿ ಕನಿಷ್ಠ 6,500 ಜನರು ಸಾವಿಗೀಡಾಗಿದ್ದಾರೆ. 

ಅರ್ಮೇನಿಯಾದ ಹಾಗೂ ಅಜೆರ್ಬೈಜಾನ್ ಜೊತೆಗೆ ರಷ್ಯಾ ಉತ್ತಮ ಸಂಬಂಧವನ್ನು ಹೊಂದಿದೆ. ಇದರಿಂದಾಗಿ ಈ ವೇಳೆ ಕದನ ವಿರಾಮದ ಮಾತುಕತೆ ನಡೆಸಿತ್ತು. ಬಳಿಕ ಈ ವಿವಾದ ಆ ಸಮಯಕ್ಕೆ ನಿಂತಿತ್ತು.

ಮತ್ತೆ ಆರಂಭಗೊಂಡ ಬಿಕ್ಕಟ್ಟು

ಏಪ್ರಿಲ್ 2023 ರಲ್ಲಿ ಅಜೆರ್ಬೈಜಾನ್ ತನ್ನ ಗಡಿಯಲ್ಲಿ ಭದ್ರತಾ ತಪಾಸಣಾ ಕೇಂದ್ರವನ್ನು ಸ್ಥಾಪಿಸಿತು. ಈ ಮೂಲಕ ಅರ್ಮೇನಿಯಾ ಮತ್ತು ನಾಗೋರ್ನೊ-ಕರಾಬಖ್‍ನ ರಸ್ತೆ ಮಾರ್ಗವನ್ನು ತುರ್ತು ವೈದ್ಯಕೀಯ ವಿಚಾರ ಹೊರತುಪಡಿಸಿ ಸರಕು ಸಾಗಾಣಿಕೆಗೆ ನಿರ್ಬಂಧಿಸಿತು. ಇದು ಆಹಾರ ಸಾಮಾಗ್ರಿಗಳ ಕೊರತೆಯ ಆತಂಕವನ್ನು ಹುಟ್ಟು ಹಾಕಿತು. ಇದು ಮತ್ತೆ ಎರಡು ಪ್ರದೇಶಗಳ ನಡುವಿನ ವಿವಾದಕ್ಕೆ ಕಾರಣವಾಯಿತು. ಇದು ಮತ್ತೆ ಯುದ್ಧಕ್ಕೆ ಪ್ರಚೋದನೆಯನ್ನು ನೀಡಿತು. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಯುದ್ಧದಲ್ಲಿ 25ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಬಳಿಕ ರಷ್ಯಾ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆ ನಡೆಸಲಾಯಿತು.

ಈ ವೇಳೆ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್, ಅರ್ಮೇನಿಯನ್ ಹೋರಾಟಗಾರರ ನಡುವಿನ ಯುದ್ಧ ಕೊನೆಯಾಗಿದೆ. ಪ್ರತ್ಯೇಕವಾದಿ ಹೋರಾಟಗಾರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ. ಈ ಮೂಲಕ ನಾಗೋರ್ನೊ-ಕರಾಬಖ್ ಮೇಲೆ ಸರ್ಕಾರ ಮರಳಿ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ.

Web Stories

Share This Article