Connect with us

Latest

ತಾಜ್‍ಮಹಲ್ ಧ್ವಂಸಗೊಳಿಸಿದರೆ ನಾನು ಉತ್ತರ ಪ್ರದೇಶ ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ: ಅಜಂ ಖಾನ್

Published

on

Share this

ನವದೆಹಲಿ: ತಾಜ್‍ಮಹಲ್ ನಾಶಮಾಡಿದರೆ ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿನಾಥ್ ಅವರ ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ತಾಜ್ ಮಹಲ್, ಕೆಂಪು ಕೋಟೆ, ಸಂಸತ್ ಭವನಗಳು ಹಾಗೂ ಕುತುಬ್ ಮಿನಾರ್ ಮುಂತಾದ ಸ್ಮಾರಕಗಳು ಗುಲಾಮಗಿರಿಯ ಸಂಕೇತವಾಗಿವೆ. ಈ ವಾದ-ವಿವಾದಗಳು ಕಳೆದ ಕೆಲವು ದಶಕಗಳಿಂದ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ತಾಜ್‍ಮಹಲ್ ಅನ್ನು ಧ್ವಂಸಗೊಳಿಸುವ ನಿರ್ಧಾರ ತೆಗೆದುಕೊಂಡರೆ ನಾನು ಆ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.

ಪ್ರವಾಸೋದ್ಯಮ ಇಲಾಖೆ 32 ಪುಟಗಳುಳ್ಳ `ಉತ್ತರ ಪ್ರದೇಶದ ಪ್ಯಾರ್ಯಟನ್- ಅಪಾರ ಸಂಭವನೀಯೆನ್’ ಶೀರ್ಷಿಕೆ ಅಡಿಯಲ್ಲಿ ಒಂದು ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯದ ಸಾಂಸ್ಕøತಿಕ ಮತ್ತು ಪರಂಪರೆಯ ತಾಣಗಳ ಬಗ್ಗೆ ಮಾಹಿತಿಯನ್ನು ಹೊಂದಿದೆ. ಆದರೆ ಈ ಕೈಪಿಡಿಯಲ್ಲಿ ವಿಶ್ವದ ಏಳು ಅದ್ಭುತ ತಾಣಗಳಲ್ಲಿ ಒಂದಾಗಿರುವ ತಾಜ್‍ಮಹಲ್ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.

ಈ ಕೈಪಿಡಿಯನ್ನು ರಾಜ್ಯ ಪ್ರವಾಸೋದ್ಯಮ ಸಚಿವೆ ರೀಟಾ ಬಹುಗುಣ ಅವರು ಬಿಡುಗಡೆ ಮಾಡಿದ್ದು, ಇದರಲ್ಲಿ ವಾರಣಾಸಿಯಲ್ಲಿರುವ ಗಂಗಾ ಆರತಿಯ ಚಿತ್ರವು ಮುಖಪುಟದಲ್ಲಿದೆ. ಜೊತೆಗೆ ಸಿಎಂ ಆದಿತ್ಯನಾಥ್ ಮತ್ತು ಬಹುಗುಣ ಅವರ ಸಾಂಪ್ರದಾಯಿಕ ದೀಪವು ಪುಸ್ತಕದ ಒಳಗಡೆ ಇದೆ. ಈ ಕೈಪಿಡಿ ಬಿಡುಗಡೆ ಮಾಡಿದ ಕೆಲವು ಗಂಟೆಗಳಲ್ಲಿ ಅಜಂ ಖಾನ್ ವಿವಾದಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇವರ ಪ್ರತಿಕ್ರಿಯೆಗೆ ಬಹುಗುಣ ಅವರು, ತಾಜ್‍ಮಹಲ್ ವಿಶ್ವ ಪರಂಪರೆಯ ಮತ್ತು ಪ್ರಖ್ಯಾತ ಪ್ರವಾಸಿಗರ ಆಕರ್ಷಣೆಯ ಸ್ಥಳವಾಗಿದೆ. ಇದರ ಸುತ್ತಲಿನ ಸೌಕರ್ಯಗಳ ಸುಧಾರಣೆಗಾಗಿ ನಾವು 156 ಕೋಟಿ ರೂ.ಗಳನ್ನು ನೀಡಿದ್ದೇವೆ ಎಂದು ಹೇಳಿದರು.

ಹೊಸದಾಗಿ ಬಿಡುಗಡೆಯಾದ ಕೈಪಿಡಿಯಲ್ಲಿ ಪ್ರೀತಿಯ ಸಂಕೇತವಾದ, ಸಾಂಪ್ರದಾಯಿಕ ಸ್ಮಾರಕವಾದ ತಾಜ್‍ಮಹಲ್ ಹೆಸರನ್ನು ಬಿಟ್ಟಿರುವುದರಿಂದ ಕಾಂಗ್ರೆಸ್ ಉಪಾಧ್ಯಾಕ್ಷ ರಾಹುಲ್ ಗಾಂಧಿ ಅವರು ಕೂಡ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ದೀಪದ ಬೆಳಕಿನಿಂದ ಸೂರ್ಯನೇನೂ ಸುಂದರವಾಗಿ ಕಾಣಿಸುವುದಿಲ್ಲ. ಹೀಗಾಗಿ ಕವಿ ಭರತೇಂದು ಒಂದು ಮಾತನ್ನು ಹೇಳ್ತಾರೆ, `ಕತ್ತಲೆಯ ರಾಜ್ಯ, ಹುಚ್ಚು ದೊರೆ’ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement