ವಾಷಿಂಗ್ಟನ್: ನಾಡಿನಾದ್ಯಂತ ಈ ಬಾರಿಯ 75ನೆ ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಗಿತ್ತು. ಕೇವಲ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿರುವ ಕನ್ನಡಿಗರು ಕೂಡ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮ, ಸಡಗರದಿಂದಲೇ ಆಚರಿಸಿದ್ದಾರೆ.
Advertisement
ಹೌದು. ಅಮೆರಿಕಾದ ಸಿಯಾಟಲ್ ನಗರದಲ್ಲಿ ಅತೀ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಹೀಗಾಗಿ ಈ ಬಾರಿಯ ಸ್ವಾತಂತ್ರ್ಯದ ದಿನದ ಅಮೃತಮಹೋತ್ಸವವನ್ನು ಇಲ್ಲಿನ ಕನ್ನಡಿಗರು ಹೆಮ್ಮೆಯಿಂದ ಆಚರಿಸಿದ್ದಾರೆ. ರಿಮ್ ಜಿಮ್ ತಂಡದ ಸಂಗೀತ ರಸಸಂಜೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ: ಸಿಎಂ
Advertisement
Advertisement
ಈ ಸಂಗೀತ ರಸಸಂಜೆಯಲ್ಲಿ ಜನರಿಗೆ ಕನ್ನಡ, ಹಿಂದಿ, ತಮಿಳು, ತೆಲುಗು, ಬಂಗಾಳಿ ಹಾಡುಗಳನ್ನು ಕೇಳಲು ಅವಕಾಶ ದೊರೆತಂತಾಯಿತು. ವಿದೇಶಿ ನೆಲದಲ್ಲಿ ನಡೆದ ಈ ಅಮೃತ ಮಹೋತ್ಸವದ ಆಚರಣೆಯಲ್ಲಿ ಸರಿ ಸುಮಾರು 2,000 ಜನರು ಪಾಲ್ಗೊಂಡರು. ಸಿಯಾಟಲ್ ನಗರದಲ್ಲಿ ಅನೇಕ ಭಾರತೀಯರು ನೆಲೆಸಿರುವುದರಿಂದ ಈ ಆಚರಣೆ ಹೆಚ್ಚಿನ ಮಹತ್ವ ಪಡೆದಿದೆ.
Advertisement
ಒಟ್ಟಿನಲ್ಲಿ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದರೂ ಕನ್ನಡಿಗರಿಗೆ ತಮ್ಮ ನಾಡು ಹಾಗೂ ಭಾಷೆಯ ಬಗ್ಗೆ ಅಭಿಮಾನ ಕಿಂಚಿತ್ತೂ ಕಡಿಮೆಯಾಗಲ್ಲ. ಎಲ್ಲೆ ಇದ್ದರೂ ಕನ್ನಡಿಗರು ತಮ್ಮ ಹಬ್ಬ ಹರಿದನಗಳನ್ನು ಚಿಕ್ಕದಾಗಿಯಾದರೂ ಆಚರಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಸಿಯಾಟಲ್ ನಗರದಲ್ಲಿ ಆಚರಿಸಿದ ಸ್ವಾತಂತ್ರ್ಯ ದಿನಾಚರಣೆಯಾಗಿದೆ.