ಸಾಂದರ್ಭಿಕ ಚಿತ್ರ
ಕಾರವಾರ: ಕಾಳಿನದಿಯಲ್ಲಿ ಸ್ನಾನಕ್ಕೆ ಇಳಿದ ವ್ಯಕ್ತಿಯೊಬ್ಬರು ಮೊಸಳೆಯೊಂದಿಗೆ ಹೋರಾಡಿ ಬದುಕಿ ಬಂದಿದ್ದಾರೆ.
Advertisement
ದಾಂಡೇಲಿಯ ನಿರ್ಮಲ ನಗರ ನಿವಾಸಿಯಾಗಿರುವ ನಾಗೇಶ್ ಈಶ್ವರ ಬಳ್ಳಾರಿ (43) ಅಯ್ಯಪ್ಪ ಮಾಲಾಧಾರಣೆಗಾಗಿ ಕಾಳಿ ನದಿ ನೀರಿನಲ್ಲಿ ಸ್ನಾನಕ್ಕೆಂದು ಇಳಿದಿದ್ದರು. ಸ್ನಾನ ಮಾಡುವಾಗ ಏಕಾಏಕಿ ಮೊಸಳೆಯನ್ನು ಅವರ ಕಾಲನ್ನು ಕಚ್ಚಿ, ನೀರಿನ ಆಳಕ್ಕೆ ಎಳೆದುಕೊಂಡು ಹೋಗಿತ್ತು. ಈ ವೇಳೆ ನಾಗೇಶ್ ನೀರಿನಲ್ಲಿಯೇ ಮೊಸಳೆಯೊಂದಿಗೆ ಹೋರಾಡಿ, ಆಶ್ಚರ್ಯಕರ ರೀತಿಯಲ್ಲಿ ಬದುಕಿ ಬಂದಿದ್ದಾರೆ.
Advertisement
Advertisement
ಎದೆ, ಕೈ ಹಾಗೂ ಕಾಲಿನ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡು ನದಿಯ ಮತ್ತೊಂದು ಭಾಗದ ಬಂಡೆ ಮೇಲೆ ಆಶ್ರಯ ಪಡೆದಿದ್ದರು. ಮೊಸಳೆ ದಾಳಿಯಿಂದ ಆಘಾತಕ್ಕೆ ಒಳಗಾಗಿದ್ದ ನಾಗೇಶ್ ಮಾತನಾಡದ ಸ್ಥಿತಿಗೆ ತಲುಪಿದ್ದರು. ಈ ವೇಳೆ ಮೊಸಳೆ ದಾಳಿಯ ಮಾಹಿತಿ ಪಡೆದ ಅರಣ್ಯ ಇಲಾಖೆ ಹಾಗೂ ಪೊಲೀಸರು, ನಾಗೇಶ್ ಅವರರನ್ನು ಪತ್ತೆ ಮಾಡಿ ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ.
Advertisement
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv