ಚಿಕ್ಕಮಗಳೂರು: ವಿದ್ಯುತ್ ವ್ಯತ್ಯಯವಾಗಿ ನೆಟ್‍ವರ್ಕ್ (Mobile Network) ಇಲ್ಲದ ಕಾರಣ ಸ್ಥಳೀಯರು ಸಮೀಪದ ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ (Ayushman Card) ನೋಂದಣಿ ಮಾಡಿಸಿಕೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ.
Advertisement
ಕಳಸ ತಾಲೂಕಿನ ಕಳಕೋಡು ಹಾಗೂ ಕಾರ್ಲೆ ಗ್ರಾಮಸ್ಥರು ಗುಡ್ಡ ಹತ್ತಿ ಕಾರ್ಡ್ ನೋಂದಣಿ ಮಾಡಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕೇಂದ್ರ ಸರ್ಕಾರದ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಹಳ್ಳಿಗರಿಗೆ (Village) ನೋಂದಣಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ, ಸಂಸೆ, ಕಾರ್ಲೆ, ಕಳಕೋಡು ಗ್ರಾಮದಲ್ಲಿ ನೆಟ್‍ವರ್ಕ್ ಸಮಸ್ಯೆ ಯಥೇಚ್ಚವಾಗಿದೆ. ಕರೆಂಟ್ ಹೋದರೆ ನೆಟ್‍ವರ್ಕ್ ಫುಲ್ ಕಟ್ ಆಗುತ್ತೆ. ಮಾಡಿದ ಕೆಲಸವೆಲ್ಲಾ ವೇಸ್ಟ್ ಆಗುತ್ತೆ. ಹಾಗಾಗಿ, ಕರೆಂಟ್ ಇಲ್ಲದ ಕಾರಣ ಧರ್ಮಸ್ಥಳ ಸಂಘದವರು ಸಮೀಪದ ಗುಡ್ಡ ಹತ್ತಿ ನೆಟ್‍ವರ್ಕ್ ಹುಡುಕಿದ್ದಾರೆ. ಹಳ್ಳಿಗರಿಗೆ ಅಲ್ಲೇ ಕಾರ್ಡ್ ನೋಂದಣಿ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಮೊದಲ ಬಲಿ – ಸ್ಥಳದಲ್ಲಿಯೇ ಮಹಿಳೆ ಸಾವು
Advertisement
Advertisement
ಕಾರ್ಡ್ ನೋಂದಣಿ ವೇಳೆಯೂ ವಿದ್ಯುತ್ ಕೈಕೊಟ್ಟಿತ್ತು. ಸಂಸೆಯಲ್ಲಿರುವ ಟವರ್‌ನ ಮೊಬೈಲ್ ನೆಟ್‍ವರ್ಕ್ ಕೂಡ ಕಡಿತವಾಗಿತ್ತು. ಆದ್ರೆ, ಕೆಲಸ ಮಾಡಲೇಬೇಕು ಅಂತ ಸಂಘಟಕರು ನೆಟ್‍ವರ್ಕ್ ಹುಡಕಿ ಗುಡ್ಡಕ್ಕೆ ಹೊರಟಿದ್ದರು. ಗುಡ್ಡದಲ್ಲಿ ನೆಟ್‍ವರ್ಕ್ ಸಿಗುವ ಸ್ಥಳದಲ್ಲೇ ನೋಂದಣಿ ಮಾಡಿದ್ದಾರೆ. ಗ್ರಾಮಸ್ಥರು-ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಿಬ್ಬಂದಿ ಕೂಡ ಬೆಟ್ಟ ಹತ್ತಿ ನೋಂದಣಿ ಮಾಡಿದ್ದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇಂತಹ ಪರಿಸ್ಥಿತಿ ಗ್ರಾಮಗಳಲ್ಲಿ ಪದೇ ಪದೇ ಕೇಳಿ ಬಂದರೂ ಸಮಸ್ಯೆ ಮಾತ್ರ ಹಾಗೇ ಉಳಿದುಕೊಳ್ಳುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗಲಾರದಂತ ಸ್ಥಿತಿ ನಿರ್ಮಾಣ: ಶಾಮನೂರು ಶಿವಶಂಕರಪ್ಪ