ಬೆಂಗಳೂರು: ಬಿಪಿಎಲ್ ಕಾರ್ಡ್‍ದಾರರಿಗೆ (BPL Card) ಉಚಿತ ಚಿಕಿತ್ಸೆ ಹಾಗೂ ಎಪಿಎಲ್‍ನವರಿಗೆ 30% ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ಪಡೆಯುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಯೋಜನೆಗೆ (Ayushman Bharat Arogya Karnataka) ಈಗ ಯಾವ ಕಿಮ್ಮತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ (Hospital) ಎಲ್ಲಿ ಕೇಳಿದ್ರೂ ಬಹುತೇಕ ಈ ಹೆಲ್ತ್ ಕಾರ್ಡ್‍ಗೆ (Health Card) ನಯಾ ಪೈಸೆ ಬೆಲೆಯೂ ಇಲ್ಲ ಎಂಬುದನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ.
ಬಡವರಿಗೆ ಉಚಿತವಾಗಿ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಸಿಗಬೇಕು. ಎಪಿಎಲ್ ಕಾರ್ಡ್‍ದಾರರಿಗೂ ರಿಯಾಯಿತಿಯಲ್ಲಿ ಚಿಕಿತ್ಸೆ ಸಿಗಬೇಕು ಎಂದು ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‍ನ್ನು ಜಾರಿಗೆ ತಂದಿದೆ. ಈ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಹೆಲ್ತ್ ಕಾರ್ಡ್ ಈಗ ಕೋಮಾ ಸ್ಥಿತಿಯಲ್ಲಿದೆ. ರೋಗಿಗಳು ಈ ಕಾರ್ಡ್ ನಂಬಿಕೊಂಡು ಖಾಸಗಿ ಆಸ್ಪತ್ರೆಗೆ ಹೋದರೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ಕಾರ್ಡ್‍ನ್ನು ಖಾಸಗಿ ಆಸ್ಪತ್ರೆಗಳು ಪರಿಗಣಿಸುತ್ತಿಲ್ಲ ಎಂಬುದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ಚಿಕನ್ ಸಾರು ಮಾಡಿಲ್ಲವೆಂದು ಪತ್ನಿ ಕೊಲೆಗೈದಿದ್ದ ಪತಿಗೆ 6 ವರ್ಷ ಜೈಲು
Advertisement
Advertisement
ಪಬ್ಲಿಕ್ ಟಿವಿ 4 ಕಡೆಗಳಲ್ಲಿ ರಿಯಾಲಿಟಿ ಚೆಕ್ ಮಾಡಿ ಮಾಹಿತಿ ಕಲೆಹಾಕಿದೆ. ಈ ವೇಳೆ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡ್ ಅಪ್ಲೈ ಆಗುತ್ತಾ ಎಂದು ಕೇಳಿದ ಪ್ರಶ್ನೆಗೆ, ಆಸ್ಪತ್ರೆಯವರು ನಮ್ ಬಳಿ ಇಲ್ಲ. ಸ್ವಲ್ಪ ಎಮರ್ಜೆನ್ಸಿ ಇದೆ ಚೆಕ್ ಮಾಡಿ ಹೇಳಿ ಎಂದಿದ್ದಕ್ಕೆ, ಚೆಕ್ ಮಾಡಿಯೇ ಹೇಳುತ್ತಿದ್ದೇವೆ. ರೋಗಿಗೆ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಎನ್ನುತ್ತಿದ್ದಂತೆ ಪ್ರೈವೆಟ್ ಇನ್ಶೂರೆನ್ಸ್ ಇಲ್ವಾ? ಆಯುಷ್ಮಾನ್ ಕಾರ್ಡ್ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಈ ಮೂಲಕ ಕೇಂದ್ರ ಸರ್ಕಾರದ ಮಹತ್ವದ ಯೊಜನೆಯೊಂದನ್ನು ಆಸ್ಪತ್ರೆಗಳು ಪರಿಗಣಿಸದೆ ವೆಚ್ಚ ಭರಿಸಲಾಗದ ರೋಗಿಗಳಿಂದ ಸುಲಿಗೆಗೆ ಮುಂದಾಗಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿಯ ತಂದೆ ಅನುಮಾನಾಸ್ಪದ ಸಾವು