ಬಾಗಲಕೋಟೆ: ಶಕ್ತಿಶಾಲಿ ಸಮಾಜ ಕಟ್ಟಬೇಕಿದ್ದಲ್ಲಿ ಸಮಸ್ತ ಹಿಂದೂಗಳು (Hindu) ಆಯುಧ ಪೂಜೆ ಮಾಡಬೇಕು. ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ (Narayana Bhandage) ಕರೆ ನೀಡಿದ್ದಾರೆ.
ನವಮಿ ಅಂದ್ರೆ ಬಹಳಷ್ಟು ಜನ ಮರೆತಿದ್ದು ಕೇವಲ ಊಟ ಮಾಡುವುದು ಹಬ್ಬ ಅಂತಾಗಿದೆ. ನಿಜವಾಗಿಯೂ ನವಮಿ (Navami) ಅಂದರೆ ಆಯುಧ ಪೂಜೆ ಮಾಡಬೇಕು. ಸೈನಿಕರು, ಪೊಲೀಸರು ಆಯುಧ ಪೂಜೆ ಮಾಡ್ತಾರೆ. ನಾಳೆ ಎಲ್ಲರೂ ಆಯುಧ ಪೂಜೆ (Ayudha Puja) ಮಾಡಬೇಕು ಎಂದರು. ಇದನ್ನೂ ಓದಿ: Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?
ದೇಶ, ರಾಷ್ಟ್ರ, ಸಮಾಜ ರಕ್ಷಣೆ ಮಾಡಬೇಕಿದ್ದಲ್ಲಿ ದುರ್ಗಾ ಮಾತೆಯ ಶಕ್ತಿ ನಮಗೆ ಬರಬೇಕು. ಅದಕ್ಕಾಗಿ ಎಲ್ಲರೂ ಆಯುಧ ಪೂಜೆ ಮಾಡಬೇಕು. ಯಾರಲ್ಲಿ ಆಯುಧಗಳು ಇಲ್ವೋ ಅವರೆಲ್ಲಾಹೊಸದಾಗಿಯಾದ್ರೂ ಖರೀದಿ ಮಾಡಬೇಕು. ಮುಂದಿನ ದಿನಗಳಲ್ಲಿ ಆಯುಧಗಳ ಪೂಜೆ ಬಹಳ ಅವಶ್ಯಕತೆ ಇದೆ ಎಂದು ಹೇಳಿದರು.
ಹಿಂದೂಗಳಿಗೆ ಶಸ್ತ್ರ ಮತ್ತು ಶಾಸ್ತ್ರ ಎರಡೂ ಬೇಕು. ಸಮರಕ್ಕೆ ಶಸ್ತ್ರ ಬೇಕಾಗುತ್ತೆ, ಅಭ್ಯಾಸಕ್ಕೆ ಶಾಸ್ತ್ರ ಬೇಕಾಗುತ್ತದೆ. ಹಿಂದೂ ಸಮಾಜ ಯಾವತ್ತೂ ಶಕ್ತಿಶಾಲಿ ಸಮಾಜ. ಎಂದಿಗೂ ನಿರ್ವೀರ್ಯ ಸಮಾಜ ಅಲ್ಲ, ನಾವು ಯಾರಿಗೂ ಅನ್ಯಾಯ ಮಾಡಲು ಹೋಗುವುದಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

