‘ಮುಡಿ ಕೊಟ್ಟಿದ್ದಕ್ಕೆ ಯಶ್ ವಿರುದ್ಧ ಐರಾ ಗರಂ’

Public TV
2 Min Read
yash ayra

– ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪ್ರಕಟಿಸಿದ ಯಶ್
– ಯಶ್- ಐರಾ ಫನ್ನಿ ಮಾತುಕತೆಗೆ ಅಭಿಮಾನಿಗಳ ಕಮೆಂಟ್

ಬೆಂಗಳೂರು: ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್ ಇಂದು ಬೆಳಗ್ಗೆ ತಮ್ಮ ಮುದ್ದು ಮಗಳು ಐರಾಳ ಮುಡಿ ತೆಗೆಸಿದ್ದಾರೆ. ಇದೀಗ ಮುಡಿ ತೆಗೆಸಿದ್ದಕ್ಕೆ ಐರಾ ತನ್ನ ತಂದೆಯ ವಿರುದ್ಧ ಗರಂ ಆಗಿದ್ದಾಳೆ.

ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಗೆ ಇಂದು ಬೆಳ್ಳಂಬೆಳಗ್ಗೆ ಯಶ್ ಮತ್ತು ರಾಧಿಕಾ ಆಗಮಿಸಿದ್ದರು. ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ತೆಗೆಸಿ ಹರಕೆ ತೀರಿಸಿದರು. ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಯಶ್ ಮತ್ತು ರಾಧಿಕಾ ದಂಪತಿ ಕುಳಿತು ದೇವರಿಗೆ ವಂದಿಸಿದರು.

mys yash copy

ಯಶ್, ಐರಾ ಜೊತೆಗಿರುವ ಫೋಟೋವೊಂದನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಐರಾ ತನ್ನ ತಂದೆಯನ್ನು ಕೋಪದಿಂದ ನೋಡುತ್ತಿದ್ದಾಳೆ. ಯಶ್ ಈ ಫೋಟೋ ಹಾಕಿ ಅದಕ್ಕೆ, “ಐರಾ: ಅಪ್ಪ ಈಗ ಸಮ್ಮರ್ ಎಂದು ನನಗೆ ಗೊತ್ತು. ಆದರೆ ಇದು ಸಮ್ಮರ್ ಕಟ್ ಅಲ್ಲ ಎಂದು ನನಗೆ ಪಕ್ಕಾ ತಿಳಿದಿದೆ. ಅಪ್ಪ: ಸರಿ” ಎಂದು ಫನ್ನಿ ಕ್ಯಾಪ್ಷನ್ ನೀಡಿದ್ದಾರೆ.

 

View this post on Instagram

 

Ayra : Dad I know its summer… but I’m damn sure THIS is NOT summer cut!!! Dad : Well… ahem!! ????

A post shared by Yash (@thenameisyash) on

ಯಶ್ ಅವರ ಪೋಸ್ಟ್ ಗೆ ಅಭಿಮಾನಿಗಳು ಭರ್ಜರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಫೋಟೋ ನೋಡಿ, ‘ಐರಾ ಕೋಪದಲ್ಲಿದ್ದಾಳೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ‘ಐರಾ ಸಖತ್ ಕ್ಯೂಟ್ ಆಗಿ ಕಾಣುತ್ತಿದ್ದಾಳೆ’ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳು ಐರಾಳ ಮುಡಿ ತೆಗೆಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಧಿಕಾ 2018 ಡಿಸೆಂಬರ್ 2ರಂದು ಐರಾಳಿಗೆ ಜನ್ಮ ನೀಡಿದ್ದರು. ಅಲ್ಲದೆ ಡಿಸೆಂಬರ್ ನಲ್ಲಿ ಮಗಳ ಮೊದಲ ಹುಟ್ಟುಹಬ್ಬವನ್ನು ಯಶ್ ಹಾಗೂ ರಾಧಿಕಾ ಅದ್ಧೂರಿಯಾಗಿ ಆಚರಿಸಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *