ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಂಗ್ ದಂಪತಿಯ ಪುತ್ರಿ

Public TV
2 Min Read
Yash ayra

ಬೆಂಗಳೂರು: ರಾಕಿಂಗ್ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮಗಳು ಐರಾ ಇಂದು ತನ್ನ ಮೊದಲನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾಳೆ.

ರಾಧಿಕಾ ತಮ್ಮ ಇನ್‍ಸ್ಟಾದಲ್ಲಿ ಮಗಳ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ, “ನನ್ನ ಹೃದಯದ ಹಾಗೂ ಆತ್ಮದ ಒಂದು ಭಾಗ ನೀನು, ನನ್ನ ಏಂಜೆಲ್‍ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬರ್ತ್ ಡೇಗೂ ಮುನ್ನವೇ ಐರಾಳ ಕ್ಯೂಟ್ ಫೋಟೋಶೂಟ್

 

View this post on Instagram

 

To the one who is a piece of my heart, a part of my soul ♥️ HAPPY BIRTHDAY my angel ???? #radhikapandit #nimmaRP

A post shared by Radhika Pandit (@iamradhikapandit) on

ಐರಾಳ ಮೊದಲ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಕಿಂಗ್ ದಂಪತಿ ತಮ್ಮ ಮಗಳ ಫೋಟೋಶೂಟ್ ಮಾಡಿಸಿದ್ದರು. ಮನೆಯೊಳಗೆ ಮತ್ತು ಹೊರಗೆ ಐರಾಳನ್ನು ಕೂರಿಸಿ ಫೋಟೋ ಕ್ಲಿಕ್ಕಿಸಲಾಗಿತ್ತು. ಜೊತೆಗೆ ಐರಾ ಕೂಡ ಕ್ಯಾಮೆರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಳು.

ಐರಾಳ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇತ್ತೀಚೆಗಷ್ಟೆ ರಾಧಿಕಾ, ಮಗಳು ಐರಾ ಬಿಸಿಲಲ್ಲಿ ನೋಡುವುದು ಹೇಗೆ ಎಂದು ತೋರಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು ಲಕ್ಷಾಂತರ ಅಭಿಮಾನಿಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ನಟಿ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಐರಾ, ಸಹೋದರನ ಜೊತೆ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *