– ಪ್ರಾಣ ಪ್ರತಿಷ್ಠೆಯ ದಿನವೂ ಅರ್ಪಣೆಯಾಗಲಿದೆ ಈ ವಿಶೇಷ ತುಳಸಿ
ಬೆಂಗಳೂರು: ಅಯೋಧ್ಯೆಯಲ್ಲಿ (Ayodhya) ರಾಮೋತ್ಸವದ ಸಂಭ್ರಮಕ್ಕೆ ಇಡೀ ಭಾರತವೇ ಸಾಕ್ಷಿಯಾಗಲಿದೆ. ಎಲ್ಲೆಡೆ ರಾಮ.. ಎಲ್ಲರ ರಾಮ ಅನ್ನುವಂತಹ ಉದ್ಘೋಷಗಳು ಕೇಳಿಬರುತ್ತಿವೆ. ಈ ನಡುವೆ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಮಹತ್ಕಾರ್ಯದಲ್ಲಿ ಬೆಂಗಳೂರಿನ (Bengaluru) ಪಾಲೂ ಇದೆ ಅನ್ನೋದು ವಿಶೇಷವಾಗಿದೆ. ಏಕೆಂದರೆ ಬಾಲರಾಮನಿಗೆ ಬೆಂಗಳೂರಿನಿಂದ ತುಳಸಿಮಾಲೆ ಸೇವೆ ಅರ್ಪಣೆಯಾಗಲಿದೆ.
Advertisement
ಹೌದು.. ಅಯೋಧ್ಯೆಗೆ ತುಳಸಿಮಾಲೆ (Tulsi Mala) ಅರ್ಪಿಸಬೇಕು ಅಂತಾ ಬೆಂಗಳೂರು ಜಯನಗರದ ಶಿವಕುಮಾರ್ ಹಾಗೂ ಸ್ನೇಹಿತರು ಅಂದುಕೊಂಡಿದ್ದರು. ಅದಾದ ಬಳಿಕ ಪೇಜಾವರ ಶ್ರೀಗಳ ಸಹಾಯದೊಂದಿಗೆ ಟ್ರಸ್ಟ್ ಒಪ್ಪಿಗೆ ಪಡೆದುಕೊಂಡು, ಗುಜರಾತ್‌ನ ತುಳಸಿವನದಿಂದ ವಿಶೇಷ ತುಳಸಿಬೀಜವನ್ನು ಪಡೆದುಕೊಂಡರು. ಇದನ್ನೂ ಓದಿ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ರಾಮಮಂದಿರ ಪ್ರವೇಶ – ದೇವಾಲಯದ ಸುತ್ತ ಪ್ರದಕ್ಷಿಣೆ
Advertisement
Advertisement
ಈ ತುಳಸಿ ಬೆಳೆಯುವುದಕ್ಕಾಗಿಯೇ ಅಯೋಧ್ಯೆಯಿಂದ 60 ಕಿಲೋ ಮೀಟರ್ ದೂರದಲ್ಲಿ 2 ಎಕರೆ ಭೂಮಿ ಖರೀದಿಸಲಾಗಿತ್ತು. ಅಲ್ಲಿಯೇ ತುಳಸಿ ಬೆಳೆದು ಇದೀಗ ರಾಮಮಂದಿರಕ್ಕೆ ಅರ್ಪಣೆ ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಈಗಾಗಲೇ ಮೂರು ಜನ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ನಿರಂತರವಾಗಿ ರಾಮನಿಗೆ ತುಳಸಿಮಾಲೆಯನ್ನು ಸಮರ್ಪಣೆ ಮಾಡಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ದಿನವೂ ಇದೇ ತುಳಸಿಮಾಲೆ ಅರ್ಪಣೆಯಾಗಲಿದೆ ಎಂದು ತುಳಸಿಮಾಲೆ ಅರ್ಪಿಸಿದ ಶಿವಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ
Advertisement
ಈ ಕುರಿತು ಮಾತನಾಡಿರುವ ಅವರು, ಕರ್ನಾಟಕ ಶಿಲೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮನಿಗೆ ಕರ್ನಾಟಕದಿಂದ ತುಳಸಿ ಕಾಣಿಕೆ ನೀಡುತ್ತಿರುವುದು ಮತ್ತಷ್ಟು ವಿಶೇಷ ಅನ್ನಿಸಿದೆ. ಶ್ರೀರಾಮನ ಸೇವೆಯಲ್ಲಿ ನಮ್ಮದೂ ಪಾಲಿದೆ ಅನ್ನುವ ಸಮಾಧಾನವಿದೆ. ಶ್ರೀರಾಮನ ಅನುಗ್ರಹ ಎಲ್ಲರ ಮೇಲೂ ಇರಲಿ ಎಂದು ನೆನೆದಿದ್ದಾರೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ