ನವದೆಹಲಿ: ಅಯೋಧ್ಯೆ ಪ್ರಕರಣದ ಐತಿಹಾಸಿಕ ತೀರ್ಪು ಪ್ರಕಟಗೊಂಡಿದ್ದು ಸುಪ್ರೀಂ ಕೋರ್ಟ್ ಕೇಂದ್ರ ಶಿಯಾ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
1946 ರಲ್ಲಿ ಫೈಜಾಬಾದ್ ನ್ಯಾಯಾಲಯ 1992ರ ಡಿ.6ರಂದು ಧ್ವಂಸಗೊಂಡ ಮಸೀದಿಯು ಸುನ್ನಿ ಪಂಗಡಕ್ಕೆ ಸೇರಿದ್ದ ಜಾಗ ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಶಿಯಾ ವಕ್ಫ್ ಬೋರ್ಡ್ ಈ ಮಸೀದಿಯನ್ನು ಮೊಘಲ್ ದೊರೆ ಬಾಬರ್ ಕಟ್ಟಿಲ್ಲ. ಬಾಬರ್ ಕಮಾಂಡರ್ ಮಿರ್ ಬಾಖ್ವಿ ಕಟ್ಟಿದ್ದಾನೆ. ಈತ ಶಿಯಾ ಪಂಗಡಕ್ಕೆ ಸೇರಿದ ವ್ಯಕ್ತಿ. ಹೀಗಾಗಿ ಈ ವಿವಾದಿತ ಜಾಗ ನಮ್ಮದು ಎಂದು ಹೇಳಿ 2017ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಸರ್ವೋಚ್ಚ, ಆದ್ರೆ ದೋಷಾತೀತ: ಓವೈಸಿ
Advertisement
Advertisement
ಸುಪ್ರೀಂ ಆದೇಶದಲ್ಲಿ ಏನಿದೆ?
ಶಿಯಾ ವಕ್ಫ್ ಬೋರ್ಡ್ 1946 ರಲ್ಲಿ ಫೈಜಾಬಾದ್ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ. 24,964 ದಿನಗಳ ಬಳಿಕ ಸಲ್ಲಿಕೆಯಾದ ಬಳಿಕ ಅರ್ಜಿ ಸಲ್ಲಿಕೆಯಾಗಿದೆ. ಇಷ್ಟೊಂದು ದಿನ ವಿಳಂಬ ಮಾಡಿದ್ದು ಯಾಕೆ ಎನ್ನುವುದಕ್ಕೆ ಶಿಯಾ ವಕ್ಫ್ ಬೋರ್ಡ್ ಕಾರಣ ನೀಡಿಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾಗೊಳಿಸಲಾಗುತ್ತದೆ. ಇದನ್ನೂ ಓದಿ: ಅಯೋಧ್ಯೆ ತೀರ್ಪು ಸಮಾಧಾನ ತಂದಿಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
Advertisement
ನಿರ್ಮೋಹಿ ಅಖಾಡದ ಅರ್ಜಿ ವಜಾಗೊಂಡಿದ್ದು ಯಾಕೆ?
ಸುಪ್ರೀಂ ಕೋರ್ಟ್ ಈ ವೇಳೆ ನಿರ್ಮೋಹಿ ಅಖಾಡದ ಅರ್ಜಿಯನ್ನು ವಜಾಗೊಳಿಸಿದೆ. ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಮಾತ್ರಕ್ಕೆ ಆಸ್ತಿಯಲ್ಲಿ ಹಕ್ಕು ನೀಡಲು ಸಾಧ್ಯವಿಲ್ಲ. ಆಸ್ತಿಯ ಹಕ್ಕು ಪೂರ್ಣವಾಗಿ ರಾಮ್ ಲಲ್ಲಾಗೆ ಸೇರುತ್ತದೆ. ಆದರೆ ಅವರ ವಾದವನ್ನು ಪರಿಗಣಿಸಿ ನಿರ್ಮೋಹಿ ಅಖಾಡಕ್ಕೆ ದೇವಾಲಯದ ಟ್ರಸ್ಟ್‍ನಲ್ಲಿ ಸ್ಥಾನ ಸಿಗಬೇಕು ಎಂದು ಆದೇಶದಲ್ಲಿ ತಿಳಿಸಿದೆ.
Advertisement
Mahant Dinendra Das, Nirmohi Akhada, Ayodhya welcomes the #AYODHYAVERDICT pic.twitter.com/J9jNPZkeIS
— Prasar Bharati News Services & Digital Platform (@PBNS_India) November 9, 2019
ನಿರ್ಮೋಹಿ ಅಖಾಡ ವಾದ ಏನಿತ್ತು?
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ 1934ರಿಂದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲ. ಅರ್ಚಕರಿಗೆ ದೇವರ ಭೂಮಿಯ ಮೇಲೆ ಹಕ್ಕಿರುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇವಸ್ಥಾನದ ಆಸ್ತಿ ದೇವರ ಹೆಸರಲ್ಲಿದ್ದರೂ ಅದರ ನಿರ್ವಹಣೆ ಅರ್ಚಕರದ್ದು. ವಂಶಪಾರಂಪರ್ಯ ಆಸ್ತಿಗಳ ಮೇಲೆ ಹಕ್ಕಿರುವಂತೆ ದೇವಸ್ಥಾನದ ಭೂಮಿ ಮೇಲೂ ಅವರಿಗೆ ಹಕ್ಕಿರುತ್ತದೆ ಎಂದು ಹೇಳಿತ್ತು. ನಮ್ಮ ಮೂಲ ವಾದ ಭೂಮಿ ಒಡೆತನ, ನಿರ್ವಹಣೆಯ ಹಕ್ಕಿಗೆ ಸಂಬಂಧಿಸಿದ್ದು. 1850ರಿಂದಲೇ ನಾವು ಈ ಭೂಮಿಯ ಮೇಲೆ ಹಕ್ಕು ಹೊಂದಿದ್ದೇವೆ. ಸೀತಾ ರಸೋಯಿ(ಮೊದಲ ಬಾರಿಗೆ ಸೀತೆ ಅಡುಗೆ ಮಾಡಿದ್ದ ಸ್ಥಳ,ಕುಟುಂಬ ಸದಸ್ಯರಿಗಾಗಿ ಸಿಹಿ ಅಡುಗೆ ತಯಾರಿಸಿದ್ದ ಸೀತೆ), ರಾಮ್ ಭಂಡಾರ್(ಭಗವಾನ್ ಶ್ರೀರಾಮನ ಭೋಜನ ಗೃಹ, ಸೀತಾ ರಸೋಯಿಯಲ್ಲಿ ಅಡುಗೆ ಮಾಡಿ ಇಲ್ಲಿ ಭೋಜನ), ರಾಮ್ ಚಬೂತರ್(ಶ್ರೀರಾಮ ಹುಟ್ಟಿದ ಸ್ಥಳ, ಇದೇ ಜಾಗದಲ್ಲಿ ಶ್ರೀರಾಮ ಬೆಳೆದ ಜಾಗ) ನಮ್ಮ ಹಿಡಿತದಲ್ಲೇ ಇತ್ತು. ಅಲ್ಲದೇ ಈ ಮೂರು ಜಾಗಗಳ ಮೇಲೆ ಯಾವುದೇ ವ್ಯಾಜ್ಯಗಳು ಇರಲಿಲ್ಲ ಎಂದು ವಾದಿಸಿತ್ತು.
2010ರಲ್ಲಿ ಅಲಹಾಬಾದ್ ಕೋರ್ಟ್ 2.77 ಎಕರೆಗಳ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗವನ್ನು ಮೂರು ಭಾಗಗಳಾಗಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ, ರಾಮ್‍ಲಲ್ಲಾಗೆ ಸಮಾನ ಹಂಚಿಕೆ ಮಾಡಿ ಆದೇಶಿಸಿತ್ತು.