– ಮೊದಲ ಹಂತದಲ್ಲಿ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ
ಲಕ್ನೋ (ಅಯೋಧ್ಯೆ): ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Maryada Purushottam Shri Ram International Airport) ಡಿಸೆಂಬರ್ 30 ರಂದು ಉದ್ಘಾಟನೆಯಾಗಲಿದ್ದು, ಜನವರಿ 6ರಿಂದ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಸಂಪರ್ಕ ಕಲ್ಪಿಸಲಾಗಿದೆ.
ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಅಂದು ದೆಹಲಿಗೆ ಏರ್ ಇಂಡಿಯಾದ (Air India) ಮೊದಲ ವಿಮಾನ ಹಾರಾಟ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಯೋಧ್ಯೆ ಏರ್ಪೋರ್ಟ್‌ನಲ್ಲಿ ಡಿಸೆಂಬರ್ 22ರಂದು ಭಾರತೀಯ ವಾಯುಪಡೆಯ ಏರ್‌ಬಸ್ A320 ಅನ್ನು ಇತ್ತೀಚೆಗೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲಾಗಿತ್ತು.
Advertisement
Advertisement
ಜನವರಿ 6 ರಿಂದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಆ ನಂತರ ಇಂಡಿಗೋ ಏರ್‌ಲೈನ್ಸ್ ಕಂಪನಿ ದೆಹಲಿ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಗೋವಾದಂತಹ ಪ್ರಮುಖ ನಗರಗಳಿಗೆ ವಿಮಾನ ಒದಗಿಸಲಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಆಹ್ವಾನ- ಧನ್ಯವಾದವೆಂದ ಕಾಂಗ್ರೆಸ್
Advertisement
ಈ ಕುರಿತು ಮಾತನಾಡಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia), ಅಯೋಧ್ಯೆಯ ವಿಮಾನ ನಿಲ್ದಾಣವು ನಗರದ ಐತಿಹಾಸಿಕ ಮಹತ್ವ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು. ದೇಶ-ವಿದೇಶಿ ಗಣ್ಯರು ಅಥವಾ ಪ್ರವಾಸಿಗರು ಭೇಟಿ ನೀಡಿದ್ರೆ, ಅವರಿಗೆ ನಗರದ ಐತಿಹಾಸಿಕ ಮಹತ್ವ ಕಣ್ಣಿಗೆ ರಾಚಬೇಕು. ಆದ್ದರಿಂದ ಅಯೋಧ್ಯೆ ಸಂಸ್ಕೃತಿಯನ್ನು ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರ ಕಣ್ಣಿಗೆ ಕಟ್ಟಿಕೊಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
Advertisement
6,500 ಚದರ ಅಡಿ ವಿಸ್ತೀರ್ಣ ಹೊಂದಿರುವ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗೆ 2 ರಿಂದ 3 ವಿಮಾನಗಳನ್ನ ಲ್ಯಾಂಡಿಂಗ್ ಮಾಡಬಹುದು. ಸದ್ಯ ಇರುವ 2,200 ಮೀಟರ್ ಉದ್ದದ ರನ್‌ವೇಯನ್ನು 3,700 ಮೀಟರ್‌ಗೆ ವಿಸ್ತರಿಸಲಾಗುತ್ತದೆ. ಇದರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ಅಯೋಧ್ಯೆಯಲ್ಲಿ ಲ್ಯಾಂಡಿಂಗ್ ಮಾಡಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ
ಅಯೋಧ್ಯೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರವು 250 ಕೋಟಿ ರೂಪಾಯಿ ಮಂಜೂರು ಮಾಡಿತ್ತು, ಉತ್ತರ ಪ್ರದೇಶ ಸರ್ಕಾರ ಹೆಚ್ಚುವರಿ ಭೂಮಿಯನ್ನು ಖರೀದಿಸಲು 321 ಕೋಟಿ ರೂಪಾಯಿಗೆ ಅನುಮೋದನೆ ನೀಡಿತ್ತು. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 555.66 ಎಕರೆ ಹೆಚ್ಚುವರಿ ಭೂಮಿಯನ್ನು ಖರೀದಿಸಲು ಒಟ್ಟು 1,001.77 ಕೋಟಿ ರೂ. ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಬಜೆಟ್‍ನಲ್ಲಿ 101 ಕೋಟಿ ರೂ. ಮೀಸಲಿಡಲಾಗಿತ್ತು. ನವೆಂಬರ್ 2018 ರಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎ320 ಮತ್ತು ಬಿ737 ನಂತಹ ದೊಡ್ಡ ವಿಮಾನಗಳಿಗಾಗಿ ಅಯೋಧ್ಯೆಯಲ್ಲಿ ಏರ್‌ಸ್ಟ್ರಿಪ್‌ನ ಅಭಿವೃದ್ಧಿ ಮತ್ತು ಸೂಕ್ತವಾದ ರನ್‍ವೇ ಮತ್ತು ಟರ್ಮಿನಲ್ ಕಟ್ಟಡದ ನಿರ್ಮಾಣವನ್ನು ಘೋಷಿಸಿದ್ದರು.