ಲಕ್ನೋ: ರಾಮ ಮಂದಿರ (Rama Mandir) ನಿರ್ಮಾಣ ಹಂತದಲ್ಲಿರುವ ನಡುವೆಯೇ ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಅಯೋಧ್ಯೆಯಲ್ಲಿ (Ayodhya) ಪ್ರತ್ಯೇಕ ದೇಗುಲವನ್ನೇ ನಿರ್ಮಾಣ ಮಾಡಲಾಗಿದೆ.
Ayodhya, UP | A temple has been built in the name of CM Yogi Adityanath in Maurya ka Purwa village near Bharatkund in Ayodhya; the temple shows CM Yogi in the form of a God. pic.twitter.com/UuUSxXC3Fk
— ANI UP/Uttarakhand (@ANINewsUP) September 18, 2022
Advertisement
ಯೋಗಿ ಆದಿತ್ಯನಾಥ್ (Yogi Adityanath) ಅವರ ಪ್ರತಿಮೆಗೆ ವ್ಯಕ್ತಿಯೊಬ್ಬರು ಪೂಜೆ ಮಾಡುತ್ತಿರುವ ಚಿತ್ರಗಳು ಹಾಗೂ ದೇವಸ್ಥಾನದಲ್ಲಿ ನಿರ್ಮಿಸಲಾಗಿರುವ ಯೋಗಿ ಮೂರ್ತಿಯ ಚಿತ್ರಗಳು ಜಾಲತಾಣದಲ್ಲಿ (Social Media) ವೈರಲ್ ಆಗಿವೆ. ಭರತಕುಂಡ್ ಬಳಿಯ ಪುರ್ವಾ ಹಳ್ಳಿಯಲ್ಲಿರುವ ಈ ದೇವಾಲಯವು (Temple) ಯೋಗಿ ಆದಿತ್ಯನಾಥರನ್ನು ಶ್ರೀರಾಮನ (Lord SriRama) ಅವತಾರದಲ್ಲಿ ನೋಡುವಂತೆ ಮಾಡಿದೆ. ಇದನ್ನೂ ಓದಿ: ಫೋಟೋಗಾಗಿ ಬೆಂಗ್ಳೂರು ಎಫ್‍ಸಿ ನಾಯಕ ಸುನಿಲ್ ಛೆಟ್ರಿಯನ್ನು ತಳ್ಳಿದ ಬಂಗಾಳದ ಗವರ್ನರ್
Advertisement
Advertisement
ರಾಮಮಂದಿರ ನಿರ್ಮಾಣಕ್ಕೆ ಅಂದಾಜು 1,800 ಕೋಟಿ ವೆಚ್ಚ ಆಗಿದೆ. ರಾಮ ಮಂದಿರ ನಿರ್ಮಾಣ ಕಾಮಗಾರಿ ಶೇ.40ಕ್ಕೂ ಹೆಚ್ಚು ಭಾಗ ಪೂರ್ಣಗೊಂಡಿದೆ. 2023ರ ಡಿಸೆಂಬರ್‌ನಿಂದ ಭಕ್ತರು ದೇವರಿಗೆ ಪೂಜೆ ಅರ್ಪಿಸಲು ಅವಕಾಶ ನೀಡಲು ಸಾಧ್ಯವಾಗುವ ನಿರೀಕ್ಷೆ ಇದೆ ಎಂದು ಶ್ರೀ ರಾಮಜನ್ಮಭೂಮಿ ಟ್ರಸ್ಟ್‌ನ ಅಧಿಕಾರಿಗಳು ಇತ್ತೀಚೆಗೆ ತಿಳಿಸಿದ್ದರು. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪಂಜಾಬ್ ಸಿಎಂ ತೂರಾಟ – ವಿಮಾನದಿಂದ ಕೆಳಗಿಳಿಸಿದ Lufthansa?
Advertisement
ಈ ದೇವಸ್ಥಾನದಲ್ಲಿ ಪ್ರತಿದಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಎರಡು ಬಾರಿ ವಿಷೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಪ್ರಾರ್ಥನೆಯ ನಂತರ, ಭಕ್ತರಿಗೆ ಪ್ರಸಾದವನ್ನೂ ವಿತರಿಸಲಾಗುತ್ತದೆ.