ಅಯೋಧ್ಯಯ ರಾಮಮಂದಿರ (Ayodhya Ram Mandir) ಲೋಕಾರ್ಪಣೆ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಕೆಲವೇ ಕೆಲವರು ನಟ ನಟಿಯರನ್ನು ಆಹ್ವಾನಿಸಿದ್ದು, ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್‌ಗೆ (Rajanikanth) ಆಹ್ವಾನ ನೀಡಲಾಗಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೋಹನ್ ಲಾಲ್, ಚಿರಂಜೀವಿ, ಕನ್ನಡದ ನಟ ಯಶ್ (Yash), ರಿಷಬ್ ಶೆಟ್ಟಿ (Rishab Shetty), ಸೇರಿದಂತೆ ಕೆಲವೇ ಕೆಲವು ನಟರಿಗೆ ಇಂಥದ್ದೊಂದು ಆಹ್ವಾನ ಸಿಕ್ಕಿದೆ.
ರಾಮಮಂದಿರದ ಉದ್ಘಾಟನೆ ಸಂಭ್ರಮಕ್ಕೆ ಸಾಕ್ಷಿಯಾಗಲು ವಿಶೇಷವಾಗಿ ರಜನಿಕಾಂತ್ ಅವರಿಗೂ ಆಹ್ವಾನ ಸಿಕ್ಕಿದೆ. ಸದ್ಯ ಈ ಸುದ್ದಿ ಕೇಳಿ ತಲೈವಾ ಅಭಿಮಾನಿಗಳು ಖುಷಿಯಾಗಿದ್ದಾರೆ.
“Actor Rajinikanth invited to the inauguration ceremony of the Ram Temple in Ayodhya”, tweets BJP leader Ra.Arjunamurthy
(Pic source- BJP leader Ra.Arjunamurthy’s Twitter account) pic.twitter.com/gKpZM9sqQd
— ANI (@ANI) January 2, 2024
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿದ್ದು, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮ ಪೂಜೆ ಪುನಸ್ಕಾರ ಆಯೋಜನೆಗೊಂಡಿದೆ. ಇದಕ್ಕಾಗಿ ಈಗಾಗಲೇ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್
ಇತ್ತೀಚೆಗೆ ಇದರ ಭಾಗವಾಗಿ ಬೆಂಗಳೂರಿನ ಬನಶಂಕರಿ ಒಂದನೇ ಹಂತದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಘಂಟಾದಾನ ಸಮರ್ಪಣೆ ಮಾಡಿದ್ದರು. 2.5 ಟನ್ ತೂಕದ ಘಂಟೆಗಳು, 30 ಸಣ್ಣ ಗಂಟೆಗಳು, 38 ಕೆಜಿ ತೂಕದ ಬೆಳ್ಳಿಯ ಸಾಮಾನುಗಳನ್ನು ಸಮರ್ಪಣೆ ಮಾಡಲಾಗಿತ್ತು. ಈ ಘಂಟಾದಾನ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಭಾಗಿಯಾಗಿದ್ದರು.