ಅಯೋಧ್ಯೆ (ಉತ್ತರ ಪ್ರದೇಶ): ರಾಮಲಲ್ಲಾನ (Ram Lalla) ಪ್ರಾಣ ಪ್ರತಿಷ್ಠಾಪನೆ ನೆರವೇರಿದ ಬಳಿಕ ಈಗ ರಾಮಮಂದಿರ (Ram Mandir) ನಿರ್ಮಾಣ ಕಾಮಗಾರಿ ಕಾರ್ಯ ಪುನರ್ ಆರಂಭಗೊಂಡಿದೆ.
ಅಯೋಧ್ಯೆ (Ayodhya) ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾತನಾಡಿ, ದೇವಾಲಯದಲ್ಲಿ ಮತ್ತೊಮ್ಮೆ ನಿರ್ಮಾಣ ಕಾರ್ಯ ಆರಂಭವಾಗಿದೆ. ‘ಪಾರ್ಕೋಟ’ ಕಾಮಗಾರಿ ಪೂರ್ಣಗೊಳ್ಳಬೇಕಿದೆ. 795 ಮೀಟರ್‌ನ ‘ಪರಿಕ್ರಮ’ ಗೋಡೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಇದಲ್ಲದೆ, ದೇವಾಲಯದ ಕೆಳಗಿನ ಸ್ತಂಭದ ಮೇಲೆ ಪ್ರತಿಮಾಶಾಸ್ತ್ರದ ಕಾರ್ಯವನ್ನು ಸಹ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 25 ಲಕ್ಷ ಜನರಿಂದ ಬಾಲಕ ರಾಮನ ದರ್ಶನ – 11 ಕೋಟಿ ರೂ. ಕಾಣಿಕೆ ಸಂಗ್ರಹ
Advertisement
#WATCH | Ayodhya Ram Temple Construction Committee Chairman, Nripendra Mishra says, “Construction work is beginning at the temple once again. Work on the ‘parkota’ has to be completed, work on the 795-metre ‘parikrama’ wall will be completed. Besides this, the work of the… pic.twitter.com/sg2cTdWwpn
— ANI (@ANI) February 3, 2024
Advertisement
ಮೊದಲ ಮತ್ತು ಎರಡನೇ ಮಹಡಿಯಲ್ಲಿ ರಾಜಾರಾಮನ ‘ದರ್ಬಾರ್’ ಕೆಲಸವು ಈಗ ಏಕಕಾಲದಲ್ಲಿ ಪ್ರಾರಂಭವಾಗಲಿದೆ. ಇದು ಡಿಸೆಂಬರ್ 2024 ರಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಜ.22 ರಂದು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಜರುಗಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸ್ತ್ರೋಸ್ತವಾಗಿ ಬಾಲಕ ರಾಮ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದನ್ನೂ ಓದಿ: ರಾಮಲಲ್ಲಾ ಮೂರ್ತಿಯ ಕಣ್ಣುಗಳನ್ನ ಕೇವಲ 20 ನಿಮಿಷದಲ್ಲಿ ಕೆತ್ತಿದ್ರಂತೆ ಶಿಲ್ಪಿ ಯೋಗಿರಾಜ್
Advertisement
ಈಗಾಗಲೇ ರಾಮಮಂದಿರದ 1ನೇ ಮಹಡಿ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಎರಡು ಮಹಡಿ ಕಾಮಗಾರಿ ನಡೆಯಬೇಕಿದೆ. 2025 ರ ವೇಳೆಗೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.