ನವದೆಹಲಿ: ಅಯೋಧ್ಯೆಯ (Ayodhya) ರಾಮಮಂದಿರ (Ram Mandir) ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆಯೊಂದು ಬಂದಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಇನ್ನೋವಾ ಡಿಕ್ಕಿಯಾಗಿ 10 ಅಡಿ ದೂರ ಹಾರಿ ಬಿದ್ದ ಮಹಿಳೆ – ಮಕ್ಕಳಿಗೆ ಚಾಕ್ಲೇಟ್ ತರಲು ಹೋಗಿ ಅಪಘಾತಕ್ಕೆ ಬಲಿ
ಮಾಧ್ಯಮದವರೊಂದಿಗೆ ಅಯೋಧ್ಯೆಯ ಪೊಲೀಸ್ ಅಧಿಕಾರಿಯೊಬ್ಬರು ಬೆದರಿಕೆ ವಿಚಾರವಾಗಿ ಮಾತನಾಡಿ, ರಾಮಮಂದಿರ ಟ್ರಸ್ಟ್‌ಗೆ ಭಾನುವಾರ ಮಧ್ಯರಾತ್ರಿ ಅನುಮಾನಾಸ್ಪದ ಇಮೇಲ್ ಬಂದಿದೆ. ತಮಿಳುನಾಡಿನ ವ್ಯಕ್ತಿಯೊಬ್ಬ ಇಂಗ್ಲಿಷ್‌ನಲ್ಲಿ ಇಮೇಲ್ ಕಳುಹಿಸಿದ್ದಾನೆ. ಈ ಕುರಿತು ಸದ್ಯ ತನಿಖೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಇದರ ಹೊರತಾಗಿ ಇನ್ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಇನ್ನೂ ಈ ಕುರಿತು ರಾಮಮಂದಿರ ಟ್ರಸ್ಟ್ ಹಾಗೂ ಭದ್ರತಾ ಸಂಸ್ಥೆಗಳು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದಕ್ಕೂ ಮುನ್ನ ರಾಮಮಂದಿರ ಟ್ರಸ್ಟ್‌ಗೆ ಹಲವು ಬಾರಿ ಬೆದರಿಕೆ ಮೇಲ್‌ಗಳು ಬಂದಿದ್ದವು.ಇದನ್ನೂ ಓದಿ: ಬೆಂಗ್ಳೂರಲ್ಲಿ 5 ಕೋಟಿ ಮೌಲ್ಯದ ಮಾದಕ ವಸ್ತು ವಶ – ಇಬ್ಬರು ಅರೆಸ್ಟ್