ಅಯೋಧ್ಯೆ: ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ನಿನ್ನೆಯಷ್ಟೇ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಬೆನ್ನಲ್ಲೇ ಇಂದು ಪೂರ್ಣರೂಪದ ಬಾಲರಾಮನದ ದರ್ಶನವಾಗಿದೆ. ಬಾಲರಾಮನ ಸಂಪೂರ್ಣ ವಿಗ್ರಹವನ್ನು ತೋರಿಸುವ ಫೋಟೋ ಹಂಚಿಕೊಳ್ಳಲಾಗಿದ್ದು, ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಂದಸ್ಮಿತನಾಗಿರೋ ಬಾಲರಾಮನ ಸಂಪೂರ್ಣ ವಿಗ್ರಹವನ್ನ ನೀವೂ ಕಣ್ತುಂಬಿಕೊಳ್ಳಿ#Ayodhya #RamMandir #Uttarpradesh #AyodhyaDham #Ram #SriRama #AyodhyaTemple #AyodhyaRamMandir #PranPrathisthaceremony #KannadaNews pic.twitter.com/xpL2WL4Tyq
— PublicTV (@publictvnews) January 19, 2024
Advertisement
ಇಂದು ಬಾಲರಾಮನ ವಿಗ್ರಹದ ಫೋಟೋ ಹೊರಬೀಳುತ್ತಿದ್ದಂತೆಯೇ ರಾಮಭಕ್ತರು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಜೈ ಶ್ರೀ ರಾಮ್ ಎಂದು ಬರೆದುಕೊಂಡರು. ಹಾಗಿದ್ರೆ ಈ ವಿಗ್ರಹದಲ್ಲಿ ಏನೇನು ವಿಶೇಷತೆಗಳು ಇವೆ ಎಂಬುದನ್ನು ನೋಡೋಣ. ಇದನ್ನೂ ಓದಿ; ಅರುಣ್ ಕಣ್ಣು ಕಳೆದುಕೊಳ್ಳಬೇಕಿತ್ತು, 15 ದಿನ ಒಂದೇ ಕಣ್ಣಿನಲ್ಲಿ ನೋಡಿಕೊಂಡು ಶಿಲ್ಪ ಕೆತ್ತನೆ ಮಾಡಿದ್ದಾರೆ: ಅರುಣ್ ಯೋಗಿರಾಜ್ ಪತ್ನಿ
Advertisement
ರಾಮಲಲ್ಲಾ ಮೂರ್ತಿಯ ವಿಶೇಷತೆಗಳು..#Ayodhya #RamMandir #Uttarpradesh #AyodhyaDham #Ram #SriRama #AyodhyaTemple #NarendraModi #AyodhyaRamMandir #PranPrathisthaceremony #KannadaNews pic.twitter.com/jJBoUQ8eJa
— PublicTV (@publictvnews) January 19, 2024
Advertisement
ಬಾಲರಾಮನ ವಿಗ್ರಹದ ವಿಶೇಷತೆ?: 51 ಇಂಚು ಎತ್ತರವಿರುವ ಮಂದಸ್ಮಿತ ಮುಖ ಹೊಂದಿರುವ ರಾಮನ ಮೂರ್ತಿಯು ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದೆ. ಬಾಲರಾಮನ ಹಣೆಯ ಮೇಲೆ ತಿಲಕವಿದೆ. ಬಾಲರಾಮನ ಮೂರ್ತಿಯ ಮೇಲ್ಬಾಗ ಸೂರ್ಯ ವಂಶದ ಶ್ರೀರಾಮಚಂದ್ರನನ್ನು ಬಿಂಬಿಸುವಂತಹ ಸೂರ್ಯದೇವರ ಕೆತ್ತನೆ ಮಾಡಲಾಗಿದೆ. ಬಾಲ ರಾಮನ ಮೂರ್ತಿ ಚಂದ್ರನ ನಾಚಿಸುವಷ್ಟು ಕಾಂತಿ ಅದ್ಭುತ ಕಳೆಯಲ್ಲಿದೆ.
Advertisement
ಬಾಲರಾಮನ ಕಿರೀಟದ ಮೇಲೆ ನರಸಿಂಹ ದೇವರ ಕೆತ್ತನೆ ಇದೆ. ದಶವತಾರ ಬಿಂಬಿಸುವ ಮತ್ಸ್ಯ, ಕೂರ್ಮ, ವರಾಹ, ವಾಮನ, ಕೃಷ್ಣ, ಕಲ್ಕಿ, ಬುದ್ಧ, ಪರಶುರಾಮ, ಬ್ರಹ್ಮ, ಓಂ, ಆದಿಶೇಷ, ಚಕ್ರ ಹಾಗೂ ಈಶ್ವರ ಬಲಭಾಗದಲ್ಲಿದ್ದಾನೆ. ಇನ್ನು ಬಾಲರಾಮನ ಎಡಗಡೆ ಹಾಗೂ ಮೇಲ್ಗಡೆ ಶಂಕ, ಗಧೆ, ಸ್ವಸ್ತಿಕ್, ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕ್ಲಕಿ, ಹಾಗೂ ನೆತ್ತಿನ ಮೇಲೆ ಸೂರ್ಯನಿದ್ದಾನೆ.
ಬಾಲರಾಮನ ಮುಖಾರವಿಂದ- ಮಂದಸ್ಮಿತನಾಗಿರುವ ಬಾಲರಾಮನ ವಿಗ್ರಹ#Ayodhya #RamMandir #Uttarpradesh #AyodhyaDham #Ram #SriRama #AyodhyaTemple #AyodhyaRamMandir #PranPrathisthaceremony #KannadaNews pic.twitter.com/EQszNhUEjP
— PublicTV (@publictvnews) January 19, 2024
ಬಿಳಿ ಬಟ್ಟೆಯಿಂದ ವಿಗ್ರಹವನ್ನು ಮುಚ್ಚಲಾಗಿತ್ತು: ಇದಕ್ಕೂ ಮುನ್ನ ರಾಮಲಲ್ಲಾ ವಿಗ್ರಹದ ಚಿತ್ರಗಳು ಹೊರಬಿದ್ದಿದ್ದವು. ಅದರಲ್ಲಿ ವಿಗ್ರಹವನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿತ್ತು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ 51 ಇಂಚಿನ ರಾಮಲಲ್ಲಾ ವಿಗ್ರಹವನ್ನು ಗುರುವಾರ ಮುಂಜಾನೆ ದೇವಸ್ಥಾನಕ್ಕೆ ತರಲಾಯಿತು. ಅರ್ಚಕ ಅರುಣ್ ದೀಕ್ಷಿತ್ ಅವರು ರಾಮಲಲ್ಲಾ ವಿಗ್ರಹವನ್ನು ಗುರುವಾರ ಮಧ್ಯಾಹ್ನ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಜನವರಿ 22 ರಂದು ಬಾಲರಾಮನ ಪ್ರಣ ಪ್ರತಿಷ್ಠೆ ನಡೆಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಉಡುಪಿ ಪೇಜಾವರ ಮಠದ ಟ್ರಸ್ಟಿ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ. ಭದ್ರತೆಯ ಕಾರಣದಿಂದ ಈ ದಿನದಂದು ಆಹ್ವಾನಿತ ಅತಿಥಿಗಳಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು. ಜನವರಿ 22 ರಂದು ರಾಮ ಮಂದಿರದಲ್ಲಿ ‘ಪ್ರಾಣ ಪ್ರ ತಿಷ್ಠಾ’ ಸಮಾರಂಭದ ನಂತರ, ದೇವಾಲಯವನ್ನು ಮರುದಿನ ಸಾರ್ವಜನಿಕರಿಗೆ ತೆರೆಯುವ ನಿರೀಕ್ಷೆಯಿದೆ.