ಪ್ರಾಣಪ್ರತಿಷ್ಠೆಗೂ ಮುನ್ನ ಸಿಂಗಾರಗೊಳ್ಳಲಿದೆ ರಾಮನ ಮೆಟ್ಟಿಲು! – ಏನಿದರ ಮಹತ್ವ? ಈ ಹೆಸರು ಯಾಕೆ ಬಂತು?

Public TV
2 Min Read
Ram ki Pauri

Ayodhya Ram Mandir: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನಾ (Ramlala Pran Pratishtha) ಕಾರ್ಯಕ್ಕೆ ಆಯೋಧ್ಯೆಗೆ ಅಯೋಧ್ಯೆಯೇ (Ayodhya) ಸಿಂಗಾರಗೊಳ್ಳುತ್ತಿದೆ. ರಾಮಮಂದಿರದಲ್ಲಿ ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಯೋಧ್ಯೆಯನ್ನು ರಾಮಾಯಣದ ಕತೆಯಲ್ಲಿರುವ ಪ್ರತೀಕದಂತೆಯೇ ಸಜ್ಜುಗೊಳಿಸಲಾಗುತ್ತಿದೆ.

Ram ki Paidi 2

ರಾಮಾಯಣ ಕಾಲದ ಬಹುದೊಡ್ಡ ಸಾಕ್ಷಿಯಾಗಿ ಉಳಿದಿರುವ ರಾಮ್ ಕೀ ಪೌರಿ (Ram ki Pauri) ಯನ್ನು ಸುಂದರವಾಗಿ ಅಲಂಕರಿಸುತ್ತಿದ್ದಾರೆ. ಈ ಜಾಗದ ಐತಿಹಾಸಿಕ ಹಿನ್ನೆಲೆ ರಾಮ ಭಕ್ತರಿಗೆ ತಿಳಿಸಲು ಎಲ್ಲ ರೀತಿಯ ಸಿದ್ಧತೆಗಳೂ ಶುರುವಾಗಿವೆ. ಇದನ್ನೂ ಓದಿ: ಸೀತಾ ಮಾತೆಯ ಊರಿಗೂ ಅಯೋಧ್ಯೆಯಿಂದ ವಿಶೇಷ ರೈಲು!

ರಾಮನ ಮೆಟ್ಟಿಲು (ರಾಮ್ ಕೀ ಪೌರಿ) ಎಂದರೇನು?: ಹಿಂದಿ ಭಾಷೆಯಲ್ಲಿ ಬರುವ ಪೌರಿಗೆ ಕನ್ನಡದಲ್ಲಿ ಮೆಟ್ಟಿಲು ಎಂದು ಅರ್ಥ. ರಾಮನ ಮೆಟ್ಟಿಲು ಎನ್ನುವುದು ಸರಯೂ ನದಿಯ ತಟದಲ್ಲಿರುವ ಪ್ರದೇಶ. ಹುಣ್ಣಿಮೆಯ ದಿನ ಈ ಜಾಗ ಮತ್ತಷ್ಟು ಸುಂದರವಾಗಿ ಕಾಣಿಸುತ್ತದೆ. ಸರಯೂ ನದಿ ತಟದಲ್ಲಿರುವ ಈ ಘಟ್ಟದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲ ಪಾಪ ಕಳೆದುಹೋಗುತ್ತದೆ ಎಂಬುದು ಭಕ್ತರ ಪ್ರತೀತಿ. ಈ ಮೆಟ್ಟಿಲುಗಳ ಮೂಲಕ ಸರಯೂ ನದಿಯಲ್ಲಿ ಸ್ನಾನಕ್ಕಿಳಿಯಬಹುದು.

ಪೌರಾಣಿಕ ಕಥೆಗಳ ಪ್ರಕಾರ, ಪ್ರಭು ಶ್ರೀರಾಮಚಂದ್ರನೂ ಕೂಡಾ ಇದೇ ಮೆಟ್ಟಿಲುಗಳಲ್ಲಿ ಸ್ನಾನಕ್ಕೆ ಬರುತ್ತಿದ್ದರಂತೆ. ಬಳಿಕ ಬ್ರಾಹ್ಮಣರಿಗೆ ದಾನ ಧರ್ಮಗಳನ್ನು ಮಾಡುತ್ತಿದ್ದರಂತೆ.

Ram ki Paidi 1

ರಾಮನ ಮೆಟ್ಟಿಲಿನ ಪಕ್ಕದಲ್ಲಿ ನಾಥ ನಾಗೇಶ್ವರ ಮಂದಿರ, ಚಂದ್ರ ಹರಿ ಮಂದಿರ, ವಿಷ್ಣು ಹರಿ ಮಂದಿರ ಮತ್ತು ಸರಯೂ ಮಂದಿರ ಇವೆ. 1984-85ನೇ ವರ್ಷದಲ್ಲಿ ರಾಮ್ ಕೀ ಪೌರಿಯನ್ನು ಪುನರ್ ನಿರ್ಮಾಣ ಮಾಡಲಾಗಿತ್ತು.

ರಾಮನ ಮೆಟ್ಟಿಲು ಹೆಸರು ಯಾಕೆ ಬಂತು?: ರಾಮನ ಮೆಟ್ಟಿಲು (ರಾಮ್ ಕೀ ಪೌರಿ) ಸರಯೂ ಘಟ್ಟದ ಸಮೀಪದಲ್ಲಿದೆ. ಇದರ ಬಗ್ಗೆ ಒಂದು ಪೌರಾಣಿಕ ಕಥೆ ಇದೆ. ಭಗವಾನ್ ಶ್ರೀರಾಮಚಂದ್ರನ ಸೋದರ ಲಕ್ಷ್ಮಣನಿಗೆ ಒಂದು ಬಾರಿ ತೀರ್ಥಯಾತ್ರೆ ಹೋಗಬೇಕನ್ನಿಸಿತು. ಈ ವೇಳೆ ಶ್ರೀರಾಮಚಂದ್ರ ಸರಯೂ ನದಿಯ ತಟದಲ್ಲಿ ನಿಂತು, ಯಾರೇ ಭಕ್ತರು ಸೂರ್ಯೋದಯಕ್ಕೂ ಮುನ್ನ ಸರಯೂ ನದಿಗಿಳಿದು ಪುಣ್ಯ ಸ್ನಾನ ಮಾಡುತ್ತಾರೋ ಅವರ ಎಲ್ಲಾ ಆಸೆಗಳೂ ಈಡೇರುತ್ತವೆ ಎಂದು ಹೇಳಿದ್ದರಂತೆ. ಅರ್ಥಾತ್ ಸೂರ್ಯೋದಯಕ್ಕೂ ಮೊದಲು ಸರಯೂ ನದಿಯಲ್ಲಿ ಸ್ನಾನ ಮಾಡಿದರೆ ಎಲ್ಲ ನದಿಗಳಲ್ಲೂ ಸ್ನಾನ ಮಾಡಿದಂತಾಗುತ್ತದೆ. ಅಂದು ಲಕ್ಷ್ಮಣನಿಗೆ ತೀರ್ಥ ಸ್ನಾನದ ವಿಷಯ ಹೇಳಿದ ಸ್ಥಳವೇ ಇಂದು ರಾಮನ ಮೆಟ್ಟಿಲು ಎಂಬ ಹೆಸರಿನಿಂದ ಖ್ಯಾತಿ ಪಡೆದಿದೆ. ಇದನ್ನೂ ಓದಿ: Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

Share This Article