ಅಯೋಧ್ಯೆ (ರಾಮಮಂದಿರ): ಅಯೋಧ್ಯೆಯಲ್ಲಿ (Ayodhya) ಭಾಷಣದ ಸಂದರ್ಭದಲ್ಲೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮ ನಾಮ ಜಪಿಸಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ 35 ನಿಮಿಷದ ಭಾಷಣದಲ್ಲಿ 114 ಬಾರಿ ರಾಮ ನಾಮ ಸ್ಮರಣೆ ಮಾಡಿದ್ದಾರೆ ಮೋದಿ.
ಸೋಮವಾರ ಅಯೋಧ್ಯೆಯಲ್ಲಿ ರಾಮಲಲ್ಲಾ (Ram Lalla) ಪ್ರಾಣ ಪ್ರತಿಷ್ಠಾಪನೆ (Pran Pratistha) ನೆರವೇರಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ತಿಳಿ ಹಳದಿ ಧೋತಿ ಮತ್ತು ಕುರ್ತಾ ಧರಿಸಿ ಮಧ್ಯಾಹ್ನ 12 ಗಂಟೆಗೆ ಅಯೋಧ್ಯೆ ರಾಮಮಂದಿರಕ್ಕೆ ಮೋದಿ ಆಗಮಿಸಿದರು. ಅವನ ಕೈಯಲ್ಲಿ ಒಂದು ತಟ್ಟೆ ಇತ್ತು, ಅದರಲ್ಲಿ ಶ್ರೀರಾಮನಿಗೆ ಬೆಳ್ಳಿಯ ಕಿರೀಟ ಇಡಲಾಗಿತ್ತು. ಅದನ್ನು ಪ್ರಧಾನಿ ಮೋದಿ ಮಂದಿರದೊಳಗೆ ತಂದರು. ಇದನ್ನೂ ಓದಿ: ದೇಶ ಗುಲಾಮಗಿರಿಯಿಂದ ಮುಕ್ತವಾಗಿದೆ, ಸಾವಿರಾರು ವರ್ಷಗಳ ನಂತರವೂ ಈ ಕ್ಷಣ ನೆನಪಿಸಿಕೊಳ್ತಾರೆ: ಮೋದಿ
Advertisement
Advertisement
12:05 ಕ್ಕೆ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳು ಪ್ರಾರಂಭವಾದವು. ಸುಮಾರು ಒಂದು ಗಂಟೆಗಳ ಕಾಲ ನಡೆಯಿತು. ಇದರಲ್ಲಿ ಪ್ರಧಾನಿ ಭಾಗಿಯಾಗಿದ್ದರು. ಅವರು ಭಗವಂತ ರಾಮನಿಗೆ ಆರತಿ ಬೆಳಗಿದರು. ನಂತರ ರಾಮನ ಪಾದಗಳಿಗೆ ಕಮಲವನ್ನು ಇಟ್ಟು ಪ್ರದಕ್ಷಿಣೆ ಹಾಕಿ ನಮಸ್ಕರಿಸಿದರು.
Advertisement
ಪ್ರಾಣ ಪ್ರತಿಷ್ಠಾಪನೆ ಬಳಿಕ ದೇಗುಲದ ಆವರಣದಲ್ಲಿ ನೆರೆದಿದ್ದ ಜನರ ಸಮ್ಮುಖದಲ್ಲಿ ಮೋದಿ ತಮ್ಮ 11 ದಿನಗಳ ಉಪವಾಸವನ್ನು ಅಂತ್ಯಗೊಳಿಸಿದರು. ಬಳಿಕ ಸುಮಾರು 35 ನಿಮಿಷಗಳ ಕಾಲ ಭಾಷಣ ಮಾಡಿದರು. ಈ ಅವಧಿಯಲ್ಲಿ ಅವರು 114 ಬಾರಿ ರಾಮನ ಹೆಸರನ್ನು ಸ್ಮರಿಸಿದರು. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ
Advertisement
ರಾಮಲಲ್ಲಾ ಇನ್ಮುಂದೆ ಟೆಂಟ್‌ನಲ್ಲಿ ವಾಸಿಸುವುದಿಲ್ಲ. ದೈವಿಕ ಮಂದಿರದಲ್ಲಿ ವಾಸಿಸುತ್ತಾನೆ. ರಾಮಮಂದಿರ ನಿರ್ಮಾಣದ ನಂತರ ದೇಶವಾಸಿಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಇಂದು ನಮಗೆ ಶತಮಾನಗಳ ಪರಂಪರೆ ಸಿಕ್ಕಿದೆ. ಶ್ರೀರಾಮನ ಮಂದಿರ ಸಿಕ್ಕಿದೆ. ಜನವರಿ 22, 2024 ರ ಈ ಸೂರ್ಯ ಅದ್ಭುತವಾದ ಸೆಳವು ತಂದಿದ್ದಾನೆ. ಇದು ಕ್ಯಾಲೆಂಡರ್‌ನಲ್ಲಿ ಬರೆದ ದಿನಾಂಕವಲ್ಲ, ಬದಲಿಗೆ ಇದು ಹೊಸ ಕಾಲಚಕ್ರದ ಮೂಲವಾಗಿದೆ. ಜನರು ಅದನ್ನು ಸಾವಿರಾರು ವರ್ಷಗಳವರೆಗೆ ನೆನಪಿಸಿಕೊಳ್ಳುತ್ತಾರೆ ಎಂದು ಮೋದಿ ಹೇಳಿದರು.