– ಮೂರೂ ಮೂರ್ತಿಗಳಿಗೂ ಪೂಜೆ, ಆರಾಧನೆ, ಸೇವೆ
ಉಡುಪಿ: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆ ಮಾಡಲು ಬಾಲರಾಮನ ಮೂರು ಮೂರ್ತಿಗಳನ್ನು ಕೆತ್ತಲಾಗಿತ್ತು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕೆತ್ತಿದ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಭಾಗ್ಯ ಸಿಕ್ಕಿತ್ತು.
Advertisement
ಉತ್ತರ ಕನ್ನಡ ಜಿಲ್ಲೆಯ ಶಿಲ್ಪಿ ಗಣೇಶ್ ಭಟ್ ಮತ್ತು ರಾಜಸ್ಥಾನದ ಶಿಲ್ಪಿ ಸತ್ಯ ನಾರಾಯಣ ಪಾಂಡೆ ಕೆತ್ತಿದ ಬಾಲರಾಮನ ಮೂರ್ತಿಗಳನ್ನು ಏನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿದೆ. ಈ ಎರಡು ಮೂರ್ತಿಗಳ ಬಗ್ಗೆ ಟ್ರಸ್ಟ್ ಶೀಘ್ರ ತೀರ್ಮಾನ ತೆಗೆದುಗೊಳ್ಳಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕರ್ತವ್ಯ ಪಥದ ಪರೇಡ್‍ನಲ್ಲಿ ಮಿಂಚಿದ ಬಾಲಕರಾಮ!
Advertisement
Advertisement
ರಾಮಮಂದಿರದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ನಿರ್ಮಾಣವಾಗಲಿರುವ ಗುಡಿಯಲ್ಲಿ ಎರಡು ಮೂರ್ತಿಗಳನ್ನು ಇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಮೂರು ಮೂರ್ತಿಗಳಿಗೂ ಅಯೋಧ್ಯೆ ರಾಮಮಂದಿರದಲ್ಲಿ ಪೂಜೆ, ಆರಾಧನೆ ನಡೆಯಲಿದೆ. ಭಕ್ತರಿಗೆ ದರ್ಶನ ಮಾಡುವ ಅವಕಾಶ ಸಿಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಜ.22 ರಂದು ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಜರುಗಿತು. ಇದನ್ನೂ ಓದಿ: ಅಯೋಧ್ಯೆಗೆ ಮೊದಲ ದಿನದ ಆನ್ಲೈನ್ ಕಾಣಿಕೆ 3.17 ಕೋಟಿ