Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Ayodhya Ram Mandir

ಕಬ್ಬಿಣ, ಸಿಮೆಂಟ್‌ ಬಳಸಿಲ್ಲ – ಕಲ್ಲಿನಿಂದಲೇ ಭವ್ಯ ರಾಮಮಂದಿರ ನಿರ್ಮಾಣ; ಯಾಕೆ ಗೊತ್ತಾ?

Public TV
Last updated: January 23, 2024 9:52 pm
Public TV
Share
5 Min Read
ayodhya ram mandir 3
SHARE

– ಭೂಕಂಪವಾದ್ರೂ ತಡೆದುಕೊಳ್ಳುವ ಸಾಮರ್ಥ್ಯ

500 ವರ್ಷಗಳ ಮತ್ತೊಂದು ವನವಾಸ ಮುಗಿಸಿ ಭಗವಾನ್‌ ರಾಮ ಅಯೋಧ್ಯೆಯಲ್ಲಿ (Ayodhya) ಮತ್ತೆ ಪಟ್ಟಕ್ಕೇರಿ ವಿರಾಜಮಾನನಾಗಿದ್ದಾನೆ. ಧರ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಆರಾಧ್ಯ ದೈವವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಅಯೋಧ್ಯೆ ಕಡೆ ಧಾವಿಸುತ್ತಿದೆ. ಸೋಮವಾರ ಪ್ರಾಣ ಪ್ರತಿಷ್ಠಾಪನೆಯಾಗಿದೆ. ದೇಶ-ವಿದೇಶಗಳಲ್ಲಿ ರಾಮ ಜಪ, ಭಜನೆ ಇನ್ನೂ ಮಾರ್ಧನಿಸುತ್ತಿದೆ. ಇದು ತೀರದ ಭಕ್ತಿ.

Ram Mandir 5

ರಾಮನ ಪುನರಾಗಮನದಿಂದ ಅಯೋಧ್ಯೆ ರಾಮಮಂದಿರ (Ram Mandir) ಕಂಗೊಳಿಸುತ್ತಿದೆ. ಸುಂದರ ದೇವಾಲಯ ಈಗ ಜಗತ್ತಿನ ಭಕ್ತಿಯ ಕೇಂದ್ರವಾಗಿದೆ. ರಾಮಮಂದಿರ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಅಯೋಧ್ಯೆ ರಾಮಮಂದಿರಕ್ಕೆ ಬರುವ ಪ್ರತಿ ಭಕ್ತರಿಗೂ ಇದರ ವೈಶಿಷ್ಟ್ಯ ತಿಳಿದಿರಲೇಬೇಕು. ಇದನ್ನೂ ಓದಿ: ರಾಮಮಂದಿರದಲ್ಲಿರೋ ಮೂರ್ತಿಗೆ `ಬಾಲಕ ರಾಮ’ ಹೆಸರು: ಪ್ರತಿಷ್ಠಾಪನೆಯ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ

ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ – ಮಂಕುತಿಮ್ಮ

ಕನ್ನಡದ ಹಿರಿಯ ಸಾಹಿತಿ ಡಿ.ವಿ.ಗುಂಡಪ್ಪ ಅವರ ‘ಮಂಕುತಿಮ್ಮನ ಕಗ್ಗ’ದ ಸಾಲುಗಳಿಗೆ ಹೇಳಿಮಾಡಿಸಿದಂತೆ ಅಯೋಧ್ಯೆ ರಾಮಮಂದಿರ ವಿನ್ಯಾಸ. ಈ ಭವ್ಯ ದೇವಾಲಯ ನಿರ್ಮಾಣಕ್ಕೆ ಸಾಂಪ್ರದಾಯಿಕ ಭಾರತೀಯ ಪರಂಪರೆಯ ವಾಸ್ತುಶಿಲ್ಪ ಹಾಗೂ ಆಧುನಿಕ ವಿಜ್ಞಾನ, ಎಂಜಿನಿಯರಿಂಗ್‌, ತಾಂತ್ರಿಕ ವಿಧಾನವನ್ನು ಸಂಯೋಜಿಸಿ ರಾಮಮಂದಿರವನ್ನು ನಿರ್ಮಿಸಲಾಗಿದೆ. ಶತಶತಮಾನಗಳ ವರೆಗೂ ರಾಮಭಕ್ತಿಯ ಪ್ರತಿಬಿಂಬವಾಗಿ ಈ ದೇವಾಲಯ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.

AYODHYA 5

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ‘ದೇವಾಲಯವನ್ನು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲಾಗಿದೆ. ಇದನ್ನು ಹಿಂದೆಂದೂ ಕಾಣದಂತಹ ಅಪ್ರತಿಮ ರಚನೆಯನ್ನಾಗಿ ಮಾಡಲು ಭಾರತದ ಉನ್ನತ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ದೇವಾಲಯದಲ್ಲಿ ಇಸ್ರೋ ತಂತ್ರಜ್ಞಾನಗಳನ್ನು ಸೂಕ್ತವಾಗಿ ಬಳಸಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

AYODHYA 1

ನಾಗರ ಶೈಲಿ ದೇವಾಲಯ
ಅಯೋಧ್ಯೆಯಲ್ಲಿ ಈಗ ಕಟ್ಟಲಾಗಿರುವ ರಾಮಮಂದಿರ ಸಂಪೂರ್ಣ ನಾಗರ ವಾಸ್ತು ಶೈಲಿಯಲ್ಲಿದೆ. ಉತ್ತರ ಭಾರತದ ಪುರಾತನ ದೇವಸ್ಥಾನಗಳೆಲ್ಲ ನಾಗರ ಶೈಲಿಯಲ್ಲೇ ಇವೆ. ಮುಖ್ಯವಾಗಿ ಗುಪ್ತರ ಕಾಲದಲ್ಲಿ ಶೈಲಿಯ ಹಲವು ದೇವಾಲಯಗಳನ್ನು ಕಾಣಬಹುದು. ನಾಗರ ಶೈಲಿಯ ವಿಶೇಷ ಏನೆಂದರೆ, ಕಲ್ಲುಗಳಿಂದ ವಿಶಾಲವಾದ ಮತ್ತು ಎತ್ತರವಾದ ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ ಮಂದಿರ ಕಟ್ಟಲಾಗುತ್ತದೆ. ದೊಡ್ಡ ಗೋಪುರದ ಕೆಳಗೆ ಗರ್ಭ ಗೃಹ ಇರುತ್ತದೆ. ಇದರ ಸುತ್ತ ಕೆಲವು ಮಂಟಪಗಳಿರುತ್ತವೆ (ರಾಮಮಂದಿರಕ್ಕೆ 5 ಮಂಟಪಗಳಿವೆ). ಉಳಿದಂತೆ ಗೋಪುರ, ಕಳಸ ಮತ್ತು ಅದರ ಮೇಲಿನ ಧ್ವಜ ದಕ್ಷಿಣ ಭಾರತದ ದೇವಾಲಯಗಳ ಶೈಲಿಯಲ್ಲೇ ಇರುತ್ತವೆ.

AYODHYA RAM MANDIR 2

ಈ ದೇವಾಲಯದ ಶಿಲ್ಪಿ ಯಾರು?
ರಾಮಮಂದಿರ ವಾಸ್ತು ಶಿಲ್ಪಿ ಚಂದ್ರಕಾಂತ್‌ ಸೋಂಪುರ. ಅವರು ಗುಜರಾತ್‌ನ ಅಹಮದಾಬಾದ್‌ನ ಕರ್ಣಾವತಿಯವರು. ಅವರ ಅಜ್ಜ ಪ್ರಭಾಕರ್‌ ಸೋಂಪುರ ಗುಜರಾತ್‌ನ ಸೋಮನಾಥ ಮಂದಿರವನ್ನು ಕಟ್ಟಿದವರು. ನಾಗರ ಶೈಲಿಯಲ್ಲಿ ಮಂದಿರ ಕಟ್ಟುವ ಶಿಲ್ಪಿ ಅವರು. ತಲೆಮಾರುಗಳಿಂದ ಈ ಕುಟುಂಬ, ಸಂಪ್ರದಾಯದಂತೆ ಪರಂಪರೆಯ ದೇವಾಲಯ ರಚನೆಗಳನ್ನು ವಿನ್ಯಾಸಗೊಳಿಸಿಕೊಂಡು ಬಂದಿದೆ. ಈ ಕುಟುಂಬ 100 ಕ್ಕೂ ಹೆಚ್ಚು ದೇವಾಲಯಗಳನ್ನು ವಿನ್ಯಾಸಗೊಳಿಸಿದೆ. ಕೋಟ್ಯಂತರ ಭಾರತೀಯರ ಶತಶತಮಾನಗಳ ಕನಸಾಗಿದ್ದ ಭವ್ಯ ರಾಮಮಂದಿರವನ್ನು ವಿನ್ಯಾಸಗೊಳಿಸಿದ್ದು ಚಂದ್ರಕಾಂತ್‌ ಸೋಂಪುರ ಅವರ ಪುಣ್ಯ. ಇದನ್ನೂ ಓದಿ: ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!

ram mandir 1 1

ವಾಸ್ತುಶಿಲ್ಪಿ ಹೇಳೋದೇನು?
ವಾಸ್ತುಶಿಲ್ಪದ ವಾರ್ಷಿಕಗಳಲ್ಲಿ ಶ್ರೀರಾಮ ದೇವಾಲಯವು ಭಾರತದಲ್ಲಿ ಮಾತ್ರವಲ್ಲ, ಭೂಮಿಯ ಮೇಲಿನ ಯಾವುದೇ ಸ್ಥಳದಲ್ಲಿ ಇದುವರೆಗೆ ಕಲ್ಪಿಸಲಾಗದ ಅಪರೂಪದ, ವಿಶಿಷ್ಟ ರೀತಿಯ ಭವ್ಯವಾದ ಸೃಷ್ಟಿಯಾಗಿದೆ ಎಂದು ಚಂದ್ರಕಾಂತ್‌ ಸೋಂಪುರ ಹೇಳುತ್ತಾರೆ.

ram mandir 3

ಮಂದಿರ ನಿರ್ಮಾಣಕ್ಕೆ ಕಬ್ಬಿಣ, ಸಿಮೆಂಟ್‌ ಬಳಕೆಯಿಲ್ಲ
ರಾಮಮಂದಿರದ ಮತ್ತೊಂದು ವೈಶಿಷ್ಟ್ಯವೆಂದರೆ, ಪುರಾತನ ಕಾಲದಲ್ಲಿ ಶಿಲೆಯನ್ನಷ್ಟೇ ಬಳಸಿ ನಿರ್ಮಿಸುತ್ತಿದ್ದಂತೆಯೇ ಇದನ್ನೂ ನಿರ್ಮಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಬೃಹತ್‌ ಗಾತ್ರದ ಕಲ್ಲುಗಳನ್ನಷ್ಟೇ ಬಳಸಲಾಗಿದೆ. ಕಬ್ಬಿಣ, ಸಿಮೆಂಟ್‌ ಯಾವುದನ್ನೂ ಬಳಸಿಲ್ಲ. ಪ್ರಾಕೃತಿಕ ವಿಕೋಪಗಳಿಂದ ಮಂದಿರ ಡ್ಯಾಮೇಜ್‌ ಆಗಬಾರದು. ಅದರ ಆಯುಷ್ಯವೂ ಹೆಚ್ಚಿನ ವರ್ಷ ಬರಬೇಕು ಎಂಬ ದೃಷ್ಟಿಯಿಂದ ನಿರ್ಮಾಣ ಕಾರ್ಯದಲ್ಲಿ ಪಾರಂಪರಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!

RAMMANDIR

ದೇವಾಲಯದ ಒಟ್ಟು ವಿಸ್ತೀರ್ಣ 2.7 ಎಕರೆ. ನಿರ್ಮಿತ ಪ್ರದೇಶವು ಸುಮಾರು 57,000 ಚದರ ಅಡಿಗಳಾಗಿದೆ. ಇದು ಮೂರು ಅಂತಸ್ತಿನ ರಚನೆಯಾಗಲಿದೆ. ಕಬ್ಬಿಣದ ಜೀವಿತಾವಧಿಯು ಕೇವಲ 80-90 ವರ್ಷಗಳಾಗಿರುತ್ತದೆ. ಹೀಗಾಗಿ, ದೇವಾಲಯದಲ್ಲಿ ಯಾವುದೇ ಕಬ್ಬಿಣ ಅಥವಾ ಉಕ್ಕು, ಸಿಮೆಂಟ್‌ ಬಳಸಿಲ್ಲ ಎಂದು ನೃಪೇಂದ್ರ ಮಿಶ್ರಾ ಹೇಳುತ್ತಾರೆ. ದೇವಾಲಯದ ಎತ್ತರವು 161 ಅಡಿ. ಅಂದರೆ, ಕುತಾಬ್ ಮಿನಾರ್‌ನ ಎತ್ತರದ ಸುಮಾರು 70% ಇದೆ.

ayodhya ram mandir

ಉತ್ತಮ ಗುಣಮಟ್ಟದ ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಯನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗಿದೆ. ಜಾಯಿಂಟ್‌ (joints) ಮಾಡುವಂತಹ ಭಾಗಗಳಲ್ಲಿ ಸಿಮೆಂಟ್ ಅಥವಾ ಸುಣ್ಣದ ಗಾರೆಗಳ ಬಳಕೆ ಮಾಡಿಲ್ಲ. ಸಂಪೂರ್ಣ ರಚನೆಯ ನಿರ್ಮಾಣದಲ್ಲಿ ಲಾಕ್ ಮತ್ತು ಕೀ ಯಾಂತ್ರಿಕ ವ್ಯವಸ್ಥೆಯನ್ನು ಮಾತ್ರ ಬಳಸಲಾಗಿದೆ ಎಂದು ನಿರ್ಮಾಣ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಪ್ರದೀಪ್ ಕುಮಾರ್ ರಾಮಂಚಾರ್ಲ ತಿಳಿಸಿದ್ದಾರೆ. ಇದನ್ನೂ ಓದಿ: ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ

ram mandir 1

2,500 ವರ್ಷಗಳ ವರೆಗೆ ಎಷ್ಟೇ ಭೂಕಂಪವಾದ್ರೂ ತಡೆದುಕೊಳ್ಳುತ್ತೆ
ಪ್ರಾಕೃತಿಕ ವಿಕೋಪಗಳು ತಂದೊಡ್ಡಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ರಾಮಮಂದಿರವನ್ನು ನಿರ್ಮಿಸಲಾಗಿದೆ. ಮಂದಿರದ ಆಯುಷ್ಯ ಹೆಚ್ಚು ವರ್ಷ ಇರಬೇಕು ಎಂಬ ದೃಷ್ಟಿಯಿಂದ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ಕೆಲಸ ಮಾಡಿದೆ. 2,500 ವರ್ಷಗಳ ವರೆಗೆ ಎಷ್ಟೇ ಭೂಕಂಪವಾದರೂ ಮಂದಿರಕ್ಕೆ ಯಾವುದೇ ಅಪಾಯವಿರುವುದಿಲ್ಲ. ಅದೆಲ್ಲವನ್ನೂ ತಡೆದುಕೊಂಡು ಸುರಕ್ಷಿತವಾಗಿ ನಿಲ್ಲುವಂತೆ ಮೂರು ಅಂತಸ್ತಿನ ಭವ್ಯ ಮಂದಿರ ನಿರ್ಮಿಸಲಾಗಿದೆ (ಈಗಾಗಲೇ ಮೊದಲ ಅಂತಸ್ತಿನ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2025 ರ ಹೊತ್ತಿಗೆ ಪೂರ್ಣಗೊಳ್ಳಲಿದೆ).

ram mandir chandrakanth sompura

ರಾಮಮಂದಿರ ಹೇಗೆ ಕಟ್ಟಲಾಗ್ತಿದೆ?
ಇಡೀ ದೇವಾಲಯದ ಪ್ರದೇಶಕ್ಕೆ ಮಣ್ಣನ್ನು 15 ಮೀಟರ್ ಆಳಕ್ಕೆ ಅಗೆಯಲಾಗಿದೆ. 12-14 ಮೀಟರ್ ಆಳದಲ್ಲಿ ಇಂಜಿನಿಯರ್ಡ್ ಮಣ್ಣನ್ನು ಹಾಕಲಾಗಿದೆ. ಯಾವುದೇ ಕಬ್ಬಿಣದ ಸರಳುಗಳನ್ನು ಬಳಸಿಲ್ಲ. ರೋಲ್‌ ಮಾಡುವಾಗ 48 ಲೇಯರ್‌ (ಪದರ)ಗಳನ್ನು ಹಾಕಲಾಗಿದೆ. ಇದರ ಮೇಲೆ 1.5 ಮೀಟರ್ ದಪ್ಪದ M-35 ದರ್ಜೆಯ ಲೋಹ ಮುಕ್ತ ಕಾಂಕ್ರೀಟ್ ತೆಪ್ಪವನ್ನು ಬಲವರ್ಧನೆಯಾಗಿ ಹಾಕಲಾಗಿದೆ. ಅಡಿಪಾಯವನ್ನು ಮತ್ತಷ್ಟು ಬಲಪಡಿಸಲು ದಕ್ಷಿಣ ಭಾರತದಿಂದ ತಂದಿರುವ 6.3 ಮೀಟರ್ ದಪ್ಪದ ಗ್ರಾನೈಟ್ ಕಲ್ಲಿನ ಸ್ತಂಭವನ್ನು ಇರಿಸಲಾಗಿದೆ. ಈ ಕಲ್ಲುಗಳನ್ನು ಹೆಚ್ಚಾಗಿ ಕರ್ನಾಟಕದ್ದೇ ಬಳಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?

Ayodhya Ram Lalla 1

ರಾಜಸ್ಥಾನದ ಭರತ್‌ಪುರ ಜಿಲ್ಲೆ ಬಯಾನಾ ತಾಲೂಕಿನ ಒಂದು ಗುಡ್ಡದ ಪ್ರದೇಶದಲ್ಲಿ ಗುಲಾಬಿ ಬಣ್ಣದ ಸ್ಯಾಂಡ್‌ ಸ್ಟೋನ್‌ ಸಿಗುತ್ತದೆ. ಆ ಕಲ್ಲುಗಳನ್ನು ಬಳಸಿ ಈ ಮಂದಿರದ ನಿರ್ಮಾಣ ಆಗಿದೆ. ಕೆತ್ತನೆ ಆಗಿಯೇ ಬಂದಿರುವ ಕಲ್ಲುಗಳಿವು. ಇದರಿಂದಾಗಿ ಈ ಮಂದಿರಕ್ಕೆ ಪ್ರಾಚೀನತೆಯ ಮೆರುಗು ಸಿಕ್ಕಿದೆ. CBRI ಪ್ರಕಾರ, ನೆಲ ಅಂತಸ್ತಿನ ಒಟ್ಟು ಅಂಕಣಗಳ ಸಂಖ್ಯೆ 160, ಮೊದಲ ಮಹಡಿ 132 ಮತ್ತು ಎರಡನೇ ಮಹಡಿ 74. ಇವೆಲ್ಲವೂ ಮರಳುಗಲ್ಲಿನಿಂದ ಮಾಡಲ್ಪಟ್ಟಿವೆ. ಅಲಂಕರಿಸಿದ ಗರ್ಭಗುಡಿಯು ರಾಜಸ್ಥಾನದಿಂದ ತೆಗೆದ ಬಿಳಿ ಮಕ್ರಾನ ಅಮೃತಶಿಲೆಯಿಂದ ಕೂಡಿದೆ. ತಾಜ್‌ಮಹಲ್‌ ನಿರ್ಮಾಣಕ್ಕೂ ಇದೇ ಶಿಲೆ ಬಳಸಲಾಗಿದೆ. ತಾಜ್‌ಮಹಲ್ ಅನ್ನು ಮಕ್ರಾನಾ ಗಣಿಗಳಿಂದ ತೆಗೆದ ಅಮೃತಶಿಲೆ ಬಳಸಿ ನಿರ್ಮಿಸಲಾಗಿದೆ. CBRI ಸಂಸ್ಥೆಯು 2020 ರ ಆರಂಭದಿಂದಲೂ ರಾಮಮಂದಿರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

ಅತ್ಯಾಧುನಿಕ ಸಾಫ್ಟ್‌ವೇರ್‌ ಉಪಕರಣಗಳು ಮತ್ತು 21ನೇ ಶತಮಾನದ ಕಟ್ಟಡ ಸಂಕೇತಗಳು ರಾಮಮಂದಿರವನ್ನು ಪ್ರತಿನಿಧಿಸುತ್ತವೆ. ಈಗಿನ ಕಲೆಯ ಜ್ಞಾನದ ಆಧಾರದ ಮೇಲೆ ರಾಮಮಂದಿರವು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಉಳಿಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಅತ್ಯಂತ ಆನಂದದಾಯಕ ಅನುಭವ. ಉತ್ತಮ ಕಲಿಕೆಯ ಕಾರ್ಯವಾಗಿತ್ತು ಎಂದು ರಾಮಂಚಾರ್ಲ ತಿಳಿಸಿದ್ದಾರೆ. ಇದನ್ನೂ ಓದಿ: 35 ನಿಮಿಷದ ಭಾಷಣದಲ್ಲಿ 114 ಬಾರಿ ರಾಮ ನಾಮ ಸ್ಮರಿಸಿದ ಮೋದಿ!

TAGGED:AyodhyaIronRam MandirRam templestoneಅಯೋಧ್ಯೆರಾಮಮಂದಿರ
Share This Article
Facebook Whatsapp Whatsapp Telegram

You Might Also Like

Siddaramaiah 9
Districts

5 ವರ್ಷ ಅಧಿಕಾರ ಗಟ್ಟಿ – ತವರಿನಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಸಿಎಂ

Public TV
By Public TV
15 minutes ago
Raichur Leopard
Districts

ರಾಯಚೂರಿನಲ್ಲೊಂದು ‘ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ – ಒಂದೂವರೆ ತಿಂಗಳ ಬಳಿಕ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಜನ

Public TV
By Public TV
17 minutes ago
Davanagere Heart Attack
Davanagere

Davanagere | ವಾಕಿಂಗ್ ಹೋಗುತ್ತಿರುವಾಗಲೇ ಕುಸಿದು ಬಿದ್ದು ಉದ್ಯಮಿ ಸಾವು

Public TV
By Public TV
46 minutes ago
Actress Manjula
Bengaluru City

ಪಾರ್ಟಿ, ಪಬ್‌ಗೆ ಹೋಗಿ ಸಮಯವಲ್ಲದ ಸಮಯಕ್ಕೆ ಮನೆಗೆ ಬರ್ತಿದ್ಳು: ಕಿರುತೆರೆ ನಟಿ ಶ್ರುತಿ ಪತಿಯ ಆರೋಪ

Public TV
By Public TV
55 minutes ago
KB Ganapathy
Districts

ಮೈಸೂರು | ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ನಿಧನ

Public TV
By Public TV
1 hour ago
Shubhanshu Shukla
Latest

ಮಂಗಳವಾರ ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಶುಭಾಂಶು ಶುಕ್ಲಾ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?