– 4 ವೇದ, 4 ಯುಗದಂತೆಯೇ ಅಯೋಧ್ಯೆಯಲ್ಲಿದೆ 4 ಪಥ
– ಯಾವುವು ಆ ನಾಲ್ಕು ಮಾರ್ಗ?
ಅಯೋಧ್ಯೆ (ಉತ್ತರ ಪ್ರದೇಶ): ರಾಮಮಂದಿರದಲ್ಲಿ (Ram Mandir) ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಅಯೋಧ್ಯೆ (Ayodhya Ram Mandir) ರಾಮಮಯವಾಗಿ ಸಿಂಗಾರಗೊಳ್ಳುತ್ತಿದೆ. ಎಲ್ಲೆಲ್ಲೂ ರಾಮನಾಮ, ರಾಮಭಕ್ತಿ, ರಾಮಜಪ (Ram Paths) ಕೇಳಿಬರುತ್ತಿದೆ. ನೂರಾರು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿರುವುದಕ್ಕೆ ರಾಮಭಕ್ತರು ಸಂತಸಗೊಂಡಿದ್ದಾರೆ. ಭಕ್ತರ ಯಾತ್ರೆ ಈಗ ರಾಮನೂರಿನ ಕಡೆ ಹೊರಟಿದೆ.
Advertisement
ಸನಾತನ ಧರ್ಮದಲ್ಲಿ ನಾಲ್ಕು ವೇದ, ನಾಲ್ಕು ಯುಗಗಳು ಜನರಿಗೆ ದಾರಿದೀಪವಿದ್ದಂತೆ. ಅದರಿಂದ ಪ್ರೇರೇಪಣೆಗೊಂಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಸರ್ಕಾರ ರಾಮನೂರಿಗೆ ಯಾತ್ರೆ ಕೈಗೊಳ್ಳುವ ಭಕ್ತರಿಗಾಗಿ ನಾಲ್ಕು ಪಥಗಳನ್ನು ಅಭಿವೃದ್ಧಿ ಪಡಿಸಿದೆ. ರಾಮನಗರಿಗೆ ಬರುವವರಿಗೆ ಇದು ಕೇವಲ ಮಾರ್ಗವಲ್ಲ, ಮೋಕ್ಷದ ಹಾದಿ. ಬನ್ನಿ ಹಾಗಿದ್ರೆ ಆ ಮೋಕ್ಷದ ನಾಲ್ಕು ಪಥಗಳ ಬಗ್ಗೆ ತಿಳಿಯೋಣ. ಇದನ್ನೂ ಓದಿ: ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?
Advertisement
Advertisement
ಯಾವುವು ಆ 4 ಪಥ?
ಧರ್ಮಪಥ, ರಾಮಪಥ, ಭಕ್ತಿಪಥ ಮತ್ತು ಜನ್ಮಭೂಮಿಪಥ ಎಂಬ ನಾಲ್ಕು ಮಾರ್ಗಗಳ ಬಗ್ಗೆ ಅಯೋಧ್ಯೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಮಾರ್ಗಗಳು ಮೋಕ್ಷದ ಪಥ ಎಂದೇ ಬಿಂಬಿತವಾಗಿವೆ. ರಾಮನಗರಕ್ಕೆ ಬರುವವರು ಈ ಮಾರ್ಗದಲ್ಲಿ ಬರಬೇಕು.
Advertisement
ರಾಮಜನ್ಮಭೂಮಿ ದೇವಸ್ಥಾನಕ್ಕೆ ಹೋಗುವ ಎರಡು ಲೇನ್ ರಸ್ತೆ
ಲತಾ ಮಂಗೇಶ್ಕರ್ ಚೌಕ್‌ನಿಂದ ಲಕ್ನೋ-ಗೋರಖ್‌ಪುರ ಹೆದ್ದಾರಿಯನ್ನು ಸಂಪರ್ಕಿಸುವ 2 ಕಿಮೀ ಉದ್ದದ ನಾಲ್ಕು ಪಥದ ಧರ್ಮಪಥ, ಸಹದತ್‌ಗಂಜ್‌ನಿಂದ ಲತಾ ಮಂಗೇಶ್ಕರ್ ಚೌಕ್ (ಹೊಸ ಘಾಟ್)ಗೆ ಸಂಪರ್ಕಿಸುವ 12.94 ಕಿಮೀ ಉದ್ದದ ನಾಲ್ಕು ಪಥದ ರಾಮಪಥ, ಶೃಂಗಾರ್ ಹಾತ್‌ನಿಂದ ಹನುಮಾನ್ ಘರ್ ವರೆಗಿನ ರಸ್ತೆಯು ರಾಮಪಥಕ್ಕೆ ಸಂಪರ್ಕ ಹೊಂದಿದೆ. ನಾಲ್ಕು ಪಥದ 742 ಮೀಟರ್ ಉದ್ದದ ಭಕ್ತಿಪಥ, ಅದೇ ರೀತಿ ಎರಡು ಪಥದ 580 ಮೀಟರ್ ಉದ್ದದ ಜನ್ಮಭೂಮಿಪಥ ರಾಮಪಥದಲ್ಲಿಯೇ ಸುಗ್ರೀವ ಕೋಟೆ ಬಿರ್ಲಾ ಧರ್ಮಶಾಲಾ ಮೂಲಕ ರಾಮಜನ್ಮಭೂಮಿ ದೇವಸ್ಥಾನಕ್ಕೆ ಹೋಗುತ್ತದೆ. ಇದನ್ನೂ ಓದಿ: ರಾಮಲಲ್ಲಾ ಪ್ರತಿಷ್ಠಾಪನೆ, ಇತರೆ ಪೂಜೆಗಳ ಬಗ್ಗೆ ಪ್ರಧಾನ ಅರ್ಚಕರು ವಿವರಿಸಿದ್ದು ಹೀಗೆ
ರಾಮಪಥದಲ್ಲಿ ಈ ಹಿಂದೆ ನೂಕುನುಗ್ಗಲು ಉಂಟಾಗ್ತಿತ್ತು
ಈಗಿನ ರಾಮಪಥ ಜನಸಂದಣಿ, ನೂಕುನುಗ್ಗಲು ಮೊದಲಾದ ಕಿರಿಕಿರಿಯಿಂದಲೇ ಕೂಡಿರುತ್ತಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಜನರ ಮುಖಗಳು ಅರಳಿವೆ. ಕಿರಿಕಿರಿ ತಪ್ಪಿದೆ. ಮಾರ್ಗ ಅಭಿವೃದ್ಧಿಯಾಗಿದೆ. ಸುಂದರವಾಗಿ ರೂಪುಗೊಂಡಿದೆ. ಮಾರ್ಗದುದ್ದಕ್ಕೂ ರಾಮಭಕ್ತಿ ಚಿತ್ರಣ ಮನ ಸೆಳೆಯುವಂತಿದೆ. ಪ್ರಾಚೀನ ವೈಭವವನ್ನು ಆಧುನಿಕ ಜೀವನಶೈಲಿಗೆ ಒಗ್ಗಿಸಿಕೊಂಡು ಅಯೋಧ್ಯೆಯ ಪುನಶ್ಚೇತನದ ಹಾದಿಯನ್ನು ಪ್ರತಿಬಿಂಬಿಸಲಾಗಿದೆ.
ದೈವತ್ವದ ಪ್ರವೇಶದ ಸಂಕೇತ
ಹನುಮತ್ ನಿವಾಸದ ಮಹಂತ್ ಆಚಾರ್ಯ ಮಿಥಿಲೇಶ್ ನಂದಿನಿ ಶರಣ್, ಈ ನಾಲ್ಕು ಮಾರ್ಗಗಳನ್ನು 4 ವೇದಗಳು, ನಾಲ್ಕು ಯುಗಗಳಾಗಿ ಮಾತ್ರವಲ್ಲ ನಾಲ್ಕು ಪುರುಷಾರ್ಥಗಳು ಹಾಗೂ ನಾಲ್ಕು ಆಶ್ರಮಗಳಾಗಿ ನೋಡಬಹುದು ಎಂದು ಹೇಳುತ್ತಾರೆ. ಪುರುಷಾರ್ಥವಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನು ತೆಗೆದುಕೊಂಡರೆ, ಧರ್ಮಪಥವು ನಿಮ್ಮನ್ನು ಹೆದ್ದಾರಿಯಿಂದ ಅಯೋಧ್ಯೆಗೆ ಕರೆದೊಯ್ಯುತ್ತದೆ. ಇದು ದೈವತ್ವದ ಪ್ರವೇಶವನ್ನು ಸಂಕೇತಿಸುತ್ತದೆ. ರಾಮಪಥವು ನಿಮ್ಮನ್ನು ಅಯೋಧ್ಯೆಗೆ ಪ್ರವೇಶಿಸುವಂತೆ ಮಾಡುತ್ತದೆ. ರಾಮನ ಜೀವನದಂತೆಯೇ ಇದು ಅತ್ಯಂತ ದೀರ್ಘವಾದ ಮಾರ್ಗವಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?
ಪ್ರತಿ ಹಾದಿಯಲ್ಲಿ ರಾಮನ ಜೀವನ ಚರಿತ್ರೆ
ರಾಮಪಥ ಬಗ್ಗೆ ಇಲ್ಲಿನ ಜನರು ತಮ್ಮದೇ ಆದ ಭಾವನೆಗಳನ್ನು ಹೊಂದಿದ್ದಾರೆ. ನೀವು ಧಾರ್ಮಿಕ ಮಾರ್ಗವನ್ನು ತಲುಪಿದ ತಕ್ಷಣ ಭಗವಾನ್ ಶ್ರೀರಾಮನ ಜೀವನದ ಚಿತ್ರಣವನ್ನು ಅನುಭೂತಿ ಪಡೆಯುತ್ತೀರಿ. ಸರಯು ಪವಿತ್ರ ನದಿ ದಡವನ್ನು ತಲುಪುವ ಮೂಲಕ ನಿಮ್ಮ ಮನಸ್ಸು ಆಧ್ಯಾತ್ಮಿಕ ಅನುಭವದಿಂದ ತೃಪ್ತವಾಗುತ್ತದೆ. ರಾಮನ ಹಾದಿಯಲ್ಲಿ ನೀವು ಆಧ್ಯಾತ್ಮಿಕ ಮತ್ತು ಆರ್ಥಿಕ ಸಮೃದ್ಧಿಯ ಕುರುಹುಗಳನ್ನು ನೋಡುತ್ತೀರಿ. ಭಗವಾನ್ ಶ್ರೀರಾಮನು ಯಾವಾಗಲೂ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಆದ್ದರಿಂದ ಭಕ್ತಿಪಥ ಎಂಬ ಹೆಸರು ಅರ್ಥಪೂರ್ಣವಾಗಿದೆ. ಅವರ ಜನ್ಮಸ್ಥಳವು ವಿಮೋಚಕವಾಗಿದೆ. ಇತರ ಮೂಲಭೂತ ಪ್ರೇರಣೆಗಳೂ ಇವೆ. ಇದನ್ನೂ ಓದಿ: ಗುಜರಾತ್‌ನಿಂದ ಅಯೋಧ್ಯೆಗೆ ಆಗಮಿಸಿದೆ 500 ಕೆಜಿಯ ಬೃಹತ್ ನಗಾರಿ