ಚಿತ್ರದುರ್ಗ: ಅಯೋಧ್ಯೆ ರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ರಾಮಮಂದಿರದಲ್ಲಿ ವಿಗ್ರಹಗಳ ಕೆತ್ತನೆಗೆ ತೆರಳಿದ್ದ ದೇಶದ ಸಾವಿರಾರು ಜನ ಶಿಲ್ಪಿಗಳಲ್ಲಿ ಕನ್ನಡಿಗರಾದ ಚಿತ್ರದುರ್ಗದ ಕೀರ್ತಿ ನಂಜುಂಡಸ್ವಾಮಿ ಕೆತ್ತನೆ ಮಾಡಿರುವ ವಿಘ್ನೇಶ್ವರನ ಪ್ರತಿಮೆ ಅದ್ಭುತವಾಗಿ ಮೂಡಿಬಂದಿದೆ. ಹೀಗಾಗಿ ಒಂದು ತಿಂಗಳ ಬಳಿಕ ಅಯೋಧ್ಯೆಯಿಂದ ಮನೆಗೆ ವಾಪಸ್ ಬಂದಿರುವ ಕೀರ್ತಿಯವರ ಮನೆಯಲ್ಲಿ ಸಂತಸ ಮನೆ ಮಾಡಿದೆ.
Advertisement
ಈ ವೇಳೆ ಪಬ್ಲಿಕ್ ಟಿವಿ ಜೊತೆ ಕೀರ್ತಿ ನಂಜುಂಡಸ್ವಾಮಿ ಹಾಗೂ ಅವರ ತಾಯಿ ಶಾರದಮ್ಮ ಮಾತನಾಡಿದ್ದಾರೆ. ಅಯೋಧ್ಯೆಗೆ ತೆರಳುವ ಅವಕಾಶ ಕೆನರಾ ಸಂಸ್ಥೆಯ ರಘುಮಾಸ್ಟರ್ ಅವರಿಂದ ಸಿಕ್ಕಿತು. ಈ ಕ್ರೆಡಿಟ್ ಅವರಿಗೆ ಸಲ್ಲಬೇಕು. ಅಲ್ಲಿನ ಬಹುತೇಕ ಕೆತ್ತನೆಕಾರ್ಯ ಮಿಷಿನರಿಗಳಿಂದ ಮೂಡಿಬಂದಿವೆ. ಆದರೆ ಕನ್ನಡಿಗರು ಮಾತ್ರ ಹೊಯ್ಸಳ ಶೈಲಿಯ ಕೆತ್ತನೆಗಳನ್ನು ಕೈಯಿಂದ ಕೆತ್ತನೆ ಮಾಡಿದ್ದೇವೆ. ಆ ಕೆತ್ತನೆ ಎಲ್ಲರ ಗಮನ ಸೆಳೆದಿವೆ. ಹೀಗಾಗಿ ಮತ್ತಷ್ಟು ಜನ ಕನ್ನಡಿಗರಿಗೆ ಕೆತ್ತನೆ ಕಾರ್ಯಕ್ಕೆ ಅವಕಾಶ ಸಿಗುವ ಚಿಂತನೆ ನಡೆದಿದೆ. ಆ ರಾಮಜನ್ಮಭೂಮಿಯಲ್ಲಿ ಈ ಅವಕಾಶ ನಮಗೆ ಸಿಕ್ಕಿದ್ದೇ ಪುಣ್ಯ ಎನಿಸಿದ್ದು, ಜೀವನ ಸಾರ್ಥಕವಾಗಿದೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೀರ್ತಿಯವರ ತಾಯಿ ಕೂಡ ಈ ಅವಕಾಶ ಮಗನಿಗೆ ಒದಗಿ ಬಂದಿದ್ದು ಪೂರ್ವಜರ ಪುಣ್ಯವಾಗಿದೆ ಎಂದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ನಿಖಿಲ್ ಗೆ ಬಂತು ಆಹ್ವಾನ
Advertisement
Advertisement
ಇವರ ಮನೆತನ ಹಿಂದೂಪರ ಸಂಘಟನೆಯಾದ ಬಜರಂಗದಲ್ಲಿ ಗುರುತಿಸಿಕೊಂಡಿದೆ. ಕೀರ್ತಿಯವರ ದೊಡ್ಡಪ್ಪ ಟೈಗರ್ ತಿಪ್ಪೇಸ್ವಾಮಿ ರಾಮಮಂದಿರ ನಿರ್ಮಾಣಕ್ಕಾಗಿ ಕರಸೇವಕ ಆಗಿ ಹೋರಾಟದಲ್ಲಿ ಭಾಗಿಯಾಗಿದ್ದರು. ಈಗ ಅವರ ಸಹೋದರನ ಪುತ್ರನಾದ ಕೀರ್ತಿಯವರು ಸಹ ಈ ರೀತಿ ಅಯೋಧ್ಯೆಯ ರಾಮಮಂದಿರದಲ್ಲಿ ವಿಘ್ನೇಶ್ವರ ವಿಗ್ರಹ ಕೆತ್ತನೆಗೆ ತೆರಳಿರೋದು ಕೋಟೆನಾಡಿನ ಜನರಲ್ಲಿ ಸಂತಸ ಮನೆ ಮಾಡಿದೆ.