ಬೆಂಗಳೂರು: ಇಡೀ ಹಿಂದೂ ಸಮಾಜ ಜನವರಿ 22ರ ದಿನಕ್ಕೆ ಕಾದು ಕುಳಿತಿದೆ. ಶ್ರೀರಾಮನೂರಿನಲ್ಲಿ ಶ್ರೀರಾಮಮಂದಿರದ (Ayodhya RamMandir) ಲೋಕಾರ್ಪಣೆಯನ್ನು ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಕಂಗಳು ಕಾಯ್ತಿವೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ದೇಶದೆಲ್ಲೆಡೆ ಸಿದ್ಧತೆಗಳು ಆರಂಭವಾಗಿವೆ. ಅದರಂತೆ ಕರ್ನಾಟಕದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ನಿಂದ ಸಿದ್ಧತೆಗಳು ಆರಂಭವಾಗಿವೆ.
Advertisement
ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆ ಜನವರಿ 1 ರಿಂದ 15 ರವರೆಗೆ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ 15 ದಿನದಲ್ಲಿ ರಾಜ್ಯದ 29,500 ಗ್ರಾಮಗಳಿಗೂ ಆಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಹಾಗೂ ನಿವೇದನಾ ಪತ್ರಗಳನ್ನು ತಲುಪುವ ಯೋಜನೆ ರೂಪಿಸಿದ್ದಾರೆ. ಈ ಅಭಿಯಾನದ ಪ್ರಮುಖ ಉದ್ದೇಶವೆಂದರೆ ಶ್ರೀ ರಾಮನ ಹೋರಾಟ, ಇತಿಹಾಸ ತಿಳಿಸುವುದಾಗಿದೆ ಎಂದು ಆರ್‍ಎಸ್‍ಎಸ್‍ನ ಕ್ಷೇತ್ರಿಯ ಕಾರ್ಯನಿರ್ವಾಹಕ ತಿಪ್ಪೇಸ್ವಾಮಿ ಹೇಳಿದ್ದಾರೆ.
Advertisement
Advertisement
ಜನವರಿ 22 ರಂದು ಪ್ರತಿ ಗ್ರಾಮದ ಪ್ರಮುಖ ದೇವಸ್ಥಾನಗಳಲ್ಲಿ ಬೆಳಗ್ಗೆ ಸತ್ಸಂಗ, ಪೂಜೆ, ಶ್ರೀ ರಾಮ,ಜೈರಾಮ ಅಂತಾ 108 ಬಾರಿ ಪಠಣೆಯಿದೆ. ಜೊತೆಗೆ ದೇವಾಲಯದಲ್ಲಿ ಎಲ್ ಇಡಿ ಸ್ಕ್ರೀನ್ ಅಳವಡಿಸಿ, ದೇವಸ್ಥಾನದ ಪ್ರಾಣ ಪ್ರತಿಷ್ಟಾಪನೆ ನೋಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ ಆವತ್ತಿನ ದಿನ ಸಂಜೆ ಅಯೋಧ್ಯೆ ಮುಖವಾಗಿಟ್ಟು ಪ್ರತಿ ಮನೆಯಲ್ಲೂ ಐದು ದೀಪಗಳನ್ನು ಬೆಳಗುವವಂತೆ ಕರೆ ಕೊಡಲಾಗಿದೆ. ಈ ಸಲದ ಸಂಪರ್ಕ ಅಭಿಯಾನದಲ್ಲಿ ಸುಮಾರು 1.5 ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಅಂತಾ ಅಂದಾಜಿಸಲಾಗಿದೆ. ಜನವರಿ 7 ಮಹಾಸಂಪರ್ಕ ಅಭಿಯಾನಯಿದೆ.ರಾಮ ಪ್ರತಿಷ್ಟಾಪನೆಯ ಸಮಯ ಬೆಳಿಗ್ಗೆ 11 ಘಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಟ್ರಸ್ಟ್ ನವರು ನಿಗದಿ ಮಾಡಿದ್ದಾರೆ.3 ದಿನ ಮೊದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?
Advertisement
ಫೆಬ್ರುವರಿ 19 ರಂದು ಕರ್ನಾಟಕ ದಕ್ಷಿಣ ಪ್ರಾಂತದ 2000 ಜನರಿಗೆ ಹಾಗೂ ಉತ್ತರ ಪ್ರಾಂತದ 1500 ಜನರಿಗೆ ರಾಮನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.ಫೆಬ್ರವರಿ 17 ರಂದು ಬೆಂಗಳೂರಿನಿಂದ,ಬೆಳಗಾವಿ,ಉಡುಪಿಯಿಂದ ವಿಶೇಷ ಟ್ರೇನ್ ವ್ಯವಸ್ಥೆ ಮಾಡಲಾಗಿದೆ.ಈ ಭಕ್ತಾದಿಗಳ ಊಟ,ವಸತಿ ಎಲ್ಲವನ್ನೂ ಟ್ರಸ್ಟ್ ನೋಡಿಕೊಳ್ಳಲಿದೆ. ಒಟ್ಟಿನಲ್ಲಿ ಈ ಶ್ರೀರಾಮೋತ್ಸವ ಸಂಭ್ರಮ ಕರುನಾಡಲ್ಲಿ ಈಗೀನಿಂದಲೇ ಕಳೆಗಟ್ಟಿದೆ.