ನವದೆಹಲಿ: ರಾಮ ಮಂದಿರದ ಬಳಿ ಇರುವ 67 ಎಕರೆ ಭೂಮಿಯಲ್ಲೇ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗ ನೀಡಬೇಕು ಎಂದು ಪ್ರಕರಣದ ಪ್ರಮುಖ ಅರ್ಜಿದಾರ ಇಕ್ಬಾಲ್ ಅನ್ಸಾರಿ ಮನವಿ ಮಾಡಿದ್ದಾರೆ.
ಹಲವಾರು ಸ್ಥಳೀಯ ಮುಸ್ಲಿಂ ಮುಖಂಡರೊಂದಿಗೆ ಈ ಕುರಿತು ಮನವಿ ಮಾಡಿರುವ ಅವರು, ಮಸೀದಿ ಕಟ್ಟಲು ಸರ್ಕಾರ ನಮಗೆ 5 ಎಕರೆ ಜಾಗವನ್ನು ನೀಡುವುದೇ ಆದರೆ ನಮಗೆ ಅನುಕೂಲವಾಗುವಂತೆ ನೀಡಬೇಕು. ಅದೂ ಸಹ ಸ್ವಾಧೀನಪಡಿಸಿಕೊಂಡ 67 ಎಕರೆ ಭೂಮಿಯಲ್ಲೇ ನೀಡಬೇಕು. ಹಾಗಿದ್ದರೆ ಮಾತ್ರ ಭೂಮಿಯನ್ನು ಪಡೆಯುತ್ತೇವೆ. ಇಲ್ಲವಾದಲ್ಲಿ, ನಾವು ಭೂಮಿಯನ್ನು ತಿರಸ್ಕರಿಸುತ್ತೇವೆ. ಚೌದಾ ಕೋಸ್‍ನಿಂದ ಹೊರಗೆ ಮಸೀದಿ ನಿರ್ಮಿಸಲು ಹೇಳುತ್ತಿದ್ದಾರೆ. ನಾವು ಈ ಪ್ರಸ್ತಾವವನ್ನು ತಿರಸ್ಕರಿಸುತ್ತೇವೆ. ಇದು ನ್ಯಾಯೋಚಿತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
Advertisement
ಮೌಲಾನಾ ಜಲಾಲ್ ಅಶ್ರಫ್ ಈ ಕುರಿತು ಪ್ರತಿಕ್ರಿಯಿಸಿ, ಮುಸ್ಲಿಮರು ತಮ್ಮ ಸ್ವಂತ ಹಣದಲ್ಲೇ ಮಸೀದಿ ನಿರ್ಮಿಸಲು ಜಾಗ ಖರೀದಿಸಬಹುದು. ಇದಕ್ಕಾಗಿ ಸರ್ಕಾರವನ್ನು ಅವಲಂಬಿಸಬೇಕಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
Advertisement
ನ್ಯಾಯಾಲಯ ಅಥವಾ ಸರ್ಕಾರ ನಮ್ಮ ಭಾವನೆಗಳನ್ನು ಸ್ವಲ್ಪ ಮಟ್ಟಿಗೆ ಸಮಾಧಾನಗೊಳಿಸಲು ಬಯಸಿದರೆ, 18ನೇ ಶತಮಾನದಲ್ಲಿ ಸೂಫಿ ಸಂತ ಖಾಜಿ ಕುದ್ವಾ ಸೇರಿದಂತೆ ಅನೇಕರ ಸ್ಮಶಾನಗಳು ಮತ್ತು ದರ್ಗಾಗಳು ಇದ್ದ ಪ್ರದೇಶದಲ್ಲಿ ಜಾಗ ನೀಡಬೇಕು ಎಂದರು. ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಖಿಲೀಕ್ ಅಹ್ಮದ್ ಖಾನ್ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಮುಸ್ಲಿಮರ ಪರವಾಗಿ ದಾವೆ ಹೂಡಿದ್ದ ಹಾಜಿ ಮಹಬೂಬ್ ಈ ಕುರಿತು ಪ್ರತಿಕ್ರಿಯಿಸಿ, ನಾವು ಈ ಲಾಲಿಪಾಪ್‍ನ್ನು ಸ್ವೀಕರಿಸುವದಿಲ್ಲ. ಸರ್ಕಾರ ಎಲ್ಲಿ ಭೂಮಿ ನೀಡಲಿದೆ ಎಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು ಆಗ್ರಹಿಸಿದರು.
ಅಯೋಧ್ಯೆ ಮುನ್ಸಿಪಲ್ ಕಾರ್ಪೋರೇಶನ್‍ನ ಕಾರ್ಪೋರೇಟರ್ ಮಾತನಾಡಿ, ಬಾಬರಿ ಮಸೀದಿಗೆ ಬದಲಾಗಿ ಸಮುದಾಯವು ಯಾವುದೇ ಭೂಮಿಯನ್ನು ಬಯಸುವುದಿಲ್ಲ. ನ್ಯಾಯಾಲಯ ಅಥವಾ ಸರ್ಕಾರ ಮಸೀದಿಗೆ ಭೂಮಿಯನ್ನು ನೀಡಲು ಬಯಸಿದರೆ ಅದನ್ನು 67 ಎಕರೆ ಭೂಮಿಯಲ್ಲೇ ನೀಡಬೇಕು. ಇಲ್ಲವಾದಲ್ಲಿ ನಮಗೆ ಯಾವುದೇ ಭೂಮಿ ಬೇಡ ಎಂದಿದ್ದರು.
ವಿವಾದಿತ ಭೂಮಿ ಸೇರಿದಂತೆ ಸುತ್ತಲಿನ 67 ಎಕರೆ ಭುಮಿಯನ್ನು ಕೇಂದ್ರ ಸರ್ಕಾರ 1991ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 2.77 ಎಕ್ರೆ ಜಾಗವನ್ನು ರಾಮಲಲ್ಲಾಗೆ ಸೇರಬೇಕು. ಮಸೀದಿಯನ್ನು ಧ್ವಂಸಗೊಳಿಸಿ ಪ್ರಾರ್ಥನೆಯ ಹಕ್ಕನ್ನು ಕಸಿದುಕೊಂಡಿದ್ದಕ್ಕೆ ಪರ್ಯಾಯವಾಗಿ ಸುನ್ನಿ ವಕ್ಫ್ ಬೋರ್ಡಿಗೆ ಅಯೋಧ್ಯೆಯಲ್ಲಿ 5 ಎಕ್ರೆ ಜಾಗವನ್ನು ನೀಡಬೇಕೆಂದು ಸುಪ್ರೀಂ ತನ್ನ ಆದೇಶದಲ್ಲಿ ತಿಳಿಸಿತ್ತು.