ಕೋಲಾರ: ಜನವರಿ 22ರಂದು ಅಯೋಧ್ಯೆ ರಾಮಮಂದಿರ (Ayodhya Ram Mandir) ಉದ್ಘಾಟನೆಗೊಳ್ಳಲಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ಪ್ರಮುಖರಿಗೆ ಆಹ್ವಾನ ಪತ್ರಿಕೆಗಳನ್ನು (Invitation) ಕೂಡ ಕಳುಹಿಸಲಾಗುತ್ತಿದೆ. ಅಂತೆಯೇ ಈ ಆಮಂತ್ರಣ ಪತ್ರಿಕೆಯು ಇದೀಗ ಕೋಲಾರದ ಅರ್ಚಕರೊಬ್ಬರ ಕೈ ಸೇರಿದೆ.
Advertisement
ಹೌದು. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಲು ಕೋಲಾರ ಮೂಲದ ಅರ್ಚಕ ರಮೇಶ್ ಭಟ್ (Ramesh Bhat) ಅವರನ್ನು ಆಹ್ವಾನಿಸಲಾಗಿದೆ. ರಮೇಶ್ ಭಟ್ ಅವರು ಕೋಲಾರ (Kolar) ಜಿಲ್ಲೆಯ ಕಲ್ಲೂರು ಗ್ರಾಮದ ನಿವಾಸಿ. ಇದೀಗ ಇವರನ್ನು ರಾಮಮಂದಿರ ಉದ್ಘಾಟನೆಯ ವೇಳೆ ಪರಿಚಾರಕ ಋತ್ವಿಕ್ ರಾಗಿ ಭಾಗವಹಿಸಲು ರಾಮಮಂದಿರ ದೇವಾಲಯ ಪ್ರತಿಷ್ಠಾಪನಾ ಸಮಿತಿಯು ಆಹ್ವಾನಿಸಿದೆ.
Advertisement
Advertisement
ರಮೇಶ್ ಭಟ್ ಅವರು ಕೋಲಾರ ನಗರದ ಆರ್.ಎಲ್ ಜಾಲಪ್ಪ ಆಸ್ಪತ್ರೆ ಆವರಣದಲ್ಲಿನ ಗಣಪತಿ ದೇಗುಲದಲ್ಲಿ ಅರ್ಚಕರಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. ಸದ್ಯ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಶಿವ-ವಿಷ್ಣು ದೇಗುಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ಒಳಗಿನ ಚಿತ್ರಣ ಹೇಗಿದೆ? ಇಲ್ಲಿದೆ ಕೆಲವು ಫೋಟೋಸ್