– ಫೋನ್ ಪರಿಶೀಲಿಸಿದಾಗ ಮತ್ತಷ್ಟು ವೀಡಿಯೋಗಳು ಪತ್ತೆ
ಅಯೋಧ್ಯೆ: ಶ್ರೀ ರಾಮಮಂದಿರ (Ram Mandir) ಸ್ಥಾಪಿತವಾಗಿರುವ ಅಯೋಧ್ಯೆಯಲ್ಲಿ ಪಾಪದ ಕೆಲಸ ನಡೆದಿದೆ. ಹೌದು ಶ್ರೀರಾಮಮಂದಿರದ ಬಳಿಯ ಅತಿಥಿ ಗೃಹದಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಹೋಟೆಲ್ ಉದ್ಯೋಗಿಯೊಬ್ಬ (Ayodhya Hotel Staff) ರೆಡ್‌ಹ್ಯಾಂಡಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ರಾಮ ಮಂದಿರದ ಗೇಟ್ ಸಂಖ್ಯೆ 3 ರಿಂದ ಕೇವಲ 50 ಮೀಟರ್ ದೂರದಲ್ಲಿರುವ ರಾಜಾ ಗೆಸ್ಟ್ ಹೌಸ್‌ನಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬಹ್ರೈಚ್ ಜಿಲ್ಲೆಯ ನಿವಾಸಿ ಸೌರಭ್ ತಿವಾರಿ (25) ಬಂಧಿತ ಆರೋಪಿ. ಆತನ ಮೊಬೈಲ್ ಪರಿಶೀಲಿಸಿದಾಗ ಅದೇ ರೀತಿ ಇನ್ನಷ್ಟು ಮಹಿಳೆಯರ ವಿಡಿಯೋಗಳು ಪತ್ತೆಯಾಗಿರುವುದನ್ನು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಗಂಡನನ್ನ ಕೊಂದು ಡ್ರಮ್‌ಗೆ ತುಂಬಿದ್ದ ಮುಸ್ಕಾನ್ ಈಗ ಗರ್ಭಿಣಿ – ಜೈಲಿನಲ್ಲಿ ವಿಶೇಷ ಸೌಲಭ್ಯ
ರಾಜಾ ಗೆಸ್ಟ್‌ಹೌಸ್‌ನಲ್ಲಿದ್ದ ಅತಿಥಿಗಳ ಪೈಕಿ ಮಹಿಳೆಯೊಬ್ಬರು ಸ್ನಾನಕ್ಕೆ ತೆರಳಿದ್ದರು, ಈ ವೇಳೆ ವ್ಯಕ್ತಿಯೊಬ್ಬರ ನೆರಳನ್ನು ಗಮನಿಸಿದ್ದಾರೆ, ಬಳಿಕ ಟಿನ್ ಶೆಡ್ ಛಾವಣಿಯಿಂದ ಯಾರೋ ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ. ಬಳಿಕ ಆಕೆ ಸಹಾಯಕ್ಕಾಗಿ ಚೀರಿದ್ದಾಳೆ, ಕೂಡಲೇ ಹೋಟೆಲ್‌ನಲ್ಲಿದ್ದ ಪುರುಷರು ಸ್ಥಳಕ್ಕೆ ಧಾವಿಸಿ, ವಿಡಿಯೋ ಮಾಡುತ್ತಿದ್ದವನನ್ನ ಹಿಡಿದು ರಾಮಜನ್ಮಭೂಮಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಆರೋಪಿಯ ಫೋನ್ ಪರಿಶೀಲಿಸಿದಾಗ ಇದೇ ರೀತಿ ಹಲವು ಮಹಿಳೆಯರ ವಿಡಿಯೋಗಳು ಪತ್ತೆಯಾಗಿದೆ. ಸದ್ಯ ಆರೋಪಿಯುನ್ನ ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ರಾಣಾಗೆ 14×14 ಅಡಿಯ ಸೆಲ್ – ದಿನದ 24 ಗಂಟೆಯೂ ನಿಗಾ; ಸೆಲ್‌ನಲ್ಲೇ ಊಟ
ಗೆಸ್ಟ್ ಹೌಸ್‌ಗೆ ಸೀಲ್:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ಅತಿಥಿ ಗೃಹಕ್ಕೆ ಸೀಲ್ ಹಾಕಿದೆ. ಇನ್ನೂ ಈ ಕುರಿತು ಮಾತನಾಡಿರುವ ಎಡಿಎ ಕಾರ್ಯದರ್ಶಿ ಸತ್ಯೇಂದ್ರ ಸಿಂಗ್ ಮಾತನಾಡಿ, ರಾಜಾ ಅತಿಥಿ ಗೃಹವನ್ನು ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ನಿರ್ಮಿಸಲಾಗಿದೆ. ಆದ್ದರಿಂದ ಸೀಲ್ ಮಾಡಲಾಗಿದೆ. ಅದೇ ಸಂಸ್ಥೆಯಲ್ಲಿ ಇಂತಹ ಇನ್ನಷ್ಟು ಘಟನೆಗಳು ನಡೆದಿವೆಯೇ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲಾಗಿದೆಯೇ ಎನ್ನುವ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ತಹವ್ವೂರ್ ರಾಣಾ ಹಸ್ತಾಂತರವು ಮುಂಬೈ ದಾಳಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ದೊಡ್ಡ ಹೆಜ್ಜೆ : ಜೈಶಂಕರ್